ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಏರ್’ಪೋರ್ಟ್​ ರಸ್ತೆಯಲ್ಲಿ ಸಮೀಕ್ಷೆ ನಡೆಸಿದರು.  ಬಳಿಕ ಮಾತಾಡಿದ ಅವರು, ಸ್ಟೀಲ್ ಬ್ರಿಡ್ಜ್​ ನಿರ್ಮಾಣ ಯಾವುದೇ ಕಾರಣಕ್ಕೂ ನಿಲ್ಲಲ್ಲ ಎಂದು  ಹೇಳಿದ್ದಾರೆ.

ಬೆಂಗಳೂರು (ಅ.18): ಬೆಂಗಳೂರಿನಲ್ಲಿ ಬಿಡಿಎ ಉದ್ದೇಶಿಸಿರುವ ಉಕ್ಕಿನ ಮೇಲ್ಸೇತುವೆ ಭಾರೀ ವಿವಾದ ಎಬ್ಬಿಸಿದೆ. ಚಾಲುಕ್ಯ ಸರ್ಕಲ್​​ನಿಂದ ಹೆಬ್ಬಾಳದವರೆಗೂ ಸ್ಟೀಲ್ ಬ್ರಿಡ್ಜ್​ ನಿರ್ಮಾಣವಾಗಲಿದೆ.

ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಏರ್’ಪೋರ್ಟ್​ ರಸ್ತೆಯಲ್ಲಿ ಸಮೀಕ್ಷೆ ನಡೆಸಿದರು. ಬಳಿಕ ಮಾತಾಡಿದ ಅವರು, ಸ್ಟೀಲ್ ಬ್ರಿಡ್ಜ್​ ನಿರ್ಮಾಣ ಯಾವುದೇ ಕಾರಣಕ್ಕೂ ನಿಲ್ಲಲ್ಲ ಎಂದು ಹೇಳಿದ್ದಾರೆ.

ಆದರೆ ಕೆಂಪೇಗೌಡ ಏರ್​ಪೋರ್ಟ್ ರಸ್ತೆ ಮೇಲಿನ ಸಂಚಾರ ಒತ್ತಡ ಶಮನಕ್ಕೆ ಸರ್ಕಾರ ಮೂರು ಪರ್ಯಾಯ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿದೆ. ಪರ್ಯಾಯ ರಸ್ತೆಗಳ ಅಭಿವೃದ್ಧಿಗೆ ಒತ್ತು ಕೊಟ್ಟಿರುವ ಸರ್ಕಾರ 300 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೊದಲ ಪರ್ಯಾಯ ಮಾರ್ಗ ಹೆಣ್ಣೂರು ಮುಖ್ಯರಸ್ತೆಯಿಂದ ಬಾಗಲೂರು ವೃತ್ತ - ಬಂಡಿಕೊಡಿಗೇಹಳ್ಳಿ - ಮೈಲನಹಳ್ಳಿ ಮೂಲಕ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲಿದೆ.