ಸ್ಟುಡೆಂಟ್ ಪಾಸ್ ಇದೆ ಎಂಬ ಕಾರಣಕ್ಕೆ ಕಂಡಕ್ಟ್'ರ್ ಬಸ್'ನಿಂದ ಹೊರದಬ್ಬಿ ಬಸ್'ನ ಬಾಗಿಲು ಹಾಕಿದ್ದಾನೆ. ಈ ಸಂದರ್ಭದಲ್ಲಿ ಉಲ್ಲೇಖ್ ಕಾಲು ಬಸ್ ಚಕ್ರಕ್ಕೆ ಸಿಲುಕಿ ಕಟ್ ಆಗಿದೆ.
ಮೈಸೂರು(ಅ.24): ಬಸ್ ಕಂಡಕ್ಟ್'ರ್ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಯೊಬ್ಬ ಕಾಲು ಕಳೆದುಕೊಂಡ ಘಟನೆ ಮೈಸೂರಿನ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬನ್ನೂರಿನ ಉಲ್ಲೇಖ್ ಪುಟ್ಟಸ್ವಾಮಿ ಕಾಲು ಕಳೆದುಕೊಂಡ ವಿದ್ಯಾರ್ಥಿ. ಮೈಸೂರಿನ ಸದ್ವಿದ್ಯಾ ಪೌಢಶಾಲೆಯ 9 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಈತನನ್ನು ಸ್ಟುಡೆಂಟ್ ಪಾಸ್ ಇದೆ ಎಂಬ ಕಾರಣಕ್ಕೆ ಕಂಡಕ್ಟ್'ರ್ ಬಸ್'ನಿಂದ ಹೊರದಬ್ಬಿ ಬಸ್'ನ ಬಾಗಿಲು ಹಾಕಿದ್ದಾನೆ. ಈ ಸಂದರ್ಭದಲ್ಲಿ ಉಲ್ಲೇಖ್ ಕಾಲು ಬಸ್ ಚಕ್ರಕ್ಕೆ ಸಿಲುಕಿ ಕಟ್ ಆಗಿದೆ.
ತುಂಡಾದ ಕಾಲನ್ನು ಶಸ್ತ್ರ'ಚಿಕಿತ್ಸೆ ಮೂಲಕ ತೆಗೆದ ವೈದ್ಯರು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ಉಲ್ಲೇಖ್ಗೆ ಚಿಕಿತ್ಸೆ ನೀಡಲಾಗುತ್ತದೆ. ಕೆಎಸ್'ಆರ್'ಟಿಸಿ ಕಂಡಕ್ಟರ್, ಡ್ರೈವರ್ ವಿರುದ್ಧ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
