ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವ ಬ್ರೆಕ್ಸಿಟ್ ಪ್ರಕ್ರಿಯೆಗೆ ಇನ್ನಷ್ಟು ರಾಜಕೀಯ ಭದ್ರತೆ ಸಿಗಲು ಹೊಸ ಚುನಾವಣೆ ಮತ್ತು ಬಹುಮತದ ಸರ್ಕಾರದ ಅಗತ್ಯ. ಹೀಗಾಗಿ ಮಧ್ಯಂತರ ಚುನಾವಣೆ ಘೋಷಿಸಲಾಗಿದೆ ಎಂದು ಪ್ರಧಾನಿ ಮೇ ಹೇಳಿದ್ದಾರೆ.
ಲಂಡನ್(ಏ.18): ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬ್ರಿಟನ್ ಪ್ರಧಾನಿ ಥೆರೇಸಾ ಮೇ ಅವರು ಇದೇ ವರ್ಷದ ಜೂನ್ 8ರಂದು ಮಧ್ಯಂತರ ಚುನಾವಣೆ ಘೋಷಿಸಿದ್ದಾರೆ. ಈ ನಿರ್ಧಾರ ಬುಧವಾರ ಸಂಸತ್ತಿನಲ್ಲಿ ಪರಿಶೀಲನೆಗೆ ಬರಲಿದ್ದು, ಪ್ರಸ್ತಾವಕ್ಕೆ ಸಂಸತ್ತಿನ ಅನುಮೋದನೆ ಸಿಕ್ಕರೆ ಇನ್ನು ಎರಡು ತಿಂಗಳಲ್ಲಿ ದೇಶದಲ್ಲಿ ಮತ್ತೊಮ್ಮೆ ಸಂಸತ್‌ಗೆ ಚುನಾವಣೆ ನಡೆಯಲಿದೆ.
ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವ ಬ್ರೆಕ್ಸಿಟ್ ಪ್ರಕ್ರಿಯೆಗೆ ಇನ್ನಷ್ಟು ರಾಜಕೀಯ ಭದ್ರತೆ ಸಿಗಲು ಹೊಸ ಚುನಾವಣೆ ಮತ್ತು ಬಹುಮತದ ಸರ್ಕಾರದ ಅಗತ್ಯ. ಹೀಗಾಗಿ ಮಧ್ಯಂತರ ಚುನಾವಣೆ ಘೋಷಿಸಲಾಗಿದೆ ಎಂದು ಪ್ರಧಾನಿ ಮೇ ಹೇಳಿದ್ದಾರೆ.
2015ರಲ್ಲಿ ನಡೆದ ಚುನಾವಣೆಯಲ್ಲಿ ಕನ್ಸ್‌ರ್ವೇಟಿವ್ ಪಕ್ಷ 306 ಸ್ಥಾನದೊಂದಿಗೆ ಅತಿದೊಡ್ಡ ಪಕ್ಷವಾಗಿ ಅಕಾರಕ್ಕೆ ಬಂದಿತ್ತು. ಲೇಬರ್ ಪಕ್ಷ 258 ಸ್ಥಾನ ಪಡೆದಿದ್ದು. ಇತರೆ ಕೆಲ ಪಕ್ಷಗಳ ಬೆಂಬಲದೊಂದಿಗೆ ಬಹುಮತಕ್ಕೆ ಅಗತ್ಯವಾಗಿದ್ದ 326 ಸ್ಥಾನ ಪಡೆದುಕೊಂಡಿದ್ದ ಡೇವಿಡ್ ಕ್ಯಾಮರೂನ್ ಅವರ ಕನ್ಸ್‌ರ್ವೇಟಿವ್ ಪಕ್ಷ ಅಕಾರಕ್ಕೆ ಬಂದಿತ್ತು. ಆದರೆ 2016ರಲ್ಲಿ ಬ್ರೆಕ್ಸಿಟ್ ಪರ ದೇಶದ ಜನರು ಮತ ಹಾಕಿದ ಹಿನ್ನೆಲೆಯಲ್ಲಿ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕ್ಯಾಮರೂನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಥೆರೇಸಾ ಮೇ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.
ಆದರೆ ಬ್ರೆಕ್ಸಿಟ್ ಜಾರಿಯ ಪ್ರಕ್ರಿಯೆಯಲ್ಲಿ ಅವರಿಗೆ ಸಂಸತ್ತಿನಲ್ಲಿ ಹಲವು ಭಾರಿ ಮುಖಭಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಪೂರ್ಣ ಬಹುಮತದ ಸರ್ಕಾರವೇ ಮಾತ್ರವೇ ಈ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಡಬಹುದು ಎಂದು ಮನಗಂಡ ಮೇ ಇದೀಗ ಮಧ್ಯಂತರ ಚುನಾವಣೆ ಪ್ರಕಟಿಸದ್ದಾರೆ. ವಾಸ್ತವವಾಗಿ ಮುಂದಿನ ಚುನಾವಣೆ 2020ಕ್ಕೆ ನಡೆಯಬೇಕಿತ್ತು.
