ಅಪರಿಚಿತನ ಮೇಲೆ ಉಕ್ಕಿದ ಪ್ರೀತಿ..ಮುಖವೆಲ್ಲ ರಕ್ತಸಿಕ್ತ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 19, Jul 2018, 6:18 PM IST
Subway train evacuated after Chinese woman bites man China
Highlights

ಆಕೆ ಇದ್ದಕ್ಕಿದ್ದಂತೆ ಆತನ ಮೇಲೆ ದಾಳಿ ಮಾಡಿದ್ದಳು. ರಕ್ತ ಬರುವಂತೆ ಕಚ್ಚಿದ್ದಳು.. ಕಾರಣ ಗೊತ್ತಿಲ್ಲ. ಆಕೆಗೂ-ಆತನಿಗೂ ಯಾವುದೇ ಸಂಬಂಧ ಇಲ್ಲ. ಇದೇನಿದು ಘಟನೆ..?

ಬೀಜಿಂಗ್[ಜು19] ರೈಲೊಂದರಲ್ಲಿ ಸುಮ್ಮನೆ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕನ ಮೇಲೆ ಮಹಿಳೆ ಎರಗಿದ್ದಳು. ಆಕೆಯನ್ನು ಬಿಡಿಸಿ ದಾಳಿಗೊಳಗಾದವನ್ನು ಆಸ್ಪತ್ರೆಗೆ ಸೇರಿಸಲು ರೈಲನ್ನೇ ನಿಲ್ಲಿಸಬೇಕಾಯಿತು.

ನೈರುತ್ಯ ಚೀನಾದಲ್ಲಿ ಇಂಥದ್ದೊಂದು ಪ್ರಕರಣ ನಡೆದು ಹೋಗಿದೆ. ಮಹಿಳೆ ಅದು ಯಾವ ಕಾರಣಕ್ಕೆ ಹಾಗೆ ಮಾಡಿದಳೋ ಗೊತ್ತಿಲ್ಲ. ಮಹಿಳೆಯ ದಾಳಿಗೆ ಒಳಗಾದವನ ಮುಖವೆಲ್ಲ ರಕ್ತ ಸಿಕ್ತ.

ಮಹಿಳೆಯನ್ನು ಬಂಧಿಸಿರುವ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥಳಂತೆ ಕಂಡು ಬಂದಿದ್ದು ಬಿಡಿಸಿದ ನಂತರ ಅಳುತ್ತ ತನ್ನ ಬಟ್ಟೆ ಹರಿದುಕೊಳ್ಳಲು ಮುಂದಾಗಿದ್ದಳು.

 

loader