ಅಬುದಾಬಿ[ಫೆ.13]: ಅರಬ್‌ ಸಂಯುಕ್ತ ಸಂಸ್ಥಾನಗಳ ರಾಜಧಾನಿ ಅಬುದಾಬಿಯಲ್ಲಿ ನಿರ್ಮಾಣವಾಗಲಿರುವ ಮೊದಲ ಹಿಂದೂ ದೇವಾಲಯದ ಶಂಕು ಸ್ಥಾಪನೆಯು ಏ.20ರಂದು ನೆರವೇರಲಿದೆ.

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲೇ ಇಲ್ಲಿನ 13.5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಬೇಕಿರುವ ದೇವಸ್ಥಾನದ ಯೋಜನೆಗೆ ಅಬುದಾಬಿ ಸರ್ಕಾರ ಅನುಮೋದನೆ ನೀಡಿತ್ತು. ನಾಗರಿಕ ಸಂಸ್ಥೆ ಹಾಗೂ ವಿಶ್ವಾದ್ಯಂತ ಚಾಲ್ತಿಯಲ್ಲಿರುವ ಹಿಂದೂ ಧರ್ಮದ ಬಿಎಪಿಎಸ್‌ ಸ್ವಾಮಿನಾರಾಯಣ್‌ ಸಂಸ್ಥಾ ಈ ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿದೆ.

ಬಿಎಪಿಎಸ್‌ ಸ್ವಾಮಿನಾರಾಯಣ್‌ ಸಂಸ್ಥಾ ಅಧ್ಯಕ್ಷ ಹಾಗೂ ಪ್ರಸ್ತುತದ ಗುರುವಾಗಿರುವ ಮಹಂತ್‌ ಸ್ವಾಮಿ ಮಹಾರಾಜ್‌ ಅವರ ಸಮ್ಮುಖದಲ್ಲಿ ದೇವಸ್ಥಾನದ ಶಿಲಾನ್ಯಾಸ ನೆರವೇರಿಸಲಾಗುತ್ತದೆ ಎಂದು ಹೇಳಲಾಗಿದೆ.