ದೋಷಪುರಿತ 'ಸಿವಿ' 50 ಸಾವಿರ ಡಾಲರ್(ಭಾರತೀಯ ಮೌಲ್ಯದಲ್ಲಿ 32 ಲಕ್ಷ ರೂ.)ಗೆ ಹರಾಜಾಗುತ್ತಿದೆ.

ಈ ಸಿವಿಯಮ್ಮ ಜಾಬ್ಸ್ ಅವರು ಅರ್ಜಿಸಿದ್ದು 1973ರಲ್ಲಿ. ತಾವು 18ನೇ ವಯಸ್ಸಿನಲ್ಲಿರುವಾಗ ಉದ್ಯೋಗವೊಂದಕ್ಕೆ ಜಾಬ್ಸ್ ಅವರು ಅರ್ಜಿ ಸಲ್ಲಿಸಿದ್ದರು. ಅಮೆರಿಕಾದ ಪೋರ್ಟ್'ಲ್ಯಾಂಡ್'ನ ಕಾಲೇಜಿನಲ್ಲಿ ಡ್ರಾಪ್ಔಟ್ ವಿದ್ಯಾರ್ಥಿಯಾಗಿದ್ದರು. ಅವರು ಸಲ್ಲಿಸಿರುವ ಅರ್ಜಿಯಲ್ಲಿ ಅನೇಕ ದೋಷಪೂರಿತ ಅಂಶಗಳಿವೆ.

ತಾವು ಯಾವ ಕಂಪನಿಗೆ ಉದ್ಯೋಗ ಸಲ್ಲಿಸುತ್ತಿದ್ದೇನೆ ಎಂಬುದರ ಬಗ್ಗೆ ಮಾಹಿತಿಯಿಲ್ಲ.ಜನ್ಮ ದಿನಾಂಕವನ್ನು ನಮೂದಿಸಿದ್ದು, ವಾಹನ ಚಾಲನೆಯ ಪರವಾನಗಿ ಹೊಂದಿರುವುದಾಗಿ ತಿಳಿಸಿದ್ದಾರೆ. ಕೌಶಲ್ಯಗಳಲ್ಲಿ ಕಂಪ್ಯೂಟರ್ ವಿನ್ಯಾಸ ತಂತ್ರಜ್ಞಾನ, ಕ್ಯಾಲುಕಲೇಟರ್ ಜ್ಞಾನವಿದ್ದು,ವಿಶೇಷ ಕೌಶಲ್ಯಗಳಲ್ಲಿ ವಿದ್ಯನ್ಮಾನ ತಂತ್ರಜ್ಞಾನ ಹಾಗೂ ಆಸಕ್ತಿಗಳಲ್ಲಿ ಡಿಜಿಟಲ್ ಇಂಜಿನಿಯರ್ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾರ್ಚ್ 8-15ರೊಳಗೆ ಆರ್'ಆರ್ ಹರಾಜು ಕಂಪನಿಯಿಂದ ಹರಾಜಾಗಲಿದೆ.