ಬೀದರ್ (ಜ. 05): ಖಾಸಗಿ ಮಿನಿ ಬಸ್ ಹುಬ್ಬಳ್ಳಿ ‌ಬಳಿ ಅಪಘಾತಕ್ಕೀಡಾಗಿದ್ದು ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.  ‌ 

ಖಾಸಗಿ ಬಸ್ಸಿನಲ್ಲಿ ಅನುದಾನಿತ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಮರಳಿ‌ ಬರುವಾಗ ನಿನ್ನೆ ತಡರಾತ್ರಿ ಖಾಸಗಿ ಮಿನಿ ಬಸ್ ಹುಬ್ಬಳ್ಳಿ ‌ಬಳಿ‌ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ  ಎಂಟನೇ ತರಗತಿ ವಿದ್ಯಾರ್ಥಿ ಅಭಿಷೇಕ ಈರಪ್ಪ  ಕೊಳಾರ (16) ಸಾವನ್ನಪ್ಪಿದ್ದಾನೆ. 

ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಅನುಮತಿ ಪಡೆಯದೆ ಕಳೆದ ಏಳು ದಿನಗಳ ಹಿಂದೆ ವಿದ್ಯಾರ್ಥಿಗಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಮುಖ್ಯಗುರು ಸಿದ್ರಾಮ ನಿಜಾಂಪೂರ್ ಪ್ರಕರಣ ಮುಚ್ಚಿ‌ ಹಾಕಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರವಾಸದ ಹೆಸರಲ್ಲಿ ಶಿಕ್ಷಕಿ ಮದುವೆಗೆ ಮಂಗಳೂರಿಗೆ ‌ಪ್ರಯಾಣಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.