ಡಿ ಕಾಯುವ ಯೊಧರಿಗೆಂದೇ ಇಲ್ಲಿನ ಶಾಲೆಯೊಂದರ ವಿದ್ಯಾರ್ಥಿಗಳು ಬೃಹತ್ ರಾಖಿಯೊಂದನ್ನು ತಯಾರಿಸಿ ಕಳುಹಿಸಿದ್ದಾರೆ. 100 ಅಡಿ ಉದ್ದವಿರುವ ರಾಖಿಯಲ್ಲಿ ಬೇರೆ ಬೇರೆ ರಾಜ್ಯದ ಸಂಸ್ಕೃತಿಗಳು ಹಾಗೂ ಬೇರೆ ಬೇರೆ ಧರ್ಮಗಳ ನಡುವಿನ ಏಕತೆಯನ್ನು ಬಿಂಬಿಸಲಾಗಿದೆ.
ಮೊರಾದಬಾದ್, ಉತ್ತರ ಪ್ರದೇಶ: ಗಡಿ ಕಾಯುವ ಯೊಧರಿಗೆಂದೇ ಇಲ್ಲಿನ ಶಾಲೆಯೊಂದರ ವಿದ್ಯಾರ್ಥಿಗಳು ಬೃಹತ್ ರಾಖಿಯೊಂದನ್ನು ತಯಾರಿಸಿ ಕಳುಹಿಸಿದ್ದಾರೆ.
100 ಅಡಿ ಉದ್ದವಿರುವ ರಾಖಿಯಲ್ಲಿ ಬೇರೆ ಬೇರೆ ರಾಜ್ಯದ ಸಂಸ್ಕೃತಿಗಳು ಹಾಗೂ ಬೇರೆ ಬೇರೆ ಧರ್ಮಗಳ ನಡುವಿನ ಏಕತೆಯನ್ನು ಬಿಂಬಿಸಲಾಗಿದೆ.
ಕಲರ್ ಹಾಳೆಗಳು, ಬಟ್ಟೆ, ಲೇಸ್ ಹಾಗೂ ಆಲಂಕಾರಿಕ ಸಾಮಾಗ್ರಿಗಳಿಂದ ರಚಿಸಲ್ಪಟ್ಟ ಈ ರಾಖಿಯು ದೇಶದಲ್ಲಿ ಶಾಂತಿ ಹಾಗೂ ಸೌಹಾರ್ದವನ್ನು ಎತ್ತಿ ಹಿಡಿಯುತ್ತದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ಕೃತ್ಯದ ಬಳಿಕ ಇಂತಹ ದು ರಾಖಿಯನ್ನು ಗಡಿ ಕಾಯುವ ಯೋಧರಿಗೆ ಕಳುಹಿಸಿಕೊಡುವ ವಿಚಾರ ಹೊಳೆಯಿತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಈ ಬೃಹತ್ ರಾಖಿಯನ್ನು ವಿದ್ಯಾರ್ಥಿಗಳು ಯೋಧರಿಗೆ ಕಳುಹಿಸಿದ್ದಾರೆ.
(ಚಿತ್ರ: ಏಎನ್ಐ)
