ರಾಜ್ಯ ಸರ್ಕಾರ ಈಗಾಗಲೇ ಮಹಿಳಾ ಕಾಲೇಜುಗಳನ್ನು ವಿಜಯಪುರದ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಳಿಸುವ ವಿಚಾರವಾಗಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಇಂದು ವಿಶ್ವವಿದ್ಯಾಲಯದ ಉಪಸಮಿತಿಯ ತಂಡ ರಾಮನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿತ್ತು.
ರಾಮನಗರ (ಜ.25): ರಾಜ್ಯದ ಮಹಿಳಾ ಕಾಲೇಜುಗಳನ್ನು ವಿಜಯಪುರದ ‘ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ’ಕ್ಕೆ ಸೇರ್ಪಡೆಗೊಳಿಸುವ ಸರ್ಕಾರದ ನೀತಿಯನ್ನು ವಿರೋಧಿಸಿ ರಾಮನಗರದಲ್ಲಿ ಇಂದು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಮಹಿಳಾ ಕಾಲೇಜುಗಳನ್ನು ವಿಜಯಪುರದ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಳಿಸುವ ವಿಚಾರವಾಗಿ ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ಇಂದು ವಿಶ್ವವಿದ್ಯಾಲಯದ ಉಪಸಮಿತಿಯ ತಂಡ ರಾಮನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿತ್ತು.
ಈ ವೇಳೆ ಕಾಲೇಜಿನ ಗೇಟ್’ಗೆ ಬೀಗ ಜಡಿದು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಉಪಸಮಿತಿ ತಂಡವನ್ನು ಕಾಲೇಜು ಆವರಣದ ಒಳಗೂ ಸಹ ಕಾಲಿಡದಂತೆ ವಾಪಾಸು ಕಳುಹಿಸಿದ್ದಾರೆ.
ಇದೇ ವೇಳೆ ಸ್ಥಳೀಯ ಮುಖಂಡರು ಹಾಗೂ ವಿದ್ಯಾರ್ಥಿನಿಯರ ಪೋಷಕರು ಉಪಸಮಿತಿ ತಂಡದ ಜೊತೆ ವಾಗ್ವಾದ ಕೂಡ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಉಪಸಮಿತಿಯ ಮಂಡ್ಯ ಪ್ರಾದೇಶಿಕ ಕೇಂದ್ರದ ಡಾ.ಚಂದ್ರಪ್ಪ ವಿದ್ಯಾರ್ಥಿನಿಯರು ತಮ್ಮ ಸಮಸ್ಯೆಗಳನ್ನು ತಿಳಿಸಿ ಮಹಿಳಾ ವಿವಿ ಸೇರ್ಪಡೆಗೆ ವಿರೋಧಿಸಿ ಮನವಿ ನೀಡಿದ್ದಾರೆ.
ಮನವಿ ಪತ್ರವನ್ನು ವಿಶ್ವವಿದ್ಯಾಲಯಕ್ಕೆ ನೀಡಿ ಸರ್ಕಾರಕ್ಕೆ ಮುಟ್ಟಿಸುವುದಾಗಿ ಅವರು ತಿಳಿಸಿದ್ದಾರೆ
