ಬೆಂಗಳೂರು(ನ.25): ರಾಜ್ಯ ಸರ್ಕಾರ ಶತಾಯಗತಾಯ ನಿರ್ಮಿಸಲು ಹೊರಟಿದ್ದ ಸ್ಟೀಲ್ ಫ್ಲೈ ಓವರ್ ನಿರ್ಮಾಣಕ್ಕೆ ಡಿಸೆಂಬರ್ 6ರವರೆಗೆ ತಡೆ ನೀಡಲಾಗಿದೆ. ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ತಡೆ ನೀಡಿ, ಡಿಸೆಂಬರ್ 6ಕ್ಕೆ ವಿಚಾರಣೆ ಮುಂದೂಡಿದೆ.

ಸಿಟಿಜನ್ ಫಾರ್ ಬೆಂಗಳೂರು ಎಂಬ ಸಂಘಟನೆ ಸ್ಟೀಲ್ ಪ್ಲೈಓವರ್ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ಸಲ್ಲಿಸಿತ್ತು. ಅಕ್ಟೋಬರ್ 28ರಂದು ಇದರ ವಿಚಾರಣೆ ನಡೆದಿತ್ತು. ಅಂದು 4 ವಾರ ಗಡುವು ನೀಡಿದ್ದ ಕೋರ್ಟ್, ಸ್ಟೀಲ್ ಫ್ಲೈ ಓವರ್ ಕೋರ್ಟ್ ಪರಿಣಾಮದ ಬಗ್ಗೆ ವರದಿ ನೀಡುವಂತೆ ಹೇಳಿತ್ತು. ಇಂದಿನ ವಿಚಾರಣೆ ವೇಳೆ ಕೋರ್ಟ್, ಇವತ್ತು ರಾಜ್ಯ ಸರ್ಕಾರದ ಪರ ಎಜಿ ಮಧುಸೂದನ್ ನಾಯಕ್ ಅವರು ಮಂಡಿಸಿದ ವಾದ ಆಲಿಸಿತು. ಸುಮಾರು 1 ಗಂಟೆಯ ಕಾಲ ನಡೆದ ವಿಚಾರಣೆ  ನಡೆಯಿತು.