ಚಂಡೀ​ಗ​ಢ[ಜು.21]: ಲಿಂಗಾ​ನು​ಪಾ​ತದ ಕುಖ್ಯಾ​ತಿಗೆ ಒಳ​ಗಾ​ದ ಹರ್ಯಾಣ ರಾಜ್ಯದ ಚಂಡೀ​ಗಢ ಜಿಲ್ಲೆ​ಯ ಕೈತಾಲ್‌ ನಗ​ರ​ದಲ್ಲಿ ನವ​ಜಾತ ಹೆಣ್ಣು ಶಿಶು​ವನ್ನು ಪ್ಲಾಸ್ಟಿಕ್‌ ಚೀಲ​ದಲ್ಲಿ ಕಟ್ಟಿಚರಂಡಿಗೆ ಎಸೆದ ಅಮಾ​ನ​ವೀಯ ಘಟನೆ ಗುರು​ವಾರ ನಡೆ​ದಿದೆ. ಆದರೆ ಬೀದಿ ನಾಯಿ​ಗಳು ಈ ಪ್ಲಾಸ್ಟಿಕ್‌ ಚೀಲವನ್ನು ಚರಂಡಿ​ಯಿಂದ ಹೊರ​ಗೆ​ಳೆದು ಜೋರಾಗಿ ಬೊಗ​ಳಿ ಸಾರ್ವ​ಜ​ನಿ​ಕರ ಗಮನ ಸೆಳೆದಿವೆ. ಈ ಮಾರ್ಗ​ದಲ್ಲಿ ಸಾಗು​ತ್ತಿದ್ದ ವ್ಯಕ್ತಿ​ಯೊಬ್ಬ ಪೊಲೀ​ಸ​ರಿಗೆ ಮಾಹಿತಿ ನೀಡಿದ್ದು, ಮಗು​ವನ್ನು ರ​ಕ್ಷಿಸಿ ಜಿಲ್ಲಾ​ಸ್ಪ​ತ್ರೆಗೆ ದಾಖ​ಲಿಸಲಾ​ಗಿದೆ.

ಆಸ್ಪ​ತ್ರೆಗೆ ದಾಖ​ಲಿ​ಸಿ​ದಾಗ ಮಗುವಿನ ತೂಕ ಕೇವಲ 1100 ಗ್ರಾಂ ಇದ್ದು, ಸ್ಥಿತಿ ಗಂಭೀ​ರ​ವಾ​ಗಿದೆ ಎಂದು ವೈದ್ಯರು ತಿಳಿ​ಸಿ​ದ್ದಾ​ರೆ. ಚರಂಡಿಗೆ ಮಗು ಎಸೆದ ಸ್ಥಳದ ಸಮೀ​ಪ​ದಲ್ಲಿ ಸಿಸಿ​ಟೀವಿ ಇದ್ದು, ಅದ​ರಲ್ಲಿ ಗುರು​ವಾರ ಬೆಳ​ಗಿನ ಜಾವ 4ರ ಹೊತ್ತಿಗೆ ಒರ್ವ ಮಹಿ​ಳೆ​ ಈ ಮಗು​ವನ್ನು ಎಸೆದ ದೃಶ್ಯ ದಾಖ​ಲಾ​ಗಿದೆ.

ಸಂಬಂದಿ​ಸಿ​ದಂತೆ ತನಿಖೆ, ಪತ್ತೆ ಕಾರ್ಯ ನಡೆ​ದಿದೆ ಎಂದು ಪೊಲೀ​ಸರು ತಿಳಿ​ಸಿ​ದ್ದಾ​ರೆ.