ವಿಶ್ವ ವಿಖ್ಯಾತ ವಿಜ್ಞಾನಿ ಸ್ಟೀಫನ್ ವಿಲಿಯಂ ಹಾಕಿಂಗ್ (76) ಲಂಡನ್'ನಲ್ಲಿರುವ ಕೇಂಬ್ರಿಡ್ಜ್ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ನವದೆಹಲಿ (ಮಾ. 14): ವಿಶ್ವ ವಿಖ್ಯಾತ ವಿಜ್ಞಾನಿ ಸ್ಟೀಫನ್ ವಿಲಿಯಂ ಹಾಕಿಂಗ್ (74) ಲಂಡನ್'ನಲ್ಲಿರುವ ಕೇಂಬ್ರಿಡ್ಜ್ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವ ಪ್ರಸಿದ್ಧಿ ಪಡೆದಿದ್ದ ಸ್ವೀಫನ್ ಹಾಕಿಂಗ್ ನರರೋಗ, ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಕಪ್ಪುರಂದ್ರ, ಕ್ವಾಂಟಮ್ ಗುರುತ್ವಾಕರ್ಷಣೆ ವಿಚಾರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಆಲ್ಬರ್ಟ್ ಐನ್ಸ್ಟೀನ್ರ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಬಗ್ಗೆ ಅಧ್ಯಯನ ನಡೆಸಿದ್ದರು. ಬಳಿಕ ತನ್ನ ವಿಶಿಷ್ಟ ಸಿದ್ಧಾಂತಗಳ ಮೂಲಕ ವಿಶ್ವಪ್ರಸಿದ್ಧಿ ಪಡೆದರು. ಕಪ್ಪು ರಂಧ್ರ ಬಗ್ಗೆ ಸೃಷ್ಟಿಗೆ ಕಾರಣವಾದ ಅಂಶಗಳನ್ನು ಪತ್ತೆ ಹಚ್ಚಿದ್ದರು. ಮಹಾವಿಸ್ಫೋಟದಿಂದ ಕಪ್ಪು ರಂದ್ರ ಸೃಷ್ಟಿ ಎಂಬುದನ್ನು ತೋರಿಸಿದ್ದರು ವಿಲಿಯಂ ಹಾಕಿಂಗ್!
ಹಾಕಿಂಗ್’ಗೆ ಕುಳಿತುಕೊಳ್ಳಲು, ಮಾತನಾಡಲು ಬರುತ್ತಿರಲಿಲ್ಲ. ವಿಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಯ ಮೂಲಕ ವಿಶ್ವ ಗಮನ ಸೆಳೆದಿದ್ದರು. 1942, ಜನವರಿ 8ರಂದು ಇಂಗ್ಲೆಂಡ್ನ ಆಕ್ಸಫಡ್ನಲ್ಲಿ ಸ್ಫೀಫನ್ ಜನಿಸಿದರು. ಯುವಕನಾಗಿದ್ದಾಗ ಸ್ಪೀಫನ್ ಹಾಕಿಂಗ್ ನರರೋಗಕ್ಕೆ ತುತ್ತಾಗಿದ್ದರು. ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಎಂಬ ರೋಗಕ್ಕೆ ತುತ್ತಾಗಿದ್ದರು. ಬಳಿಕ ವ್ಹೀಲ್ ಚೇರ್’ನಲ್ಲೇ ಕುಳಿತು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು.
