ಗೋಧಿ ಹಿಟ್ಟು ಅಥವಾ ಇತರ ಹಿಟ್ಟಿನಿಂದ ಕುಕ್ಕೀಸ್ ತಯಾರಿಸುವುದನ್ನ ಕೇಳಿದ್ದೇವೆ. ಆದರೆ ವಿದ್ಯಾರ್ಥಿನಿಯೊಬ್ಬಳು ಅಜ್ಜಿಯ ಚಿತಾ ಭಸ್ಮದಿಂದ ಕುಕ್ಕೀಸ್ ತಯಾರಿಸಿದ್ದಾಳೆ. ಅಷ್ಟಕ್ಕೂ ಈ ವಿದ್ಯಾರ್ಥಿನಿಗೆ ಈ ಐಡಿಯಾ ಹೊಳೆದಿದ್ದು ಹೇಗೆ? ಇಲ್ಲಿದೆ.

ಕ್ಯಾಲಿಫೋರ್ನಿಯಾ(ಅ.21): ಮೈದಾ ಹಿಟ್ಟು ಇಲ್ಲವೇ ಗೋಧಿ ಹಿಟ್ಟಿನಿಂದ ರುಚಿಕರ ಕುಕೀಸ್‌ಗಳನ್ನು ತಯಾರಿಸುತ್ತಾರೆ. ಆದರೆ, ಇದರ ಅರಿವಿಲ್ಲದ ಅಮೆರಿಕದ ಕ್ಯಾಲಿಫೋರ್ನಿಯಾದ ಹೈಸ್ಕೂಲ್‌ ವಿದ್ಯಾರ್ಥಿನಿಯೊಬ್ಬಳು ಅಜ್ಜಿಯ ಚಿತಾ ಭಸ್ಮದಿಂದ ಕುಕೀಸ್ ತಯಾರಿಸಿದ ಘಟನೆ ನಡೆದಿದೆ.

ವಿದ್ಯಾರ್ಥಿನಿ ಮನೆಯಲ್ಲಿ ಇಟ್ಟಿದ್ದ ಚಿತಾಭಸ್ಮವನ್ನು ಗೋಧಿ ಹಿಟ್ಟು ಇದ್ದಿರಬಹುದು ಎಂದು ಭಾವಿಸಿ ಅದರಿಂದ ಕುಕೀಸ್‌ಗಳನ್ನು ತಯಾರಿಸಿ ತನ್ನ ಸ್ನೇಹಿತೆಯರಿಗೆ ನೀಡಿದ್ದಾಳೆ. ಅದನ್ನು ಹೇಗೆ ತಯಾರಿಸಿದೆ ಎಂದು ಸ್ನೇಹಿತರು ಕೇಳಿದಾಗ ತನ್ನ ಅಜ್ಜಿಯ ಭಸ್ಮವನ್ನು ಸಕ್ಕರೆಯ ಜೊತೆ ಬೆರೆಸಿ ಕುಕೀಸ್‌ಗಳನ್ನು ತಯಾರಿಸಿದ್ದಾಗಿ ಹೇಳಿದ್ದಾರೆ. 

ಅದೃಷ್ಟವಶಾತ್‌ ಕುಕೀಸ್‌ ತಿಂದ ಮಕ್ಕಳಿಗೆ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ಚಿತಾ ಭಸ್ಮದಿಂದ ಕುಕೀಸ್ ತಯಾರಿಸಿದ ವಿದ್ಯಾರ್ಥಿನಿ ಪ್ರಯತ್ನವನ್ನ ಮೆಚ್ಚಲೇಬೇಕು.