ಸೂಸೈಡ್ ಮಾಡಿಕೊಳ್ಳಲು ವಿಮಾನವನ್ನೇ ಕದ್ದ: ನಿದ್ದೆಗೆಟ್ಟ ಅಮೆರಿಕ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Aug 2018, 8:04 PM IST
Stolen Plane Flies From Seattle, Crashes After Jets Scramble To Intercept READ IN
Highlights

ಅಮೆರಿಕವನ್ನು ಬೆಚ್ಚಿ ಬೀಳಿಸಿದ ಘಟನೆ! ವಿಮಾನ ನಿಲ್ದಾಣದಿಂದ ವಿಮಾನ ಕಳ್ಳತನ! ಆತ್ಮಹತ್ಯೆ ಮಾಡಿಕೊಳ್ಳಲು ವಿಮಾನ ಕಳ್ಳತನ! ವಿಮಾನ ಕದ್ದು ಆತ್ಮಹತ್ಯೆಗೆ ಶರಣಾದ ಸಿಬ್ಬಂದಿ 
 

ಅಲಾಸ್ಕಾ[ಆ.11]: ವಿಮಾನ ಸಂಸ್ಥೆಯ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಂಸ್ಥೆಯ ವಿಮಾನವನ್ನೇ ಕದ್ದೊಯ್ದ ಘಟನೆ ಅಮೆರಿಕದಲ್ಲಿ ನಡೆದಿದೆ. 

ಸಿಯಾಟಲ್-ಟಕೋಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವಿಮಾನ ನಿಲ್ದಾಣದಿಂದ 30 ಮೈಲಿಗಳ ದೂರದಲ್ಲಿ ಪ್ರಯಾಣಿಕರ ರಹಿತವಾಗಿ ಚಲಿಸುತ್ತಿದ್ದ ವಿಮಾನ ಪತನಗೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. 

ವಿಮಾನಯಾನ ಸಂಸ್ಥೆಯ ನೌಕರ ವಿಮಾನ ಕದ್ದೊಯ್ದ ಬೆನ್ನಲ್ಲೆ ಎರಡು ಮಿಲಿಟರಿ ಎಫ್-15 ವಿಮಾನಗಳು ಆತನನ್ನು ಬೆನ್ನಟ್ಟಿದ್ದವು, ಆದರೆ ಸೇನಾ ವಿಮಾನಗಳಿಗೆ ಯಾವುದೆ ಹಾನಿ ಉಂಟಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಆತ್ಮಹತ್ಯೆಗೆ ಬಳಸಿದ ವಿಮಾನದ ಹಾರಾಟ ದೃಶ್ಯಗಳಲ್ಲಿ ದಾಖಲಾಗಿದ್ದು, ವಿಮಾನ ಪತನದೊಂಡಿದ್ದರಿಂದ ಹೊತ್ತಿದ ಕಿಡಿಯಿಂದ ದಟ್ಟ ಅರಣ್ಯ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ.

ಘಟನೆ ನಡೆಯುತ್ತಿದ್ದಂತೆ ಇದೊಂದು ಭಯೋತ್ಪಾದಕ ಕೃತ್ಯ ಎಂದುಕೊಳ್ಳಲಾಗಿತ್ತು. ಆದರೆ ನಂತರ ಇದು ಸಂಸ್ಥೆಯ ಸಿಬ್ಬಂದಿಯೇ ಮಾಡಿರುವ ಅನಾಹುತ ಎಂದು ಅಮೆರಿಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

loader