ಭಾರತದಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಕಿತ್ತು ಇಸ್ಲಾಮ್ ಸಾಮ್ರಾಜ್ಯ ಸ್ಥಾಪಿಸುವ ಗುರಿ ಈ ದಾರಿತಪ್ಪಿದ ಯುವಕರದ್ದು. ದೇಶದಲ್ಲಿ ಶರಿಯಾ ಕಾನೂನು ಜಾರಿಗೆ ತಂದರೆ ಎಲ್ಲಾ ಸಮುದಾಯಕ್ಕೂ ಒಳ್ಳೆಯದೇ ಎಂದು ಯುವಕನೊಬ್ಬ ಹೇಳಿರುವುದು ರಿಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿದೆ. ಸಲ್ಮಾನ್ ಮೊಹಿಯುದ್ದೀನ್, ಅಬ್ದುಲ್ ಅಬ್ರಾರ್ ಮತ್ತು ಅಬ್ದುಲ್ ಹನ್ನಾನ್ ಅವರನ್ನು ರಿಪಬ್ಲಿಕ್ ಟಿವಿ ಪತ್ರಕರ್ತೆ ಪ್ರೇಮಾ ಶ್ರೀದೇವಿ ರಹಸ್ಯವಾಗಿ ಇಂಟರ್ವ್ಯೂ ಮಾಡಿದ್ದಾರೆ.

ಬೆಂಗಳೂರು(ಮೇ 17): ಐಸಿಸ್ ಅಟ್ಟಹಾಸಕ್ಕೆ ಇಡೀ ಜಗತ್ತೇ ನಲುಗಿ ಹೋಗಿದೆ. ತನ್ನ ಕ್ರೌರ್ಯ ಕೃತ್ಯದಿಂದ ನಾಗರಿಕ ಸಮಾಜವೇ ಬೆಚ್ಚಿ ಬೀಳುವಂತಹ ಘಟನೆಗಳಿಗೆ ಈ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಕಾರಣವಾಗಿದೆ. 2002ರಲ್ಲಿ ಶುರುವಾದ ಈ ಸಂಘಟನೆ ಇಸ್ಲಾಮೀ ಸಾಮ್ರಾಜ್ಯ ಸ್ಥಾಪಿಸುವ ಗುರಿ ಹೊಂದಿದೆ. ಇದಕ್ಕಾಗಿ ಜಗತ್ತಿನ ವಿವಿಧ ದೇಶಗಳಿಂದ ಯುವಕರನ್ನು ತನ್ನ ಸಂಘಟನೆಯತ್ತ ಸೆಳೆಯುತ್ತಿದೆ. ಆದ್ರೂ ಇವರ ಆಸಕ್ತಿ ಭಾರತೀಯ ಯುವಕರ ಮೇಲೆಯೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಸುವರ್ಣ ನ್ಯೂಸ್​​ ಸೋದರ ಸಂಸ್ಥೆ ರಿಪಬ್ಲಿಕ್​ ಟಿವಿಯ ಪತ್ರಕರ್ತೆ ಪ್ರೇಮಾ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ. ಪ್ರೇಮ ಶ್ರೀಧರ್ ಮೂಲತಃ ಕನ್ನಡದವರು. ಈ ಐಸಿಸ್ ಬೆಂಬಲಿಗರ ಮಾತು ಕೇಳಿದ್ರೆ ನಿಮ್ಮ ಎದೆ ನಡುಗುತ್ತೆ. ಅಂದಹಾಗೆ ಈ ರಹಸ್ಯ ಕ್ಯಾಮೆರಾ ಕಾರ್ಯಾಚರಣೆ ದೇಶದಲ್ಲೇ ಮೊದಲು.

ಭಾರತದಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಕಿತ್ತು ಇಸ್ಲಾಮ್ ಸಾಮ್ರಾಜ್ಯ ಸ್ಥಾಪಿಸುವ ಗುರಿ ಈ ದಾರಿತಪ್ಪಿದ ಯುವಕರದ್ದು. ದೇಶದಲ್ಲಿ ಶರಿಯಾ ಕಾನೂನು ಜಾರಿಗೆ ತಂದರೆ ಎಲ್ಲಾ ಸಮುದಾಯಕ್ಕೂ ಒಳ್ಳೆಯದೇ ಎಂದು ಯುವಕನೊಬ್ಬ ಹೇಳಿರುವುದು ರಿಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿದೆ. ಸಲ್ಮಾನ್ ಮೊಹಿಯುದ್ದೀನ್, ಅಬ್ದುಲ್ ಅಬ್ರಾರ್ ಮತ್ತು ಅಬ್ದುಲ್ ಹನ್ನಾನ್ ಅವರನ್ನು ರಿಪಬ್ಲಿಕ್ ಟಿವಿ ಕನ್ನಡತಿ ಪತ್ರಕರ್ತೆ ಪ್ರೇಮಾ ಶ್ರೀದೇವಿ ರಹಸ್ಯವಾಗಿ ಇಂಟರ್ವ್ಯೂ ಮಾಡಿದ್ದಾರೆ.

ಸ್ಟಿಂಗ್ ಆಪರೇಷನ್ - 1

ಸಲ್ಮಾನ್ ಮೊಹ್ಯೂದ್ದೀನ್ ಇಂಟರ್ ವ್ಯೂ

ಸಲ್ಮಾನ್ : ನಾನ್ ಹೇಳ್ತಿರೋದು ಅದರಲ್ಲಿ ಎರಡು ವಿಷಯ ಇದೆ ಅಂತಾ...

ಪ್ರೇಮ : ಹೌದು, ಅಲ್ಲಿರೋದು ಎರಡು ವಿಷಯ... ಒಂದು ಪ್ರೇಮಕಥೆ...

ಸಲ್ಮಾನ್ : ಮತ್ತೊಂದು ಅಲ್ಲಿ ಏನಾಗ್ತಿದೆ ಅಂತಾ ಹುಡುಕೋದು. ಜೊತೆಗೆ ನಾವು ಅಲ್ಲಿ ಹೋಗಿ ಬಷಾರ್-ಅಲ್-ಅಸಾದ್ ಗಾಗಿ ಹೋರಾಡುತ್ತೇವೆ

ಪ್ರೇಮ : ನೀವು ಅಲ್ಲಿಗೆ ಹೋಗೋಕು ... ಮತ್ತು ಬಷಾರ್-ಅಲ್-ಅಸಾದ್ ಹೋರಾಟಕ್ಕೂ ಸಿದ್ಧರಿದ್ದೀರಿ.... ಅಲ್ವಾ

ಸಲ್ಮಾನ್ : ಹೌದು

ಪ್ರೇಮ : ಓಕೆ. ಐಸಿಸ್ ಜೊತೆಗೆ

ಸಲ್ಮಾನ್ : ಹೌದು

ಪ್ರೇಮ : ನಿಮ್ಮ ಮನಸ್ಸನ್ನ ಅದಕ್ಕಾಗಿಯೇ ಸಿದ್ಧಪಡಿಸಿ ಕೊಂಡಿದ್ದೀರ....

ಪ್ರೇಮ : ನೀವು ಹೇಗೆ ಹೋರಾಡ್ತೀರಾ..? ನಿಮಗೆ ಯಾವುದಾದರು ಶಸ್ತ್ರಾಸ್ತ್ರಗಳನ್ನು ಕೊಡ್ತಾರ? ತರಬೇತಿಗಳನ್ನು ಕೊಡ್ತಾರ?

ಸಲ್ಮಾನ್ : ಇಲ್ಲ

ಪ್ರೇಮ : ಹಾಗಾದ್ರೆ ನೀವು ಹೇಗೆ ಹೋರಾಡ್ತೀರಾ? ಅವರು ನಿಮಗೆ ಹೇಳಿ ಕೊಡ್ತಾರ?

ಸಲ್ಮಾನ್ : ಅವರು ನಮಗೆ ತರಬೇತಿ ನೀಡುವುದಾಗಿ ಹೇಳಿದ್ದಾರೆ

ಪ್ರೇಮ : ಯಾರು ಹೇಳಿದ್ದು ಅದನ್ನ?

ಸಲ್ಮಾನ್ : ಫೇಸ್ ಬುಕ್ ಗ್ರೂಪ್ ನಲ್ಲಿ ಮೇಡಂ.. ಅವರ ಜೊತೆ ನಾವು ಸಂಪರ್ಕದಲ್ಲಿ ಇರುತ್ತೇವೆ.

ಪ್ರೇಮ : ನಿಮಗೆ ಅಲ್ಲಿ ಯಾವ ರೀತಿಯ ತರಬೇತಿಗಳನ್ನ ಕೊಡ್ತಾರೆ?

ಸಲ್ಮಾನ್ : ನನಗೆ ಅದರ ಬಗ್ಗೆ ಗೊತ್ತಿಲ್ಲ...

ಪ್ರೇಮ : ಆದರೆ ಅವರು ಏನಂತ ಹೇಳಿದ್ರು...? ಏನಂತ ಹೇಳಿದ್ರು...?

ಸಲ್ಮಾನ್ : ಮೂರು ತಿಂಗಳು ಅಥವಾ ಎರಡು ತಿಂಗಳು ಯಾವುದೋ ತರಬೇತಿ ಕೊಡ್ತೀವಿ ಅಂತಾ ಅವರು ಹೇಳಿದ್ರು.

ಪ್ರೇಮ : ಊಂ... ಅವರು ಎಲ್ಲಿ ನಿಮಗೆ ತರಬೇತಿ ನೀಡೋದು?

ಸಲ್ಮಾನ್ : ನನಗೆ ಗೊತ್ತಿಲ್ಲ....

ಪ್ರೇಮ : ಯಾವ ವಿಷಯ ನಿಮ್ಮನ್ನ ಐಸಿಸ್ ಕಡೆಗೆ ಸೆಳೆಯಿತು?

ಸಲ್ಮಾನ್ : ಮೇಡಂ... ಮೊದಲನೇಯದಾಗಿ ಅಲ್ಲಿನ ಸುನ್ನಿಗಳನ್ನ ಬಷಾರ್-ಅಲ್-ಅಸಾದ್ ಕೊಂದು ಹಾಕುತ್ತದೆ...

ಪ್ರೇಮ : ಊಂ.. ಕೆಮಿಕಲ್ ವೆಪನ್

ಸಲ್ಮಾನ್ : ಇಲ್ಲ... ಕೆಮಿಕಲ್ ವೆಪನ್ ಗಳನ್ನ ಆನಂತರ ಬಳಸಲಾಗುತ್ತದೆ..

ಪ್ರೇಮ : ಆನಂತರ...?

ಸಲ್ಮಾನ್ : ಆದರೆ ಪ್ರಾರಂಭದಲ್ಲಿ ಅದರ ವರದಿ ಭಯಂಕರವಾಗಿತ್ತು. ಮುನ್ನೂರು ಜನರ ಕೊಲೆ, 300,000 ಜನರ ಕೊಲೆ 400,000 ಜನರ ಕೊಲೆ ... ಖಂಡಿತವಾಗಿ, ಯಾರಾದ್ರು ಒಬ್ಬ ವ್ಯಕ್ತಿ ದೈರ್ಯವಾಗಿ ನಿಂತು ಆತನ ವಿರುದ್ಧ ಹೋರಾಡಬೇಕು ಅಂತಾ ನಾವು ಬಯಸುತ್ತೇವೆ.

ಪ್ರೇಮ : ಊಂ. ನೀವು ಕೂಡ ಅಲ್​ ಬರಾ ಜೊತೆ ಸಂಪರ್ಕದಲ್ಲಿದ್ದೀರಾ

ಸಲ್ಮಾನ್ : ಹೌದು ಮೇಡಂ, ಪ್ರತಿಯೊಬ್ಬರೂ ಇದ್ದಾರೆ...

ಪ್ರೇಮ : ಹಾಗಾದ್ರೆ, ಅಲ್ ಬರಾ ನಿಮಗೆ ಏನಂತಾ ಹೇಳಿದ್ದಾರೆ? ಆ ಸಮಯದಲ್ಲಿ ಆತ ಸಿರಿಯಾದಲ್ಲಿದ್ದರು

ಸಲ್ಮಾನ್ : ಇಲ್ಲ. ಅವರು ಸ್ಥಳದಲ್ಲಿ ಏನಾಗ್ತಿತ್ತು ಎಂದು ನಮಗೆ ಮಾಹಿತಿ ನೀಡ್ತಾ ಇದ್ರು.

ಸಲ್ಮಾನ್ : ಅವರ ರೀತಿ ಸಿರಿಯಾದಲ್ಲಿ ತುಂಬಾ ಜನರು ಇರ್ತಾರೆ ಮೇಡಂ... ನನಗೆ ಅವರೆಲ್ಲರ ಹೆಸರು ನೆನಪಿಲ್ಲ..

ಪ್ರೇಮ : ಓಕೆ.. ಆದರೆ ಇವರೆಲ್ಲರು ಐಸಿಸ್ ವ್ಯಕ್ತಿಗಳು

ಸಲ್ಮಾನ್ : ಹೌದು, ಕೆಲವರು ಇದ್ದಾರೆ

ಪ್ರೇಮ : ಹಾಗಾದ್ರೆ ನೀವು ಅವರ ಜೊತೆ ನೇರ ಸಂಪರ್ಕದಲ್ಲಿದ್ದೀರಿ

ಸಲ್ಮಾನ್ : ಹೌದು, ಕೆಲವರ ಜೊತೆ

ಪ್ರೇಮ : ಹಾಗಾದ್ರೆ ಅಲ್ಲಿ ಈ ಸಂಬಂಧ ಏನೆಲ್ಲಾ ಮಾತನಾಡ್ತಾರೆ?

ಸಲ್ಮಾನ್ : ಸಾಮಾನ್ಯವಾಗಿ, ಸ್ಥಳದಲ್ಲಿ ಏನಾಗ್ತಿದೆ ಅನ್ನೋದರ ಬಗ್ಗೆ ಈ ವ್ಯಕ್ತಿ ಮಾಹಿತಿ ಕೊಡ್ತಾರೆ. ಯಾಕಂದ್ರೆ ಮಾಧ್ಯಮಗಳಲ್ಲಿ ಇದೊಂದು ಪ್ರಮುಖ ವರದಿಯಾಗುತ್ತದೆ.

ಪ್ರೇಮ : ಊಂ....

ಸಲ್ಮಾನ್ : ಮತ್ತು, ಕೆಲವು ವೇಳೆ ಆತ ವರದಿಗಳನ್ನ ವಿರೋಧಿಸಿದ್ರೆ, ಕೆಲವು ವೇಳೆ ಒಪ್ಪಿಕೊಳ್ತಿದ್ದ..

ಪ್ರೇಮ : ನೀವು ಐಸಿಸ್ ವ್ಯಕ್ತಿಗಳ ಜೊತೆ ಮಾತನಾಡಿದ್ದೀರ?

ಸಲ್ಮಾನ್ : ಹೌದು

--------------

ಸ್ಟಿಂಗ್ ಆಪರೇಷನ್ - 2

ಅಬ್ದುಲ್ ಹನ್ನಾನ್ ಇಂಟರ್ ವ್ಯೂ

ಪ್ರೇಮ : ಮೊಹಮ್ಮದ್ ಇಬನ್ ಅಲ್ ಬರಾ.... ನೀವು ಇವರ ಜೊತೆ ಸಂಪರ್ಕದಲ್ಲಿದ್ದೀರಾ?

ಹನ್ನಾನ್ : ಹೌದು

ಪ್ರೇಮ : ಎಲ್ಲಿದ್ದಾನೆ ಆತ? ಅತ ಸಿರಿಯನ್ ವ್ಯಕ್ತಿನಾ?

ಹನ್ನಾನ್ : ಆತ ಸಿರಿಯನ್ ಮೂಲದ ಆಸ್ಟ್ರೇಲಿಯನ್ ವ್ಯಕ್ತಿ

ಹನ್ನಾನ್ : ನಾನು ಆತನಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದೆ, ಆತ ನನ್ನ ರಿಕ್ವೆಸ್ಟ್ ಅನ್ನು ಒಪ್ಪಿಕೊಂಡಿದ್ದಾನೆ..

ಪ್ರೇಮ : ಊಂ... ಫೇಸ್​​ಬುಕ್​​ನಲ್ಲಾ?

ಹನ್ನಾನ್ : ಹೌದು, ಫೇಸ್​ಬುಕ್ ನಲ್ಲಿ...

ಪ್ರೇಮ : ಓಕೆ.. ಮತ್ತೆ

ಹನ್ನಾನ್ : ಆತನಿಗೆ ಸುಮಾರು 5 ಸಾವಿರ ಜನ ಸ್ನೇಹಿತರಿದ್ದಾರೆ.. ಆತನ ಫ್ರೆಂಡ್ ಲಿಸ್ಟ್ ಭರ್ತಿಯಾಗಿದೆ

ಪ್ರೇಮ : ಹಾಗಾದ್ರೆ ನೀವು ಏನ್ ಮಾಡಬೇಕು ಅಂತಿದ್ದೀರಾ? ನೀವು ಅಲ್ಲಿಗೆ ಹೋಗಬೇಕು ಅಂತಿದ್ದೀರಾ?

ಹನ್ನಾನ್ : ಸಿರಿಯಾಗೆ ಹೋಗ್ತೀನಿ..

ಪ್ರೇಮ : ನೀವು ಸಿರಿಯಾಗೆ ಹೋಗಬೇಕು ಅಂತಿದ್ದೀರ.. ಹಾಗಾದ್ರೆ ಅಲ್ಲಿ ಏನ್ ಮಾಡಬೇಕು ಅಂತಾ ಇದ್ದೀರಾ?

ಹನ್ನಾನ್ : ಆತನ ಜೊತೆ ಕೆಲಸ ಮಾಡ್ಕೋಂಡು ಇರ್ತೀನಿ...

ಪ್ರೇಮ : ಮೊಹಮ್ಮದ್ ಇಬನ್ ಅಲ್ ಬರಾ ಜೊತೆಯಲ್ಲಾ?

ಹನ್ನಾನ್ : ಹೌದು

ಪ್ರೇಮ : ಹಾಗಾದ್ರೆ ನಿಮಗೆ ಗೊತ್ತಿದೆ ನೀವು ಸಾಯ್ತಿರ ಅಂತಾ... ಬಹುಶಃ ನೀವು ಸಾಯಬಹುದು... ನೀವು ನಿಮ್ಮ ಜೀವನವನ್ನ ಕಳೆದುಕೊಳ್ಳಬಹುದು..

ಹನ್ನಾನ್ : (ಯೋಚಿಸಿ) ಅದು ಅಪಾಯಕಾರಿ

ಪ್ರೇಮ : ಇದು ನಿಮಗೆ ಅಪಾಯ ಅನ್ಸಿಲ್ವಾ?

ಹನ್ನಾನ್ : ಅಪಾಯ ಇದೆ...

ಪ್ರೇಮ : ನೀನಿನ್ನು ಯುವಕ... ನಿನ್ನ ಜೀವನ ಇನ್ನೂ ತುಂಬಾ ಇದೆ...

ಹನ್ನಾನ್ : ನನ್ನ ಪ್ರಕಾರ, ನಾನು ಕೇವಲ ನನಗಾಗಿ ಸ್ವಾರ್ಥಿಯಾಗೋಕೆ ಇಷ್ಟ ಪಡೊಲ್ಲ....

ಹನ್ನಾನ್ : ಅವರು ನನಗೆ ಹೇಳಿದ್ದೇನೆಂದ್ರೆ... ನೀವು ಟರ್ಕಿ ತಲುಪಿದಾಗ ಒಂದು ಮೊಬೈಲ್ ಫೋನ್ ಚಿಪ್ ಮತ್ತು ಸಿಮ್ ತೆಗೆದುಕೊಳ್ಳಿ ಎಂದ್ರು. ನನಗೆ ಆ ಸಿಮ್ ನ ಹೆಸರು ಮರೆತೋಗಿದೆ. ಆದ್ರೆ ಅವರು ಸಿಮ್ ನ ಹೆಸರು ಹೇಳಿದ್ರು. ನಂತ್ರ ನಿಮ್ಮ ಪಾಸ್​ಪೋರ್ಟ್​ ತೋರಿಸಿ ಯಾವುದಾದರು ಅಗ್ಗವಾದ ಲಾಡ್ಜ್ ನಲ್ಲಿ ಉಳಿದುಕೊಂಡು, ವೈ-ಫೈ ಮೂಲಕ ನನಗೆ ಮೆಸೇಜ್ ಮಾಡು, ಅವರು ಬರ್ತಾರೆ ಅಂತಾ ಹೇಳಿದ್ರು.

ಪ್ರೇಮ : ಮೆಸೇಜ್ ಯಾರಿಗೆ?

ಹನ್ನಾನ್ : ಮೊಹಮ್ಮದ್ ಇಬನ್ ಅಲ್ ಬರಾ

ಪ್ರೇಮ : ಊಂ

ಹನ್ನಾನ್ : ನಂತ್ರ ನೀನು ವೈ-ಫೈ ಮೂಲಕ ನನಗೆ ಮೆಸೇಜ್ ಮಾಡು, ಯಾರಾದ್ರು ಬರ್ತಾರೆ.. ನಾನು ನನ್ನ ಸ್ನೇಹಿತರನ್ನ ಕಳುಹಿಸ್ತೀನಿ ಅಥವಾ ನಾನೇ ಬರ್ತೀನಿ ಎಂದ್ರು.

========================

ಸ್ಟಿಂಗ್ ಆಪರೇಷನ್ - 3

ಅಬ್ದುಲ್ ಅಬ್ರಾರ್ - ಐಸಿಸ್ ಸಪೋರ್ಟ್​ ನೆಟ್​ವರ್ಕ್​

ಅಬ್ದುಲ್ : ಅವರು ಪುಟ್ಟ ಪುಟ್ಟ ಮಕ್ಕಳ ಬಳಿ ಕಟುವಾಗಿ ನಡ್ಕೋತಾರೆ.. ಗನ್ ಮೂಲಕ ಕೊಲೆ ಮಾಡ್ತಾರೆ..

ಪ್ರೇಮ : ಅವ್ರನ್ನ ಯಾರು ಕೊಲ್ತಾರೆ?

ಅಬ್ದುಲ್ : ಇಸ್ರೇಲೀಸ್...

ಪ್ರೇಮ : ಇಸ್ರೇಲೀಸ್...?

ಅಬ್ದುಲ್ : ಹೌದು, ಇರಾನ್ ಮತ್ತು ಇರಾಕ್ ... ಈ ಎರಡು ದೇಶಗಳೇ ಇದನ್ನ ಮಾಡ್ತಿರೋದು..

ಪ್ರೇಮ : ಐಸಿಸ್ ಯಾರ ವಿರುದ್ಧ ಹೋರಾಟ ಮಾಡ್ತಿರೋದು?

ಅಬ್ದುಲ್ : ಐಸಿಸ್ ಅಲ್ವಾ? ಜಸ್ಟ್ ಎ ಸೆಕೆಂಡ್... ಐಸಿಸ್ ಅಂದ್ರೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಅಂಡ್ ಸಿರಿಯಾ... ಅವರು ಇರಾಕ್ ವಿರುದ್ಧ ಹೋರಾಡ್ತಿದ್ದಾರೆ.

ಪ್ರೇಮ : ನಿಮಗೆ ಐಸಿಸ್ ಯಾರ ವಿರುದ್ಧ ಹೋರಾಟ ಮಾಡ್ತಿದೆ ಅಂತಾ ಗೊತ್ತಿಲ್ವ? ಮತ್ತೆ ನೀವು ಐಸಿಸ್ ಜೊತೆ ಕೆಲಸ ಮಾಡೋಕೆ ಹೋಗ್ತಿದ್ದೀರಾ...

ಅಬ್ದುಲ್ : ಮೇಡಂ... ಅವರು ಇರಾಕ್ ವಿರುದ್ಧ ಹೋರಾಡ್ತಿದ್ದಾರೆ...

ಪ್ರೇಮ : ಬಷಾರ್ ಅಲ್ ಅಸಾದ್ ವಿರುದ್ಧ ಅವರು ವೀಡಿಯೋಗಳನ್ನ ತೋರಿಸ್ತಾರ?

ಅಬ್ದುಲ್ : ಬಷಾರ್ ಅಲ್ ಅಸಾದ್ ಹೆಸರನ್ನ ನಾನು ಇತ್ತೀಚೆಗಷ್ಟೇ ಕೇಳಿದ್ದು..

ಪ್ರೇಮ : ನೀವು ಏನನ್ನು ತಿಳಿದುಕೊಳ್ಳದೆ ಅಲ್ಲಿಗೆ ಹೋಗಕೆ ಸಿದ್ಧವಾಗಿದ್ದೀರಾ?

ಅಬ್ದುಲ್ : ನಾನು ಸಮಯದ ಬಗ್ಗೆ ಮಾತನಾಡ್ತಿದ್ದೀನಿ.. ಆ ಸಮಯದಲ್ಲಿ ನನಗೆ ಅವರ ಬಗ್ಗೆ 1% ಕೂಡ ಗೊತ್ತಿರಲಿಲ್ಲ.

ಪ್ರೇಮ : ಆದರೆ ನೀವು ಆ ವೀಡಿಯೋ ನೋಡಿರಲೇ ಬೇಕು... ಅಬ್ದುಲ್ಹಾ ನಿಮೆಗ ಅದನ್ನ ತೋರಿಸಿರಲೇ ಬೇಕು..

ಅಬ್ದುಲ್ : ಹೌದು, ಆತ ನನಗೆ ಫೇಸ್​​ಬುಕ್ ನಲ್ಲಿ ಅದನ್ನು ತೋರಿಸಿದ್ದಾನೆ. ಅಬ್ದುಲ್ಹಾ ತಾನೇ ನನಗೆ ಆ ವೀಡಿಯೋ ತೋರಿಸಿದ್ದಾನೆ. ಅಲ್ಲಿನ ಜನರು ಯಾವ ರೀತಿ ಹಿಂಸೆ ಕೊಡ್ತಾರೆ ಅನ್ನೋದನ್ನ ತೋರಿಸಿದ್ದಾನೆ.

ಪ್ರೇಮ : ನೀವು ಅದರಲ್ಲಿ ಏನು ನೋಡಿದ್ರಿ... ಆ ವೀಡಿಯೋನೆ ನಿಮಗೆ ಅಲ್ಲಿಗೆ (ಐಸಿಸ್) ಸೇರೋಕೆ ಸ್ಪೂರ್ತಿ ಆಯ್ತ?

ಅಬ್ದುಲ್ : ಎಲ್ಲವೂ... ಅವರು ಜನರನ್ನ ಕೊಲ್ಲೋ ರೀತಿ... ಸಣ್ಣ ಮಕ್ಕಳನ್ನ ಕೊಲ್ಲೋ ರೀತಿ... ಮಹಿಳೆಯರನ್ನ ರೇಪ್ ಮಾಡಿ, ಅವರ ಧ್ವನಿಯನ್ನ ರೆಕಾರ್ಡ್​ ಮಾಡೊ ರೀತಿ...

ಪ್ರೇಮ : ಆತ ಐಸಿಸ್ ಬಗ್ಗೆ ಏನ್ ಹೇಳಿದ್ದಾನೆ?

ಅಬ್ದುಲ್ : ನಾನು ಈಗ ನಿಮಗೆ ಏನ್ ಹೇಳಿದ್ನೋ ಅದನ್ನೇ...

ಪ್ರೇಮ : ಐಸಿಸ್ ಒಳ್ಳೆ ಕೆಲಸ ಮಾಡ್ತಿದೆ ಎಂದು ಆತ ಹೇಳಿದ್ದಾನ?

ಅಬ್ದುಲ್ : ಹೌದು... ಐಸಿಸ್ ನಮನ್ನ ಬೆಂಬಲಿಸುತ್ತೆ... ಮುಸಲ್ಮಾನರನ್ನ ಬೆಂಬಲಿಸುತ್ತೆ... ಆತ ನನಗೆ ಇದನ್ನ ಹೇಳಿದ್ದಾನೆ...

ಪ್ರೇಮ : ಆಗಲಿ.... ಆತ ನಿಮಗೆ ಹೇಳಿದ್ದಾನೆ.. ನೀವು ಆತನನ್ನ ನಂಬ್ತೀರಾ?

ಅಬ್ದುಲ್ : ಹೌದು, ನಾನೊಬ್ಬ ಅಭಿಮಾನಿ

ಪ್ರೇಮ : ಅಬ್ದುಲ್ಹಾ ಯಾರನ್ನ ಇಷ್ಟ ಪಡ್ತಾರೆ... ಯಾರು ಆತನ ಜೊತೆ ಇರ್ತಾರೆ... ಆತ ಯಾರನ್ನ ಇಷ್ಟ ಪಡ್ತಾನೆ

ಅಬ್ದುಲ್ : ಆತ ಅಬು ಬಕರ್ ಅಲ್ ಬಗ್ದಾದಿಯನ್ನ ಇಷ್ಟ ಪಡ್ತಾನೆ...

ಪ್ರೇಮ : ಆಗಲಿ

ಅಬ್ದುಲ್ : (ನಗು)

ಪ್ರೇಮ : ಯಾಕೆ ಆತನನ್ನ ಇಷ್ಟ ಪಡ್ತಾನೆ? ಆತನಲ್ಲಿ ಅಂತಾದ್ದೇನಿದೆ?

ಅಬ್ದುಲ್ : ಯಾಕಂದ್ರೆ ಆತ ಮುಸಲ್ಮಾನರನ್ನ ಬೆಂಬಲಿಸ್ತಾನೆ.. ಆತ ಒಬ್ಬ ನಿಜವಾದ ನಾಯಕ.. ಇನ್ನುಳಿದವರು ಸುಳ್ಳುಗಾರರು... ಅಬ್ದುಲ್ಹಾ ಇದನ್ನ ಯಾವಾಗ್ಲು ಹೇಳ್ತಿರ್ತಾನೆ.

(ಸಂದರ್ಶನ ನಡೆಸಿದ ಪ್ರೇಮಾ ಶ್ರೀದೇವಿ ಅವರು ರಿಪಬ್ಲಿಕ್ ವಾಹಿನಿಯ ಸಂಪಾದಕರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಲೋಕಾರ್ಪಣೆಗೊಂಡ ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಪ್ರತಿ ದಿನವೂ ಸ್ಫೋಟಕ ಸುದ್ದಿಗಳನ್ನು ಹೊತ್ತುತಂದು ದೇಶದ ಜಾಗೃತಿಯ ಕೆಲಸ ಮಾಡುತ್ತಿದೆ. ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್'ಗೆ ಸೇರಿದ ಈ ಇಂಗ್ಲೀಷ್ ನ್ಯೂಸ್ ಚಾನೆಲ್'ನಲ್ಲಿ ಐಸಿಸ್ ನೆಟ್ವರ್ಕ್ ಬಗ್ಗೆ ಇನ್ನಷ್ಟು ಶಾಕಿಂಗ್ ನ್ಯೂಸ್'ಗಳು ಬಿತ್ತರಗೊಳ್ಳಲಿವೆ)