ತಾಜ್‌ಮಹಲ್ ಮಮ್ತಾಜ್ ಗೋರಿಯೋ ಅಥವಾ ಹಿಂದೂ ವಾಸ್ತುಕಲೆಯ ಸರ್ವೋತ್ತಮ ಮಾದರಿಯೇ ಎಂಬ ಸತ್ಯ ಹೊರಬರಬೇಕು. ಅದಕ್ಕಾಗಿ ಇತಿಹಾಸ ತಜ್ಞರ ಸಮಿತಿಯನ್ನು ನೇಮಿಸಿ, ಸೀಮಿತ ಅವಧಿಯಲ್ಲಿ ವರದಿ ಹೊರಗೆ ಬರುವಂತೆ ಕೇಂದ್ರ ಸರ್ಕಾರ ಗಮನಹರಿಸಬೇಕು. ವರದಿ ಹೊರಗೆ ಬರುವವರೆಗೆ ಇಲ್ಲಿ ನಮಾಜ್ ಪಠಣ ಮಾಡಲು ನಿರ್ಬಂಧ ಹೇರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಾಗರ(ನ.24): ವಿಶ್ವವಿಖ್ಯಾತ ತಾಜ್ಮಹಲ್ಗೆ ಹಾಕಿರುವ ಬೀಗವನ್ನು ತೆರೆಯಬೇಕು. ಅದು ಹಿಂದೂ ಕಟ್ಟಡವೇ ಅಥವಾ ಇಸ್ಲಾಮಿ ಗೋರಿಯೇ ಎಂಬ ಬಗ್ಗೆ ಸಂಶೋಧನೆ ನಡೆಸಬೇಕು. ಸಂಶೋಧನೆಯ ನಿಖರ ವರದಿ ಬರುವ ತನಕ ಅಲ್ಲಿ ನಮಾಜು ಮಾಡಲು ಅವಕಾಶ ಕಲ್ಪಿಸದಂತೆ ಒತ್ತಾಯಿಸಿ ಬುಧವಾರ ರಾಷ್ಟ್ರೀಯ ಹಿಂದೂ ಆಂದೋಲನಾ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ತಾಜ್ಮಹಲ್ ಮಮ್ತಾಜ್ ಗೋರಿಯೋ ಅಥವಾ ಹಿಂದೂ ವಾಸ್ತುಕಲೆಯ ಸರ್ವೋತ್ತಮ ಮಾದರಿಯೇ ಎಂಬ ಸತ್ಯ ಹೊರಬರಬೇಕು. ಅದಕ್ಕಾಗಿ ಇತಿಹಾಸ ತಜ್ಞರ ಸಮಿತಿಯನ್ನು ನೇಮಿಸಿ, ಸೀಮಿತ ಅವಧಿಯಲ್ಲಿ ವರದಿ ಹೊರಗೆ ಬರುವಂತೆ ಕೇಂದ್ರ ಸರ್ಕಾರ ಗಮನಹರಿಸಬೇಕು. ವರದಿ ಹೊರಗೆ ಬರುವವರೆಗೆ ಇಲ್ಲಿ ನಮಾಜ್ ಪಠಣ ಮಾಡಲು ನಿರ್ಬಂಧ ಹೇರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದ ಬಳಿಕ ಆ ಸ್ಥಳದಲ್ಲಿ ಉತ್ಖನನ ನಡೆಸಿದಾಗ ಅಲ್ಲಿ ಸಿಕ್ಕಿರುವ ಪುರಾವೆಗಳಿಂದ ಶ್ರೀರಾಮ ದೇವಸ್ಥಾನ ಇರುವುದು ಪತ್ತೆಯಾಗಿದೆ. ಅದೇ ರೀತಿ ತಾಜ್ಮಹಲ್ ಉತ್ಖನನ ನಡೆಸಿದರೆ ಅನೇಕ ಅಪ್ರಕಾಶಿತ ವಿಷಯಗಳು ಬೆಳಕಿಗೆ ಬರಬಹುದು. ಆದ್ದರಿಂದ ಪುರಾತತ್ವ ಇಲಾಖೆ ಅಧಿಕಾರಿಗಳು, ಪೊಲೀಸರು, ನಿವೃತ್ತ ನ್ಯಾಯಾಧೀಶರು, ಪತ್ರಕರ್ತರು, ಧಾರ್ಮಿಕ ಕ್ಷೇತ್ರದಲ್ಲಿನ ಪ್ರಮುಖರು ಮುಂದೆ ಬೀಗ ಹಾಕಿರುವ ಕೋಣೆಯನ್ನು ತೆರೆಯಲಿ, ಎಲ್ಲರಿಗೂ ಪ್ರವೇಶ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಸಮಿತಿ ಪ್ರಮುಖರಾದ ಶಾಂತಾ, ಶೈಲಾ, ಅವಿನಾಶ್, ಪ್ರಮುಖರಾದ ರಾಜು ಬಿ. ಮಡಿವಾಳ, ಸ್ವರೂಪ್ ಐ.ಜಿ., ನ್ಯಾಯವಾದಿಗಳಾದ ರವೀಶ್ಕುಮಾರ್, ಸತೀಶ್ ಕೆ.ಜಿ. ಗಿರೀಶ್ ಇನ್ನಿತರರು ಇದ್ದರು.
