ಸ್ಟೀವ್ ಸ್ಮಿತ್'ಗೆ ಐಪಿಎಲ್'ನಲ್ಲಿ ಹೊಸ ಜವಾಬ್ದಾರಿ

Steve Smith named Rajasthan Royals captain
Highlights

ತಂಡವೊಂದು ನೇರ ಪ್ರಸಾರದ ಮೂಲಕ ನಾಯಕನನ್ನು ಘೋಷಿಸಿದ್ದು ಐಪಿಎಲ್‌ನಲ್ಲಿ ಇದೇ ಮೊದಲು.

ನವದೆಹಲಿ(ಫೆ.25): ಐಪಿಎಲ್ 11ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ. ಶನಿವಾರ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಪ್ರಸಾರ ಹಕ್ಕು

ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ನಾಯಕನನ್ನು ಘೋಷಿಸಿತು. ತಂಡವೊಂದು ನೇರ ಪ್ರಸಾರದ ಮೂಲಕ ನಾಯಕನನ್ನು ಘೋಷಿಸಿದ್ದು ಐಪಿಎಲ್‌ನಲ್ಲಿ ಇದೇ ಮೊದಲು. ಕಳೆದ ಆವೃತ್ತಿಯಲ್ಲಿ ಪುಣೆ ತಂಡವನ್ನು ಮುನ್ನಡೆಸಿದ್ದ ಸ್ಮಿತ್ ಈ ಹಿಂದೆ ರಾಜಸ್ಥಾನ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು.

loader