ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾಗಡಿಯ ಯುವತಿಯನ್ನು ಸಿನಿಮಾಗಳಲ್ಲಿ ಚಾನ್ಸ್ ಕೊಡಿಸುವ ಪ್ರಲೋಬನೆಯೊಡ್ಡಿ ಪುನೀತ್ ರಾಯ್ ದೈಹಿಕ ಸಂಬಂಧ ಬೆಳೆಸಿದ್ದಾನೆ. ಹಲವು ಬಾರಿ ಲೈಂಗಿಕವಾಗಿ ಆಕೆಯನ್ನು ಬಳಸಿಕೊಂಡಿದ್ದಾನೆ. ಯುವತಿ ಗರ್ಭವತಿಯಾದಾಗ ಕೈಬಿಟ್ಟಿದ್ದಾನೆ.

ತುಮಕೂರು(ಜೂನ್ 20): ಬಣ್ಣದ ಲೋಕಕ್ಕೆ ಮಾರುಹೋಗುತ್ತಿರುವ ಯುವತಿಯರೇ ನೀವು ಈ ಸ್ಟೋರಿ ನೋಡಲೇಬೇಕು. ತುಮಕೂರಿನ ಕಿಚ್ಚ ಸುದೀಪ್ ಅಭಿಮಾನಿ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಕಾಮುಕ ಪುನಿತ್ ರಾಯ್'ನ ಈ ಕಥೆ ಕೇಳಿದರೆ ರಾಜ್ಯದ ಹೆಣ್ಣು ಮಕ್ಕಳ ರಕ್ತ ಕುದಿಯುತ್ತೆ. ಈತನ ಕಾಮದ ಬಿಸಿಗೆ ಬಲಿಯಾದ ತುಮಕೂರಿನ ಯುವತಿಯರ ಲಿಸ್ಟ್ ಕೇಳಿದರೆ ನೀವು ಬೆಚ್ಚಿ ಬೀಳ್ತೀರಿ.. ರಾಮನಗರ ಜಿಲ್ಲೆಯ ಮಾಗಡಿಯ ಹುಡುಗಿಯೊಬ್ಬಳು ಪುನೀತ್ ಆರ್ಯನಿಂದ ವಂಚನೆಗೆ ಒಳಗಾದ ಪ್ರಕರಣ ಬೆಳಕಿಗೆ ಬಂದಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾಗಡಿಯ ಯುವತಿಯನ್ನು ಸಿನಿಮಾಗಳಲ್ಲಿ ಚಾನ್ಸ್ ಕೊಡಿಸುವ ಪ್ರಲೋಬನೆಯೊಡ್ಡಿ ಪುನೀತ್ ರಾಯ್ ದೈಹಿಕ ಸಂಬಂಧ ಬೆಳೆಸಿದ್ದಾನೆ. ಹಲವು ಬಾರಿ ಲೈಂಗಿಕವಾಗಿ ಆಕೆಯನ್ನು ಬಳಸಿಕೊಂಡಿದ್ದಾನೆ. ಯುವತಿ ಗರ್ಭವತಿಯಾದಾಗ ಕೈಬಿಟ್ಟಿದ್ದಾನೆ. ಯುವತಿಯು ಪ್ರಕರಣ ದಾಖಲಿಸಿದಾಗ 1 ಲಕ್ಷ ರೂ ಪರಿಹಾರ ಕೊಡುವುದಾಗಿ ಸುಳ್ಳು ಭರವಸೆ ನೀಡಿದ್ದಾನೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ. ಮೋಸಕ್ಕೊಳಗಾದ ಯುವತಿಯು ಇದೀಗ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾಳೆ.

ಸುದೀಪ್'ನ ದೊಡ್ಡ ಫ್ಯಾನ್ ಎಂದು ಹೇಳಿಕೊಳ್ಳುವ ಪುನೀತ್ ರಾಯ್'ನ ಕಾಮಪುರಾಣ ತೋರಿಸುವ ಇನ್ನೂ ಹಲವು ಪ್ರಕರಣಗಳಿವೆಯಂತೆ. ತುಮಕೂರಿನ ಅನೇಕ ಹುಡುಗಿಯರಿಗೆ ಈತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆನ್ನುವ ಆರೋಪವಿದೆ. ಪ್ರೀತಿ-ಪ್ರೇಮದ ಹೆಸರಿನಲ್ಲಿ ಹುಡುಗಿಯರನ್ನು ಸೆಳೆದು, ಸೆಕ್ಸ್ ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್'ಮೇಲ್ ಮಾಡಿ ಲೈಂಗಿಕ ಹಲ್ಲೆ ನಡೆಸುತ್ತಾನೆನ್ನಲಾಗುತ್ತಿದೆ.