21 ಸೆಕೆಂಡ್ ವಿಡಿಯೋ ಕೋಲಾಹಲ, ಸನ್ಯಾಸಿನಿಗೆ ಕಾಮ ಪ್ರಚೋದನೆ ಯತ್ನಿಸಿದ ವಿದ್ಯಾರ್ಥಿಗಳ ಗುಂಪು, ಯುವ ಸಮೂಹದ ಅಸಭ್ಯವಾಗಿ ಕಾಮಪ್ರಚೋದಕತೆ ಮಾಡುತ್ತಿರುವ ದೃಶ್ಯ ಭಾರಿ ವಿರೋಧಕ್ಕೆ ಕಾರಣವಾಗಿದೆ. ಏನಿದು 21 ಸೆಕೆಂಡ್ ವಿಡಿಯೋ? 

ಪಾಟ್ನಾ (ಫೆ.15) ಯುವ ಸಮೂಹದಲ್ಲಿ ಕಾಣುತ್ತಿರುವ ನೈತಿಕ ಅಧಃಪತನಕ್ಕೆ ಮತ್ತೊಂದು ಸ್ಪಷ್ಟ ನಿದರ್ಶನ ದಾಖಲಾಗಿದೆ. ಮೀಸೆ ಚಿಗಿರುದ ಯುವ ವಿದ್ಯಾರ್ಥಿಗಳ ಮಾತು, ಪ್ರಚೋದನೆ, ಅಸಭ್ಯ ಮಾತುಗಳಿಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. 21 ಸೆಕೆಂಡ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾ , ವ್ಯಾಟ್ಸಾಪ್ ಸೇರಿದಂತೆ ಹಲವು ತಾಣಗಳಲ್ಲಿ ಹರಿದಾಡುತ್ತಿದೆ. ವಿದ್ಯಾರ್ಥಿಗಳ ಗುಂಪು ಶಾಲೆಯ ಕ್ರೈಸ್ತಾ ಸನ್ಯಾಸಿನಿಗೆ ಕಾಮ ಪ್ರಚೋದನೆ, ನೀಲಿ ಚಿತ್ರಕ್ಕೆ ಪ್ರಚೋದನೆ ನೀಡುತ್ತಿರುವ ವಿಡಿಯೋ ಕೋಲಾಹಲ ಸೃಷ್ಟಿಸಿದೆ. ವಿದ್ಯಾರ್ಥಿಗಳು ಹಾಸ್ಯ, ತಮಾಷೆ ಹೆಸರಿನಲ್ಲಿ ಮಾತನಾಡುತ್ತಿರುವ ಅಸಭ್ಯ ವಿಚಾರಗಳು ಅಮಾನವೀಯ ಎಂದು ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

Add Asianetnews Kannada as a Preferred SourcegooglePreferred

21 ಸೆಕೆಂಡ್ ವಿಡಿಯೋದಲ್ಲಿ ಏನಿದೆ?

ಶಾಲಾ ಮೈದಾನದಲ್ಲಿ ಕ್ರೈಸ್ತ ಸನ್ಯಾನಿಸಿ (ಟೀಚರ್ ) ವಿದ್ಯಾರ್ಥಿಗಳನ್ನು ನಿಯಂತ್ರಿಸುವ ದೃಶ್ಯವಿದೆ. ವಿದ್ಯಾರ್ಥಿಗಳ ಹೆಸರು ಹೇಳಿ ಕರೆದು ಇತ್ತ ಬರವವಂತೆ ಸೇರಿದಂತೆ ಕೆಲ ಸೂಚನೆ ನೀಡುತ್ತಿದ್ದಾರೆ. ಇದೇ ವೇಳೆ ಕೆಲ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಾ ಡಾರ್ಕ್ ಹ್ಯೂಮರ್ (ಕಟು ಹಾಸ್ಯ) ಮಾತುಗಳನ್ನು ಆಡಿದ್ದಾರೆ. ಕ್ರೈಸ್ತ ಸನ್ಯಾನಿಸಿ ಬಳಿ ತೆರಳಿ, ಸಿಸ್ಟರ್, ಸಿಸ್ಟರ್, ನೀವು ಬ್ರಾಜರ್ಸ್ ((Brazzers ಖ್ಯಾತ ನೀಲಿ ಚಿತ್ರಗಳ ಸಂಸ್ಥೆ) ಪರ ಆಡುತ್ತೀರಾ? ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ವಿದ್ಯಾರ್ಥಿಗಳ ಅಸಭ್ಯ ವರ್ತನೆ ನಿಂತಿಲ್ಲ. ನಿಮ್ ತಂಡದಲ್ಲಿ ಜಾನಿ ಸಿನ್ಸ್, ಮಿಯಾ ಕಲೀಫಾ ಸೇರಿದಂತೆ ಹಲವರು ಇರುತ್ತಾರೆ ಎಂದು ಕಾಮ ಪ್ರಚೋದನೆಗೆ ಯತ್ನಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಈ ಮಾತಗಳನ್ನು ಹೇಳುತ್ತಿದ್ದಂತೆ ಕ್ರೈಸ್ತ ಸನ್ಯಾನಿಸಿ ರೆಕಾರ್ಡ್ ವಿಡಿಯೋದತ್ತ ಕೈ ಬೀಸುತ್ತಾರೆ. ಈ ವೇಳೆ ವಿಡಿಯೋ ಆಫ್ ಆಗಿದೆ.

Scroll to load tweet…

ಈ ಘಟನೆ ನಡೆದಿರುವುದು ಬಿಹಾರದ ಜಮುಯಿ ಜಿಲ್ಲೆಯ ಝಝಾದಲ್ಲಿರುವ ಸೆಂಟ್ ಜೊಸೆಫ್ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿಗಳ ಗುಂಪು ಸಲೀಸಾಲಾಗಿ ನೀಲಿ ಚಿತ್ರ ತಾರೆ ಸಂಸ್ಥೆ, ನೀಲಿ ಚಿತ್ರ ತಾರೆಯರ ಹೆಸರು ಸೇರಿದಂತೆ ಹಲವು ವಿಚಾರಗಳನ್ನು ಕ್ರೈಸ್ತ ಸನ್ಯಾಸಿನಿ ಬಳಿ ಹೇಳುತ್ತಿದ್ದಾರೆ. ಇದು ಅಸಭ್ಯತೆ ಪ್ರದರ್ಶನವಾಗಿದೆ. ಯುವ ಸಮೂಹ ಪೋರ್ನ್ ಸೇರಿದಂತೆ ಹಲವು ಅಶ್ಲೀಲ ವಿಡಿಯೋಗಳಿಗೆ ಅಡಿಕ್ಟ್ ಆಗಿದ್ದಾರೆ. ಮಕ್ಕಳು ಸಂಸ್ಕಾರ ಇಲ್ಲದೆ ಬೆಳೆದರ ಹೀಗೆ ಆಗುತ್ತದೆ. ಸೋಶಿಯಲ್ ಮೀಡಿಯಾ ಪ್ರಭಾವಗಳಿಂದ ಸಮಾಜ, ಹೆಣ್ಣುಮಕ್ಕಳು, ಹಿರಿಯರನ್ನು ಅಗೌರವದಿಂದ ನೋಡುವ ಮಟ್ಟಕ್ಕೆ ಬೆಳೆದಿದ್ದಾರೆ. ಈ 21 ಸೆಕೆಂಡ್ ವಿಡಿಯೋ ಸಣ್ಣ ಉದಾಹರಣೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗೆ ದೂರು

ಈ ವಿಡಿಯೋ ವೈರಲ್ ಆಗುತ್ತಿದ್ದೆ ಸಾಮಾಜಿಕ ಕಾರ್ಯಕರ್ತ ಸೂರಜ್ ಬರ್ನವಾಲ್ ಜಮುಯಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಇತ್ತ ಜಿಲ್ಲಾಧಿಕಾರಿಗಳು ಈ ಕುರಿತು ತನಿಖೆಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಇಲ್ಲಿ ವಿದ್ಯಾರ್ಥಿಗಳು ಅಪ್ರಾಪ್ತರಾಗಿರುವ ಕಾರಣ ಜುವೆನೆಲ್ ನೆರವು ಪಡೆಯುವ ಸಾಧ್ಯತೆ ಇದೆ. ಇತ್ತ ಶಾಲಾ ಆಡಳಿತ ಮಂಡಳಿ ಈ ಕುರಿತು ಆಂತರಿಕ ತನಿಖೆ ನಡೆಸಲು ಸೂಚಿಸುವ ಸಾಧ್ಯತೆ ಇದೆ. ಇದೇ ವೇಳೆ ಕಾರ್ಯಕರ್ತ ಸೂರಜ್, ಶಾಲಾ ಆಡಳಿತ ಮಂಡಳಿಯಲ್ಲಿನ ಅಶಿಸ್ತು ಇದಕ್ಕೆ ಒಂದ ಕಾರಣವಾಗಿದೆ. ಹೀಗಾಗಿ ಆಡಳಿತ ಮಂಡಳಿ ವಿರುದ್ದವೂ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.