ಒಂದೇ ಕ್ಲಾಸರೂಂನಲ್ಲಿ ಇಂಡೋ-ಪಾಕ್ ಸ್ಟೂಡೆಂಟ್ಸ್: ಇದು ಎಸ್ ಎಯು ಮ್ಯಾಜಿಕ್..!

students from India, Pakistan share a classroom
Highlights

ಒಂದೇ ಕ್ಲಾಸರೂಂನಲ್ಲಿಒ ಇಂಡೋ-ಪಾಕ್ ಸ್ಟೂಡೆಂಟ್ಸ್

ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಲ್ಲಿ ಯುವ ಮನಸ್ಸುಗಳ ಬೆಸುಗೆ

ನವದೆಹಲಿಯಲ್ಲಿರುವ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯ

ಒಂದೇ ಕೊಠಡಿಯಲ್ಲಿ ವಿವಿಧ ರಾಷ್ಟ್ರಗಳ ವಿದ್ಯಾರ್ಥಿಗಳಿಂದ ಜ್ಞಾನಾರ್ಜನೆ

ನವದೆಹಲಿ(ಜೂ12): ಭಾರತ, ಪಾಕಿಸ್ತಾನ, ಆಫ್ಘಾನಿಸ್ತಾನ್, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಭೂತಾನ್ ಹೀಗೆ ದಕ್ಷಿಣ ಏಷ್ಯಾ ರಾಷ್ಟ್ರಗಳ ಯುವ ಮನಸ್ಸುಗಳು ಒಂದೆಡೆ ಬೆರೆತು, ಒಂದೇ ಕೊಠಡಿಯಲ್ಲಿ ಪಾಠ ಕೇಳಿದರೆ ಹೇಗಿರುತ್ತೆ?. ಇಂತಹ ಅಪರೂಪದ ದೃಶ್ಯವನ್ನು ನೀವು ನೋಡಬೇಕಾದರೆ ನವದೆಹಲಿಯಲ್ಲಿರುವ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಬೇಕು.

ಹೌದು, ನವದೆಹಲಿಯಲ್ಲಿರುವ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ದಕ್ಷಿನ ಏಷ್ಯಾದ ಎಲ್ಲ ರಾಷ್ಟ್ರಗಳ ಯುವಕರು ವಿದ್ಯಾಭ್ಯಾಸ ಮಾಡುತ್ತಾರೆ. 99 ಭಾರತೀಯ, 21 ಅಫ್ಘಾನಿಸ್ತಾನ್, 17 ಬಾಂಗ್ಲಾದೇಶ, 11 ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಖಾದ ತಲಾ 5 ವಿದ್ಯಾರ್ಥಿಗಳು ಈ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಇವರೆಲ್ಲಾ ಒಂದೇ ಕೊಠಡಿಯಲ್ಲಿ ಕುಳಿತು ಪಾಠ ಕೇಳುತ್ತಾರೆ. ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ ಇಲ್ಲಿನ ಶಿಕ್ಷಕರೂ ಕೂಡ ದಕ್ಷಿಣ ಏಷ್ಯಾದ ಎಲ್ಲ ರಾಷ್ಟ್ರಗಳಿಗೆ ಸೇರಿದ್ದಾರೆ. ವಿವಿಧ ಕೋರ್ಸ್ ಗಳಿಗೆ ದಕ್ಷಿಣ ಏಷ್ಯಾದ ರಾಷ್ಟ್ರಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ.

ಮತ್ತೊಂದು ವಿಶೇಷ ಎಂದರೆ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಎಸ್ ಎಯು ವೀಸಾ ಎಂಬ ವಿಶೆಷ ವೀಸಾದ ವ್ಯವಸ್ಥೆ ಕೂಡ ಮಾಡಲಾಗಿದೆ. ಈ ವೀಸಾ ಪಡೆದುಕೊಂಡ ವಿದ್ಯಾರ್ಥಿಗಳು ನವದೆಹಲಿಯಲ್ಲಿನ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ಜ್ಞಾನಾರ್ಜನೆ ಮಾಡುತ್ತಾರೆ. ದಕ್ಷಿಣ ಏಷ್ಯಾ ರಾಷ್ಟ್ರಗಳ ರಾಜಕೀಯ ಪರಿಸ್ಥಿತಿ ಏನೇ ಇರಲಿ, ಎಸ್ ಎಯು ಮಾತ್ರ ಈ ಎಲ್ಲ ರಾಷ್ಟ್ರಗಳ ಯುವ ಮನಸ್ಸುಗಳನ್ನು ಒಂದು ಮಾಡುತ್ತಾ ಪರಸ್ಪರ ವಿಶ್ವಾಸ ಹೆಚ್ಚಿಸುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ.

loader