Asianet Suvarna News Asianet Suvarna News

ಪರಿಷತ್‌ನಲ್ಲಿ  ಪ್ರತಿಧ್ವನಿಸಿದ ಸ್ಟೀಲ್ ಫ್ಲೈಓವರ್

ಈ ಫ್ಲೈಓವರ್​​’ನಿಂದ ವಾಹನ ದಟ್ಟಣೆ, ಟ್ರಾಫಿಕ್ ಕಿರಿ ಕಿರಿಯಿಂದ ಮುಕ್ತಿ ಸಿಗಲಿದೆ ಎಂದ ಜಾರ್ಜ್, ಯೋಜನೆಗೆ ಒಟ್ಟಾರೆ  4 ಎಕರೆ 28 ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಜಾರ್ಜ್ ಹೇಳಿದ್ದಾರೆ.

Steel FlyOver Discussed in Legislative Council

ಬೆಳಗಾವಿ (ಡಿ.01): ನಾಗರಿಕರ ವಿರೋಧದ ನಡುವೆಯೂ ಸ್ಟೀಲ್ ಫ್ಲೈಓವರ್ ನಿರ್ಮಾಣಕ್ಕೆ ಹೆಜ್ಜೆಯಿಟ್ಟಿರುವ ಸರ್ಕಾರ ಇಂದು ವಿಧಾನಪರಿಷತ್​ನಲ್ಲಿ ಉತ್ತರ ನೀಡಿದೆ.

ಶಾಸಕ ಗಣೇಶ್ ಕಾರ್ಣಿಕ್ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಜೆ ಜಾರ್ಜ್, ಬೆಂಗಳೂರಿನ ಬಸವೇಶ್ವರ ಸರ್ಕಲ್​ನಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆವರೆಗೆ ಉಕ್ಕಿನ ಮೇಲು ಸೇತುವೆ ನಿರ್ಮಾಣ ಮಾಡುತ್ತಿರುವುದಾಗಿ ತಿಳಿಸಿದರು.

ಈ ಫ್ಲೈಓವರ್​​’ನಿಂದ ವಾಹನ ದಟ್ಟಣೆ, ಟ್ರಾಫಿಕ್ ಕಿರಿ ಕಿರಿಯಿಂದ ಮುಕ್ತಿ ಸಿಗಲಿದೆ ಎಂದ ಜಾರ್ಜ್, ಯೋಜನೆಗೆ ಒಟ್ಟಾರೆ  4 ಎಕರೆ 28 ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಜಾರ್ಜ್ ಹೇಳಿದ್ದಾರೆ.

ಫ್ಲೈಓವರ್​ಗೆ  812 ಮರಗಳನ್ನು ಕತ್ತರಿಸಬೇಕಾಗುತ್ತದೆ. ಹಾಗೂ 24 ತಿಂಗಳಲ್ಲಿ ಯೋಜನೆ ಮುಗಿಸುತ್ತೇವೆ ಎಂದು ಜಾರ್ಜ್ ತಿಳಿಸಿದರು.  ಸದ್ಯಕ್ಕೆ ಟೋಲ್ ಸಂಗ್ರಹಿಸುವ ಯಾವುದೆೇ ಯೋಚನೆ ಇಲ್ಲ ಎಂದೂ ಕೂಡಾ ಜಾರ್ಜ್ ವಿಧಾನಪರಿಷತ್​ಗೆ ಹೇಳಿದರು.

Follow Us:
Download App:
  • android
  • ios