ನಿರ್ಜನ ರಸ್ತೆಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ಕುಡಿಯಲು ನೀರೂ ಇಲ್ಲದೆ ಕೊನೆಗೆ ಸ್ವಮೂತ್ರ ಪಾನಮಾಡಿ ೧೪೦ ಕಿ.ಮೀ. ದಾರಿಯನ್ನು ಏಕಾಂಗಿಯಾಗಿ ಕ್ರಮಿಸಿ ಸಾವಿನ ದವಡೆಯಿಂದ ಪಾರಾದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಮೆಲ್ಬರ್ನ್(ಸೆ.05): ನಿರ್ಜನ ರಸ್ತೆಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ಕುಡಿಯಲು ನೀರೂ ಇಲ್ಲದೆ ಕೊನೆಗೆ ಸ್ವಮೂತ್ರ ಪಾನಮಾಡಿ ೧೪೦ ಕಿ.ಮೀ. ದಾರಿಯನ್ನು ಏಕಾಂಗಿಯಾಗಿ ಕ್ರಮಿಸಿ ಸಾವಿನ ದವಡೆಯಿಂದ ಪಾರಾದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಆಸ್ಟ್ರೇಲಿಯಾದ ತಂತ್ರಜ್ಞ ಥಾಮಸ್ ಮೇಸನ್ ಎಂಬಾತ ಉತ್ತರ ಆಸ್ಟ್ರೇಲಿಯಾದ ದುರ್ಗಮ ಸಮುದಾಯವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ ವಾರ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಡ್ಡ ಬಂದ ಕಾಡು ಒಂಟೆಗಳನ್ನು ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿತ್ತು. ಆದರೆ ಮೇಸನ್ ಪ್ರಾಣಾಪಾಯದಿಂದ ಪಾರಾಗಿದ್ದ. ಆದರೆ, ಸುತ್ತಮುತ್ತ ಕುಡಿಯಲು ಒಂದು ತೊಟ್ಟು ನೀರೂ ಇರಲಿಲ್ಲ. ಸಮೀಪದ ನಗರಕ್ಕೆ ಹೋಗಬೇಕು ಅಂದರೂ 150 ಕಿ.ಮೀ. ನಡೆಯಬೇಕಿತ್ತು. ತಿನ್ನಲು ಆಹಾರವೇ ಇರಲಿಲ್ಲ.

ಕೊನೆಗೆ ಬದುಕುಳಿಯಲು ಮೂತ್ರವನ್ನೇ ಕುಡಿಯುತ್ತ ಎರಡು ದಿನಗಳಲ್ಲಿ 140 ಕಿ.ಮೀ ನಡೆದು ಮುಖ್ಯರಸ್ತೆಯೊಂದನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾನೆ. ಕೊನೆಗೂ ದಾರಿಹೋಕರ ಸಹಾಯದಿಂದ ಮನೆ ತಲುಪುವಲ್ಲಿ ಮೇಸನ್ ಯಶಸ್ವಿಯಾಗಿದ್ದಾನೆ.