ನವದೆಹಲಿ(ಜ.05): ನಾನು ಬ್ರಾಹ್ಮಣ ಎಂದು ಹೇಳಿಕೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ತ್ಯಾಗಿಯೂ ಅಲ್ಲದ, ಜ್ಞಾನಿಯೂ ಅಲ್ಲದ ರಾಹುಲ್‌ ಗಾಂಧಿ ಬ್ರಾಹ್ಮಣ ಹೇಗಾಗುತ್ತಾರೆ ಎಂದು ಸ್ವಾಮಿ ಪ್ರಶ್ನಿಸಿದ್ದಾರೆ. 

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸ್ವಾಮಿ, ಬ್ರಾಹ್ಮಣನಾದವನಿಗೆ ಉಪನಯನ ಆಗಿರಬೇಕಾಗುತ್ತದೆ. ಆಗ ಮಾತ್ರ ದ್ವಿಜ ಎನಿಸಿಕೊಳ್ಳುತ್ತಾನೆ. ಬ್ರಾಹ್ಮಣ ಏಕಾಏಕಿ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬ್ರಾಹ್ಮಣನಾದವನು ಜ್ಞಾನಿಯೂ , ತ್ಯಾಗಿಯೂ ಆಗಿರಬೇಕಾಗುತ್ತದೆ. ರಾಹುಲ್‌ ಜ್ಞಾನಿಯೂ ಅಲ್ಲ, ತ್ಯಾಗಿಯೂ ಅಲ್ಲ. ರಾಹುಲ್ ಗಾಂಧಿ ಹಿಂದೂ ಧರ್ಮವನ್ನು ತಮಾಷೆಯಾಗಿ ನೋಡುತ್ತಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದಾರೆ.