ವಿವಾದಿತ ಸ್ಟೀಲ್ ಫ್ಲೈ ಓವರ್ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 6 ವಾರಗಳ ತಾತ್ಕಾಲಿಕ ತಡೆ ನೀಡಿದೆ. ಇದರಿಂದಾಗಿ, ನವೆಂಬರ್ 1ರಿಂದ ಯೋಜನೆ ಆರಂಭಿಸಲು ಉದ್ದೇಶಿಸಿದ್ದ ಬಿಡಿಎಗೆ ಹಿನ್ನಡೆಯಾಗಿದೆ. ಯೋಜನೆಗಾಗಿ 800 ಮರಗಳನ್ನು ಕಡಿಯಲು ಬಿಡಿಎ ನಿರ್ಧರಿಸಿತ್ತು. ಬೆಂಗಳೂರು ನಾಗರೀಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಬೆಂಗಳೂರು(ಅ.27): ವಿವಾದಿತ ಸ್ಟೀಲ್ ಫ್ಲೈ ಓವರ್ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 6 ವಾರಗಳ ತಾತ್ಕಾಲಿಕ ತಡೆ ನೀಡಿದೆ. ಇದರಿಂದಾಗಿ, ನವೆಂಬರ್ 1ರಿಂದ ಯೋಜನೆ ಆರಂಭಿಸಲು ಉದ್ದೇಶಿಸಿದ್ದ ಬಿಡಿಎಗೆ ಹಿನ್ನಡೆಯಾಗಿದೆ. ಯೋಜನೆಗಾಗಿ 800 ಮರಗಳನ್ನು ಕಡಿಯಲು ಬಿಡಿಎ ನಿರ್ಧರಿಸಿತ್ತು. ಬೆಂಗಳೂರು ನಾಗರೀಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು..

ಭಾರೀ ವಿರೋಧದ ನಡುವೆಯೂ ಬಿಡಿಎ ಸ್ಟೀಲ್ ಫ್ಲೈ ಓವರ್ ಕಾಮಗಾರಿಗೆ ಗ್ರೀನ್ ಸಿಗ್ನಲ್ ನೀಡಿತ್ತು. ಯೋಜನೆಯ ಕಾಮಗಾರಿ ನಡೆಸುವುದಕ್ಕೆ ಎಲ್​ಅಂಡ್ ಟಿ ಕಂಪನಿಗೆ ಒಪ್ಪಿಗೆ ಪತ್ರ ನೀಡಿತ್ತು. ಕಳೆದ ಎರಡು ದಿನಗಳ ಹಿಂದೆ ಪತ್ರ ನೀಡಿದ್ದ ಬಿಡಿಎ ಟೆಂಡರ್ ಮೊತ್ತ 1791 ಕೋಟಿ ರೂಪಾಯಿಗೆ ಒಪ್ಪಿಗೆ ಸೂಚಿಸಿತ್ತು. ಪತ್ರ ನೀಡಿದ ದಿನದಿಂದಲೇ ಯೋಜನೆ ಅವಧಿ ಶುರುವಾಗುತ್ತೆ ಕೆಲಸ ನಿರ್ವಹಿಸಿ ಎಂದು ಸೂಚಿಸಲಾಗಿತ್ತು.