ಇದಾದ ಕ್ಷಣಾರ್ಧದಲ್ಲೇ ಬೆಂಕಿ ಇಡೀ ಕಾರಿಗೆ ವ್ಯಾಪಿಸಿದೆ. ಅದೃಷ್ಟವಶಾತ್ ಕಾರಿನ ಪೆಟ್ರೋಲ್ ಟ್ಯಾಂಕ್'ಗೆ ಬೆಂಕಿ ತಗುಲುವ ಮುನ್ನವೇ ಸ್ಥಳೀಯರ ಕಾರ್ಯಚರಣೆಯಿಂದ ಭಾರೀ ದುರಂತ ತಪ್ಪಿದಂತಾಗಿದೆ.

ಕಲಬುರಗಿ(ಜ.23): ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಏಕಾಏಕಿ ಬೆಂಕಿ ತಗುಲಿ ಕ್ಷಣಾರ್ಧದಲ್ಲೇ ಸುಟ್ಟು ಭಸ್ಮವಾದ ಘಟನೆ ಕಲಬುರಗಿ ನಗರದ ಬಿದ್ದಾಪುರ ಕಾಲೋನಿಯಲ್ಲಿ ನಡೆದಿದೆ.

ನಿತಿನ್ ಎಂಬುವವರಿಗೆ ಸೇರಿದ ಕಾರಿನ ಮುಂಬಾಗದ ಗಾಜಿನ ವೈಪರ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಇದಾದ ಕ್ಷಣಾರ್ಧದಲ್ಲೇ ಬೆಂಕಿ ಇಡೀ ಕಾರಿಗೆ ವ್ಯಾಪಿಸಿದೆ. ಅದೃಷ್ಟವಶಾತ್ ಕಾರಿನ ಪೆಟ್ರೋಲ್ ಟ್ಯಾಂಕ್'ಗೆ ಬೆಂಕಿ ತಗುಲುವ ಮುನ್ನವೇ ಸ್ಥಳೀಯರ ಕಾರ್ಯಚರಣೆಯಿಂದ ಭಾರೀ ದುರಂತ ತಪ್ಪಿದಂತಾಗಿದೆ.

ಕಾರಿನಲ್ಲಿದ್ದ ಮದುವೆಯ ಬಟ್ಟೆ ಹಾಗೂ ಆಮಂತ್ರಣ ಪತ್ರಿಕೆಗಳು ಸುಟ್ಟು ಭಸ್ಮವಾಗಿವೆ. ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.