ಬೀದರ್ನಲ್ಲೊಬ್ಬ ಟೈಟ್ ಮಾಸ್ತರ್ | ಶಾಲೆ ಗುಂಡು ಹೊಡೆದು ಬರ್ತಾನೆ ಈ ಶಿಕ್ಷಕ !ಪಾಠ ಹೇಳಲ್ಲ.. ಬಾಯಿಗೆ ಬಂದಂತೆ ಬೈತಾನೆ! ಮಕ್ಕಳ ಮುಂದೆ ಅವಾಚ್ಯವಾಗಿ ಮಾತಾಡುವ ಶಿಕ್ಷಕಕುಡಿದ ಮತ್ತಿನಲ್ಲಿ ಊರವರಿಗೆಲ್ಲಾ ಬೈತಾನೆ ! ಗೂಂಡಾಗಳನ್ನು ಕರೆಸ್ತೀನಿ ಅಂತ ಆವಾಜ್ಶಿಕ್ಷಕ ರಾಮಚಂದ್ರ ವರ್ತನೆಯಿಂದ ಬೇಸತ್ತ ಮಕ್ಕಳು |ಕುಡುಕ ಶಿಕ್ಷಕನ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ
ಬೀದರ್: ಇಲ್ಲೊಬ್ಬ ಮೇಸ್ಟ್ರು ಶಾಲೆಗೆ ಕಂಠಪೂರ್ತಿ ಕುಡಿದು ತೂರಾಡುತ್ತಾ ಬರ್ತಾನೆ, ಶಾಲೆಗೆ ಬಂದು ಪಾಠ ಹೇಳಲ್ಲ. ಮಕ್ಕಳ ಮುಂದೆ ಬಾಯಿಗೆ ಬಂದಂತೆ ಮಾತಾಡ್ತಾನೆ. ಸ್ಕೂಲ್’ಗೆ ಬಂದು ಊರವರ ಹೆಸ್ರು ಹೇಳ್ಕೊಂಡು ಬೈತಾನೆ.
ಹೆಚ್ಚಿಗೆ ಮಾತಾಡಿದ್ರೆ ಗೂಂಡಾಗಳನ್ನು ಕರೆಸ್ತೀನಿ ಅಂತ ಆವಾಜ್ ಹಾಕ್ತಾನೆ. ಹೌದು, ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಿಟ್ಟೂರು ಸರ್ಕಾರಿ ಶಾಲೆ ಶಿಕ್ಷಕ ರಾಮಚಂದ್ರನ ವರ್ತನೆಯಿಂದ ಶಾಲೆ ಮಕ್ಕಳು ಮಾತ್ರವಲ್ಲ ಇಡೀ ಊರವರೇ ಬೇಸತ್ತು ಹೋಗಿದ್ದಾರೆ.
ಈ ಕುಡುಕ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಿ ಅಂತ ದೂರು ಕೊಟ್ರೆ ಅಧಿಕಾರಿಗಳು ಮೌನವಾಗಿದ್ದಾರೆ ಅನ್ನೋದು ಗ್ರಾಮಸ್ಥರ ಆರೋಪ.
ನಿತ್ಯ ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಮಾತನಾಡುವ ಶಿಕ್ಷಕ ರಾಮಚಂದ್ರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.
