Asianet Suvarna News Asianet Suvarna News

ಪುರ​ಸಭೆ ಸದ​ಸ್ಯೆ​ಯಾಗಿ ವಿದ್ಯಾ​ರ್ಥಿನಿ ಸು​ಮಿತ್ರಾ ಆಯ್ಕೆ!

ಪುರ​ಸಭೆ ಸದ​ಸ್ಯೆ​ಯಾಗಿ ವಿದ್ಯಾ​ರ್ಥಿನಿ ಸು​ಮಿತ್ರಾ ಆಯ್ಕೆ!  ಮಾಲೂರು ಪುರ​ಸ​ಭೆ 27ನೇ ವಾರ್ಡ್‌​ನಿಂದ ಆಯ್ಕೆ​ಯಾ​ದ ಬಿಜೆಪಿ ಅಭ್ಯ​ರ್ಥಿ
 

Student Sumitra won Malur town municipal council
Author
Bengaluru, First Published Jun 1, 2019, 9:58 AM IST
  • Facebook
  • Twitter
  • Whatsapp

ಮಾಲೂರು (ಜೂ. 01):  ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಕಾಲೇಜು ವಿದ್ಯಾ​ರ್ಥಿ​ನಿ​ಯೊ​ಬ್ಬ​ಳು ಸದಸ್ಯೆಯಾಗಿ ಆಯ್ಕೆಯಾಗಿದ್ದಾಳೆ. ಪಟ್ಟಣದ 27ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಿತ್ರಾ ಪಿ.(19) ಜಯ​ಗ​ಳಿ​ಸಿದ ವಿದ್ಯಾ​ರ್ಥಿನಿ.

ಈಕೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತಂದೆ ಪಚ್ಚಪ್ಪ ಪ್ರತಿನಿಧಿಸುತ್ತಿದ್ದ ವಾರ್ಡ್‌ನಲ್ಲಿ 534 ಮತಗಳನ್ನು ಪಡೆದು ಎದುರಾಳಿ ಗಾಯತ್ರಿ ಸಂದೀಪ್‌ ಎಂಬ​ವ​ರ​ನ್ನು 121 ಮತಗಳ ಅಂತರದಿಂದ ಸೋಲಿ​ಸಿ​ದ್ದಾರೆ.

ಸೇವೆ, ಶಿಕ್ಷಣ ಮುಂದು​ವ​ರಿ​ಸು​ವೆ:

ಈ ಸಾಧನೆ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಸಂತಸ ಹಂಚಿಕೊಂಡ ಸುಮಿತ್ರಾ, ತನ್ನ ತಂದೆ ಪಚ್ಚಪ್ಪ ಅವರು ಪುರಸಭೆ ಸದಸ್ಯರಾಗಿ ಸಲ್ಲಿಸಿದ ಸಮಾಜ ಸೇವೆ ನನ್ನನ್ನು ಸೆಳೆದಿತ್ತು. ಅದಕ್ಕಾಗಿ ಈಗ ನಾನೇ ಚುನಾವಣೆಗೆ ನಿಂತು ಗೆದ್ದಿದ್ದೇನೆ, ತಂದೆಗೆ ತಕ್ಕ ಮಗಳಾಗಿ​ದ್ದೇ​ನೆ. ಮುಂದೆ ಶಿಕ್ಷಣ ಹಾಗೂ ಪುರಸಭೆ ಸದಸ್ಯತ್ವದ ಕರ್ತವ್ಯಗಳೆರಡನ್ನೂ ತಂದೆ ಸಹಕಾರದಿಂದ ನಿರ್ವಹಿಸುವುದಾಗಿ ತಿಳಿಸಿದರು. ನಿಯಮದ ಪ್ರಕಾರ ಪುರಸಭೆ ಸದಸ್ಯರಾಗಲು ಕನಿಷ್ಠ ವಯೋಮಾನ 21 ಆಗಿರಬೇಕು. ಆದರೆ ನಾಮಪತ್ರ ಪರಿಶೀಲನೆಯಲ್ಲಿ ಲೋಪ ಹೇಗೆ ಆಯಿತು ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

Follow Us:
Download App:
  • android
  • ios