Asianet Suvarna News Asianet Suvarna News

ಗಣೇಶ ವಿಸರ್ಜನೆ: ಡಿಜೆ ಬಂದ್ ಮಾಡಿಸಿದ ಪೊಲೀಸರ ಮೇಲೆ ಕಲ್ಲು ತೂರಾಟ

ಡಿಜೆ ಹಚ್ಚುವ ವಿಚಾರಕ್ಕೆ ನಡೆದ ವಾಗ್ವಾದದಲ್ಲಿ ಕೊನೆಗೆ ಪೊಲೀಸರೇ ಗಣೇಶನ ವಿಸರ್ಜನೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ನಗರದ ಕಿನ್ನಾಳ ರಸ್ತೆಯ ಜಿ.ಎಚ್ ಪಾಟೀಲ್​ ನಗರದ ಏಕದಂತ ಮಿತ್ರ ಮಂಡಳಿ ಯುವಕರು ಅಶೋಕ ವೃತ್ತದ ಮಾರ್ಗವಾಗಿ ಗಣೇಶ ವಿಸರ್ಜನೆಗೆ ಹೊರಟಿದ್ದರು.ಈ ವೇಳೆ ಪೊಲೀಸರು ಡಿಜೆ ಹಚ್ಚಿದ್ದನ್ನು ಪ್ರಶ್ನಿಸಿ ಬಂದ್ ಮಾಡಿದ್ದಾರೆ.

Stone Pelted at Police Pesrsonnal During Gamesha Immersion for Stoping DJ

ಕೊಪ್ಪಳ: ಡಿಜೆ ಹಚ್ಚುವ ವಿಚಾರಕ್ಕೆ ನಡೆದ ವಾಗ್ವಾದದಲ್ಲಿ ಕೊನೆಗೆ ಪೊಲೀಸರೇ ಗಣೇಶನ ವಿಸರ್ಜನೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ನಗರದ ಕಿನ್ನಾಳ ರಸ್ತೆಯ ಜಿ.ಎಚ್ ಪಾಟೀಲ್​ ನಗರದ ಏಕದಂತ ಮಿತ್ರ ಮಂಡಳಿ ಯುವಕರು ಅಶೋಕ ವೃತ್ತದ ಮಾರ್ಗವಾಗಿ ಗಣೇಶ ವಿಸರ್ಜನೆಗೆ ಹೊರಟಿದ್ದರು.ಈ ವೇಳೆ ಪೊಲೀಸರು ಡಿಜೆ ಹಚ್ಚಿದ್ದನ್ನು ಪ್ರಶ್ನಿಸಿ ಬಂದ್ ಮಾಡಿದ್ದಾರೆ.

ಇದನ್ನ ವಿರೋಧಿಸಿ ಯುವಕರು ಪೊಲೀಸರ ವಿರುದ್ಧವೇ ಪ್ರತಿಭಟನೆ ಮಾಡಿದ್ದಾರೆ.

ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆಯಿಂದ ಅಶೋಕ ವೃತ್ತದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಪ್ರತಿಭಟನಾಕಾರರು ಡಿವೈಎಸ್ಪಿ ಮಾತಿಗೂ ಬಗ್ಗದ ಹಿನ್ನಲೆ ಕೊನೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ಘಟನಾ ಸ್ಥಳಕ್ಕೆ ಬರಬೇಕಾಯಿತು. ಎಸ್ಪಿ ಬರುತ್ತಿದ್ದಂತೆ ಪೊಲೀಸರ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.

ಕೊನೆಗೆ ಎಸ್ಪಿ ತಮ್ಮ ಪೊಲೀಸ ಸಿಬ್ಬಂದಿಯಿಂದಲೇ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿಸಿದರು.

Follow Us:
Download App:
  • android
  • ios