90ರ ದಶಕದಲ್ಲಿ ತಮಿಳುನಾಡಿನಲ್ಲಿ ದಿವಂಗತ ಜೆ.ಜಯಲಲಿತಾರವರು ಸಿಎಂ ಆಗಿ ಮೆರೆಯುತ್ತಿದ್ದ ಕಾಲವದು. 1991ರಲ್ಲಿ ಮೊದಲ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಅಪಾರ ಪ್ರಮಾಣದಲ್ಲಿ ಜಯಲಲಿತಾರವರು ಅಕ್ರಮ ಸಂಪಾದಿಸಿದ್ದಾರೆಂಬ ದೂರೊಂದು ದಾಖಲಾಗಿತ್ತು. ಹೀಗೆ, ದೂರು ನೀಡಿದ್ದವರು ಬೇರಾರೂ ಅಲ್ಲ, ಇದೇ ಸುಬ್ರಮಣಿಯನ್ ಸ್ವಾಮಿ.
ಚೆನ್ನೈ(ಫೆ.15): ಅದು ಸತತ 21 ವರ್ಷಗಳ ಹೋರಾಟ. ಆ ಹೋರಾಟಕ್ಕೆ ಜಯ ಸಿಕ್ಕಿದ್ದು ಫೆಬ್ರವರಿ 14-2017ರಂದು. ಆ ಒಂದು ಖಾಸಗಿ ದೂರು ತಮಿಳುನಾಡಿನಲ್ಲಿ ಹಲವು ಭಾರಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿಬಿಟ್ಟಿದೆ. ಹಾಗಾದ್ರೆ, ಆ ಕೇಸ್ ಹಾಗೂ ಅದರ ಹಿಂದಿರುವ ವ್ಯಕ್ತಿ ಯಾರು ಗೊತ್ತೆ. ಅವರು ಮತ್ತಿನ್ನಾರು ಅಲ್ಲ ಅಂದಿನ ಜನತಾ ಪಾರ್ಟಿ ಅಧ್ಯಕ್ಷ ಹಾಗೂ ಇಂದಿನ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ.
90ರ ದಶಕದಲ್ಲಿ ತಮಿಳುನಾಡಿನಲ್ಲಿ ದಿವಂಗತ ಜೆ.ಜಯಲಲಿತಾರವರು ಸಿಎಂ ಆಗಿ ಮೆರೆಯುತ್ತಿದ್ದ ಕಾಲವದು. 1991ರಲ್ಲಿ ಮೊದಲ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಅಪಾರ ಪ್ರಮಾಣದಲ್ಲಿ ಜಯಲಲಿತಾರವರು ಅಕ್ರಮ ಸಂಪಾದಿಸಿದ್ದಾರೆಂಬ ದೂರೊಂದು ದಾಖಲಾಗಿತ್ತು. ಹೀಗೆ, ದೂರು ನೀಡಿದ್ದವರು ಬೇರಾರೂ ಅಲ್ಲ, ಇದೇ ಸುಬ್ರಮಣಿಯನ್ ಸ್ವಾಮಿ.
ಚೆನ್ನೈನ ಸೆಷನ್ಸ್ ನ್ಯಾಯಾಲಯದಲ್ಲಿ ಜೂನ್ 14, 1996ರಂದು ಸುಬ್ರಮಣಿಯನ್ ಸ್ವಾಮಿ, ಜಯಲಲಿತಾ ಸೇರಿ ಮೂವರ ವಿರುದ್ಧ ಸಿಆರ್ ಪಿಸಿ ಸೆಕ್ಷನ್ 200ರ ಅಡಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿದ್ರು. ಬಳಿಕ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17 ಹಾಗೂ ಸಿಆರ್ ಪಿಸಿ 202ರ ಅಡಿಯಲ್ಲಿ ನ್ಯಾಯಾಲಯ ತನಿಖೆಗೆ ಆದೇಶಿಸಿ, 2 ತಿಂಗಳ ಒಳಗಾಗಿ ವರದಿ ನೀಡುವಂತೆ ರಾಜ್ಯ ಪೊಲೀಸರಿಗೆ ಆದೇಶಿಸಿತ್ತು.
ತಡೆಕೋರಿಕೋರ್ಟ್ಮೆಟ್ಟಿಲೇರಿದ್ದಜಯಾ, ಶಶಿಕಲಾ: ಸುಬ್ರಮಣಿಯನ್ ಸ್ವಾಮಿ ದಾಖಲಿಸಿದ್ದ ಕೇಸ್'ಗೆ ತಡೆಯಾಜ್ಞೆ ನೀಡುವಂತೆ ಜಯಲಲಿತಾ ಹಾಗೂ ಶಶಿಕಲಾ ಸೆಪ್ಟೆಂಬರ್ 1996ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಮದ್ರಾಸ್ ಹೈಕೋರ್ಟ್ ಮಾತ್ರ ಪ್ರಕರಣವನ್ನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರ್ಗಾವಣೆ ಮಾಡಿತ್ತು.
ಪ್ರಕರಣ ತನಿಖೆ ನಡೆಸಿದ ತಮಿಳುನಾಡು ಭ್ರಷ್ಟಾಚಾರ ನಿಗ್ರಹ ದಳ, ಜಯಲಲಿತಾ, ಶಶಿಕಲಾ ಸೇರಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿತ್ತು, ಇಲ್ಲಿಂದ ಶುರುವಾದ ಅಕ್ರಮ ಆಸ್ತಿ ಕಂಟಕ, ದಿವಂಗತ ಜಯಲಲಿತಾ ಹಾಗೂ ಶಶಿಕಲಾರನ್ನ ಬೆಂಬಿಡದೆ ಕಾಡುತ್ತಲೇ ಬಂದಿದೆ. ಇದಕ್ಕೆ ಮುಖ್ಯ ಸೂತ್ರದಾರ ಸ್ವಾಮಿಯವರೆ.
ಇದೀಗ, ಆಶ್ಚರ್ಯಕರ ಸುದ್ದಿಯೆಂದರೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ವಿರುದ್ಧವೇ ದೂರು ದಾಖಲಿಸಿದ್ದ ಸ್ವಾಮಿ, ತಮಿಳುನಾಡಿನಲ್ಲಿ ಚಿನ್ನಮ್ಮ ಮುಖ್ಯಮಂತ್ರಿಯಾಗಲು ಹೊರಟಾಗ ಅವರ ಬೆನ್ನಿಗೆ ನಿಂತಿದ್ದರು. ಗವರ್ನರ್ ವಿರುದ್ಧವೇ ಗುಡುಗಿದ್ದ ಸ್ವಾಮಿ, ಸಂವಿಧಾನದ ಪ್ರಕಾರ ಶಶಿಕಲಾರಿಗೂ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು.
