ಸರ್ಕಾರದ ಅಡ್ವೋಕೇಟ್ ಜನರಲ್ ಹಾಗೂ ಸಾಲಿಸಿಟರ್ ಜನರಲ್’ಗಳು  ತಮ್ಮ ವೃತ್ತಿಯನ್ನು ಮುಂದುವರೆಸಬಹುದಾದರೆ, ಸಿಧು ಏಕೆ ತಮ್ಮ ವೃತ್ತಿಯನ್ನು ಮುಂದುವರೆಸಬಾರದು ಎಂದು ಸ್ವಾಮಿ ಪ್ರಶ್ನಿಸಿದ್ದಾರೆ.

ನವದೆಹಲಿ (ಮಾ.24): ಟಿವಿ ಶೋನಲ್ಲಿ ಕಾಣಿಸಿಕೊಳ್ಲೂವ ವಿಚಾರದಲ್ಲಿ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರ ಬೆಂಬಲಕ್ಕೆ ನಿಂತಿದ್ದಾರೆ.

ಸರ್ಕಾರದ ಅಡ್ವೋಕೇಟ್ ಜನರಲ್ ಹಾಗೂ ಸಾಲಿಸಿಟರ್ ಜನರಲ್’ಗಳು ತಮ್ಮ ವೃತ್ತಿಯನ್ನು ಮುಂದುವರೆಸಬಹುದಾದರೆ, ಸಿಧು ಏಕೆ ತಮ್ಮ ವೃತ್ತಿಯನ್ನು ಮುಂದುವರೆಸಬಾರದು ಎಂದು ಸ್ವಾಮಿ ಪ್ರಶ್ನಿಸಿದ್ದಾರೆ.

Scroll to load tweet…

ತಮ್ಮ ಕಕ್ಷಿದಾರರು ಸರ್ಕಾರದ ವಿರುದ್ಧವಾಗಿದ್ದರೂ ಅಡ್ವೋಕೇಟ್ ಜನರಲ್ ಹಾಗೂ ಸಾಲಿಸಿಟರ್ ಜನರಲ್’ಗಳು ಅವರಿಗಾಗಿ ನ್ಯಾಯಾಲಯದಲ್ಲಿ ಹಾಜರಾಗುತ್ತಾರೆ, ಸಿಧು ವಿಚಾರದಲ್ಲಿ ಏಕೆ ದ್ವಂದ್ವ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಟ್ವೀಟರ್’ನಲ್ಲಿ ಪ್ರಶ್ನಿಸಿದ್ದಾರೆ.

ಪಂಜಾಬ್’ನ ನೂತನ ಸರ್ಕಾರದಲ್ಲಿ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಸಿಧು, ಟಿವಿ ಕಾಮಿಡಿ ಶೋವೊಂದರಲ್ಲಿ ಕೆಲಸ ಮಾಡುವುದನ್ನು ಮುಂದುವರೆಯಬಯಸಿದ್ದರು. ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಈ ಕುರಿತು ಕಾನೂನು ಸಲಹೆ ಪಡೆದಿದ್ದು, ಅಡ್ವೋಕೇಟ್ ಜನರಲ್ ಅತುಲ್ ನಂದಾ ನಿನ್ನೆ ತಮ್ ಅಭಿಪ್ರಾಯವನ್ನು ಪಂಜಾಬ್ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಸಿಧು ಸಚಿವನಾಗಿ ಟಿವಿ ಶೋ ಗಳಲ್ಲಿ ಭಾಗವಹಿಸಲು ಯಾವುದೇ ಕಾನೂನಾತ್ಮಕ ತೊಡಕು ಇಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಲಾಗಿದೆ.