ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಮತ್ತು ಅವರ ಒಡೆತನದ ಕಂಪನಿ 21 ವಿದೇಶಿ ಬ್ಯಾಂಕುಗಳಲ್ಲಿ ಗೌಪ್ಯ ಖಾತೆಗಳನ್ನು ಹೊಂದಿದೆ. ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಎಂದು ಪ್ರಧಾನಿ ಮೋದಿಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೇಳಿಕೊಂಡಿದ್ದಾರೆ.
ನವದೆಹಲಿ (ಫೆ.20): ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಮತ್ತು ಅವರ ಒಡೆತನದ ಕಂಪನಿ 21 ವಿದೇಶಿ ಬ್ಯಾಂಕುಗಳಲ್ಲಿ ಗೌಪ್ಯ ಖಾತೆಗಳನ್ನು ಹೊಂದಿದೆ. ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಎಂದು ಪ್ರಧಾನಿ ಮೋದಿಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೇಳಿಕೊಂಡಿದ್ದಾರೆ.
ಕಾರ್ತಿ ಚಿದಂಬರಂ ಒಡೆತನದ ಕಂಪನಿ 21 ವಿದೇಶಿ ಬ್ಯಾಂಕುಗಳ ಜೊತೆ ಖಾತೆಗಳನ್ನು ಹೊಂದಿರುವ ಬಗ್ಗೆ ಮಾಹಿತಿ ನೀಡಿದ್ದು, ಅದಾಗ್ಯೂ ವಿತ್ತ ಸಚಿವಾಲಯ ಹಾಗೂ ತೆರಿಗೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಿಬಿಐ, ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡು ತಾರ್ಕಿಕ ಅಂತ್ಯ ನೀಡಲು ವಿಫಲವಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ವಿತ್ತ ಸಚಿವಾಲಯದಲ್ಲಿರುವ ಚಿದಂಬರಂ ಸ್ನೇಹಿತರ ಒತ್ತಡಕ್ಕೆ ಮಣಿದು ಆದಾಯ ತೆರಿಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ವಾಮಿ ಆರೋಪಿಸಿದ್ದಾರೆ. ಜಾರಿ ನಿರ್ದೇಶನಾಲಯ ಕಳುಹಿಸಿರುವ 3 ಸಮನ್ಸ್ ಆದೇಶಗಳಿಗೆ ಪ್ರತಿಕ್ರಿಯಿಸಲು ಕಾರ್ತಿ ಚಿದಂಬರಂ ನಿರಾಕರಿಸಿದ್ದಾರೆ.
