ಅಪಘಾತವೊಂದರಲ್ಲಿ ಕಣ್ಣು ಕಳೆದುಕೊಂಡ ಶಿಕ್ಷರೊಬ್ಬರ ಶಸ್ತ್ರಚಿಕಿತ್ಸೆಗೆ ವಿದ್ಯಾರ್ಥಿಗಳು ತಮ್ಮ ಪಾಕೆಟ್ ಮನಿಯನ್ನು ಸಂಗ್ರಹಿಸಿ ನೆರವಾಗಿರುವ ಮನಮುಟ್ಟುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಅನಂತಪುರ, ಆಂಧ್ರಪ್ರದೇಶ: ಅಪಘಾತವೊಂದರಲ್ಲಿ ಕಣ್ಣು ಕಳೆದುಕೊಂಡ ಶಿಕ್ಷರೊಬ್ಬರ ಶಸ್ತ್ರಚಿಕಿತ್ಸೆಗೆ ವಿದ್ಯಾರ್ಥಿಗಳು ತಮ್ಮ ಪಾಕೆಟ್ ಮನಿಯನ್ನು ಸಂಗ್ರಹಿಸಿ ನೆರವಾಗಿರುವ ಮನಮುಟ್ಟುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಆಂಧ್ರ ಪ್ರದೇಶದ ಅಂನಂತಪುರ ಜಿಲ್ಲೆಯ ತಡಿಪತ್ರಿಯಲ್ಲಿರುವ ಟಾರ್ಗೆಟ್ ಎಂಬ ಖಾಸಗಿ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿರುವ ನಾಗರಾಜು ಅಪಘಾತಕ್ಕೊಳಗಾಗಿದ್ದು, ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಹೈದರಾಬಾದಿನಲ್ಲಿ ವೈದ್ಯರಿಗೆ ತೋರಿಸಿದಾಗ, ಸಮಸ್ಯೆಯನ್ನು ಸರಿಪಡಿಸಬಹದು ಆದರೆ ಶಸಸ್ತ್ರಚಿಕಿತ್ಸೆಗೆ ಸುಮಾರು ₹1 ಲಕ್ಷ ಹಣ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮೊದಲೇ ಬಡ ಕುಟುಂಬದಿಂದ ಬಂದಿದ್ದ ನಾಗರಾಜು, ಅಪಘಾತಕ್ಕೊಳಗಾಗಿದ್ದರಿಂದ ಻ವರ ರ್ಥಿಕ ಸ್ಥಿತಿ ಇನ್ನೂ ಬಿಗಡಾಯಿಸಿತ್ತು.

ಆದರೆ ಈ ವಿಷಯವನ್ನು ಅರ್ಥಮಾಡಿಕೊಂಡ ಶಾಲಾ ಸಂಚಾಲಕ ಜಯಚಂದ್ರ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಾಗರಾಜು ಅವರಿಗೆ ನೆರವಾಗಲು ನಿರ್ಧರಿಸಿದ್ದಾರೆ.

ಅದರಂತೇ, ತಮ್ಮ ಪಾಕೆಟ್ ಮನಿಯನ್ನು ಉಳಿಸಿ ಒಟ್ಟು ₹ 60090 ನ್ನು ಉಳಿಸಿ ನಾಗರಾಜು ಅವರ ಶಸ್ತ್ರಚಿಕಿತ್ಸೆಗಾಗಿ ನೀಡಿದ್ದಾರೆ. ಜತೆಗೆ ನಾಗರಾಜು ಅವರ ನೆರವಿಗೆ ಬರಲು ಇತರರಿಗೂ ಮನವಿ ಮಾಡಿಕೊಂಡಿದ್ದಾರೆ.

(ಸಾಂದರ್ಭಿಕ ಚಿತ್ರ)