ಭಾರತೀಯ ರಾಯಭಾರಿ ಕಚೇರಿ ಸಮೀಪದಲ್ಲೇ ಡ್ರಾಂಟ್ನಿಂಗಾನ್ ಸ್ಟ್ರೀಟ್‌ನಲ್ಲಿರುವ ಕಿರಾಣಿ ಅಂಗಡಿಯೊಂದಕ್ಕೆ ದಾಳಿಕೋರ ಟ್ರಕ್ ನುಗ್ಗಿಸಿದ್ದು, ಇದರಿಂದಾಗಿ ಮೂವರು ಮೃತರಾಗಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಸ್ಟಾಕ್ಹೋಂ(ಏ.7): ಇತ್ತೀಚೆಗೆ ಬ್ರಿಟನ್ ರಾಜಧಾನಿ ಲಂಡನ್ ಬಳಿ ಉಗ್ರನೊಬ್ಬ ಪಾದಚಾರಿಗಳ ಮೇಲೆ ಕಾರು ಹರಿಸಿ ದಾಳಿ ನಡೆಸಿದ ಮಾದರಿಯಲ್ಲೇ, ಶುಕ್ರವಾರ ಸ್ವೀಡನ್ ರಾಜಧಾನಿ ಸ್ಟಾಕ್‌ಹೋಂನಲ್ಲೂ ಉಗ್ರನೊಬ್ಬ ಟ್ರಕ್ ದಾಳಿ ನಡೆಸಿದ್ದಾನೆ.

ಭಾರತೀಯ ರಾಯಭಾರಿ ಕಚೇರಿ ಸಮೀಪದಲ್ಲೇ ಡ್ರಾಂಟ್ನಿಂಗಾನ್ ಸ್ಟ್ರೀಟ್‌ನಲ್ಲಿರುವ ಕಿರಾಣಿ ಅಂಗಡಿಯೊಂದಕ್ಕೆ ದಾಳಿಕೋರ ಟ್ರಕ್ ನುಗ್ಗಿಸಿದ್ದು, ಇದರಿಂದಾಗಿ ಮೂವರು ಮೃತರಾಗಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಇದೊಂದು ಭಯೋತ್ಪಾದಕ ದಾಳಿ ಎಂದು ಸ್ವೀಡನ್ ಪ್ರಧಾನಿ ಸ್ಟೀನ್ ಲ್ವಾೆನ್ ಹೇಳಿದ್ದು, ಘಟನೆಯನ್ನು ಖಂಡಿಸಿದ್ದಾರೆ. ಘಟನೆಗೆ ಸಂಬಂಸಿ ಓರ್ವನನ್ನು ಬಂಸಲಾಗಿದೆ. ಸ್ಥಳದಲ್ಲಿ ಗುಂಡಿನ ಚಕಮಕಿಯ ಸದ್ದು ಕೇಳಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಈ ದಾಳಿ ನಡೆದ ಸ್ಥಳದಲ್ಲಿ 2010ರ ಡಿಸೆಂಬರ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು.

ಈ ನಡುವೆ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಜಾಗತಿಕ ಗಣ್ಯರು ಖಂಡಿಸಿದ್ದಾರೆ.