ಕಾಲೇಜಿನೊಳಗಿದ್ದ ವಿದ್ಯಾರ್ಥಿನಿಯರು ಗೇಟ್’ಗೆ ಬೀಗ ಬಿದ್ದಿದ್ದರಿಂದ ದಿಕ್ಕುತೋಚದಂತಾಗಿದ್ದರು. ನಂತರ ಸ್ನೇಹಿತರಿಗೆ ಕರೆ ಮಾಡಿ, ಪ್ರಿನ್ಸಿಪಾಲ್ ಮನೆಯಿಂದ ಕೀ ತರಿಸಿ ಬೀಗ ತೆಗೆಸಿಕೊಂಡು ಹೊರಬಂದಿದ್ದಾರೆ.

ಹಾಸನ (ಏ.25): ಲೈಬ್ರರಿಯನ್ ಎಡವಟ್ಟಿನಿಂದ ಕಾಲೇಜಿನೊಳಗೆ 4 ವಿದ್ಯಾರ್ಥಿನಿಯರು ಗಂಟೆಗಟ್ಟಲೆ ಪರಿತಪಿಸಿದ ಘಟನೆ ಹಾಸನದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಗೃಹ ವಿಜ್ಞಾನ ಕಾಲೇಜಿನ ಲೈಬ್ರರಿಯನ್ ನಿನ್ನೆ ಸಂಜೆ ವಿದ್ಯಾರ್ಥಿನಿಯರು ಕಾಲೇಜಿನೊಳಗೆ ಇರುವುದನ್ನು ಗಮನಿಸದೇ ಗೇಟ್’ಗೆ ಬೀಗ ಹಾಕಿಕೊಂಡು ಪ್ರಿನ್ಸಿಪಾಲ್’ಗೆ ಕೀ ಕೊಟ್ಟಿದ್ದಾರೆ.

ಕಾಲೇಜಿನೊಳಗಿದ್ದ ವಿದ್ಯಾರ್ಥಿನಿಯರು ಗೇಟ್’ಗೆ ಬೀಗ ಬಿದ್ದಿದ್ದರಿಂದ ದಿಕ್ಕುತೋಚದಂತಾಗಿದ್ದರು. ನಂತರ ಸ್ನೇಹಿತರಿಗೆ ಕರೆ ಮಾಡಿ, ಪ್ರಿನ್ಸಿಪಾಲ್ ಮನೆಯಿಂದ ಕೀ ತರಿಸಿ ಬೀಗ ತೆಗೆಸಿಕೊಂಡು ಹೊರಬಂದಿದ್ದಾರೆ.

ವಿದ್ಯಾರ್ಥಿನಿಯರು ಕಾಲೇಜು ಮುಗಿದರೂ ಹೊರಬರಲಿಲ್ಲವಾದ್ದರಿಂದ ಈ ಪ್ರಮಾದ ನಡೆದಿರುವ ಸಾಧ್ಯತಯಿದೆ ಎನ್ನಲಾಗಿದೆ.