Asianet Suvarna News Asianet Suvarna News

ಸ್ಟೀಲ್ ಬ್ರಿಜ್ ಕೈ ಬಿಟ್ಟಿದ್ದು ಹೋರಾಟದ ಫಲ : ರಾಜೀವ್ ಚಂದ್ರಶೇಖರ್

ಬೆಂಗಳೂರಿನ ನಾಗರಿಕರು ಮತ್ತು ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಕಳೆದ ನಾಲ್ಕು ವರ್ಷಗಳ ಕಾಲ ನಡೆಸಿದ ಕಾನೂನು ಹೋರಾಟದಫಲವಾಗಿ ಸ್ಟೀಲ್ ಬ್ರಿಜ್ ಕೈಬಿಡಲಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

Steel bridge was left due to protest of Namma Bengaluru foundation says BJP MP Rajeev Chandrasekhar
Author
Bengaluru, First Published Jun 20, 2019, 10:11 AM IST

ಬೆಂಗಳೂರು [ಜೂ.20] :  ಬಸವೇಶ್ವರ ವೃತ್ತದಿಂದ ಹೆಬ್ಬಾಳದ ನಡುವೆ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಯೋಜನೆಯನ್ನು ರಾಜ್ಯ ಸರ್ಕಾರ ಕೊನೆಗೂ ಕೈಬಿಟ್ಟಿದೆ. ಇದು ಬೆಂಗಳೂರಿನ ನಾಗರಿಕರು ಮತ್ತು ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಕಳೆದ ನಾಲ್ಕು ವರ್ಷಗಳ ಕಾಲ ನಡೆಸಿದ ಕಾನೂನು ಹೋರಾಟಕ್ಕೆ ಸಂದ ಜಯ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಶ್ಲಾಘಿಸಿದ್ದಾರೆ.

ನಾಗರಿಕರು, ಪರಿಸರವಾದಿಗಳು ಹಾಗೂ ನಗರತಜ್ಞರ ಭಾರೀ ವಿರೋಧದ ನಡುವೆ ಹಿಂದಿನ ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ 2016 ಜೂನ್‌ನಲ್ಲಿ ಉಕ್ಕಿನ ಸೇತುವೆ ಯೋಜನೆ ಘೋಷಿಸಿತ್ತು. ಅಲ್ಲದೇ ಕಾಂಗ್ರೆಸ್ ಮುಖಂಡರು ಸ್ಟೀಲ್ ಬ್ರಿಜ್ ವಿಷಯ ಪದೇ-ಪದೇ ಪ್ರಸ್ತಾಪಿಸಿ ಯೋಜನೆ ಜಾರಿಗೆ ಪ್ರಯತ್ನಿಸಿದ್ದರು. 

ಯೋಜನೆ ಜಾರಿಗೆ ಜನಸಾಮಾನ್ಯರು ಮಾತ್ರವಲ್ಲದೇ ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್‌ಜಿಟಿ)ವೂ ವಿರೋಧಿಸಿತ್ತು. ಇದೀಗ ರಾಜ್ಯಸರ್ಕಾರ ಹೈಕೋರ್ಟ್‌ಗೆ ಯೋಜನೆ ಕೈಬಿಟ್ಟಿರು ವುದಾಗಿ ಅಧಿಕೃತ ಮಾಹಿತಿ ನೀಡಿದೆ. ಆದರೆ, ಉಕ್ಕಿನ ಸೇತುವೆ ನಿರ್ಮಾಣಕ್ಕೆ ಯೋಜಿಸಿದ್ದ ವೇಳೆ ಕೈಗೊಂಡ ಕ್ರಮದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಯೋಜನೆ ಕೈಬಿಟ್ಟ ಬಳಿಕ ಸ್ಟೀಲ್ ಬ್ರಿಜ್ ನಿರ್ಮಾಣ ಹೊಣೆ ಹೊತ್ತಿದ್ದ ಬೆಂಗಳೂರು ಅಭಿವೃದ್ಧಿ
ಪ್ರಾಧಿಕಾರದಲ್ಲಿನ ವರ್ಗಾವಣೆ ಹಾಗೂ ಇನ್ನಿತರ ಬೆಳವಣಿಗಳ ಬಗ್ಗೆ ತನಿಖೆ ನಡೆಸಬೇಕು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸುಧಾರಣೆ ಆಗಬೇಕು. ಇಲ್ಲವೇ ಪ್ರಾಧಿಕಾರವನ್ನು ರದ್ದುಗೊಳಿಸ ಬೇಕು ಎಂದು ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಶೋಷಣೆ ಮುಂದುವರಿಸಿದ ಮೈತ್ರಿ ಸರ್ಕಾರ: ಹಿಂದಿನ ಕಾಂಗ್ರೆಸ್ ಸರ್ಕಾರದಂತೆ ಈಗಿನ ಮೈತ್ರಿ ಸರ್ಕಾರವೂ ಗುತ್ತಿಗೆದಾರರ ಮೂಲಕ ಸಾರ್ವಜನಿಕರ ತೆರಿಗೆ ಹಣ, ಸ್ವತ್ತುಗಳನ್ನು ದುರ್ಬ ಳಕೆ ಮತ್ತು ಶೋಷಣೆ ಮುಂದುವರಿಸಿದೆ. ಸ್ಟೀಲ್ ಬ್ರಿಜ್ ಕೈಬಿಡು ವಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ದಲ್ಲಿ ಬರೆದ ಬೆಂಗಳೂರಿಗೆ ತೊಂದರೆ ನೀಡುವ ವಿಷಯಗಳು ಮತ್ತು ಸರ್ಕಾರದ ವಿವಿಧ ಇಲಾಖೆಯ ನಿರಾಸಕ್ತಿ, ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ನೀಡಿದ ಸಲಹೆಗಳು ಇಂದಿಗೂ ಪ್ರಸ್ತುತವಾಗಿವೆ. 

ಈ ಐದು ವರ್ಷದಲ್ಲಿ ಯಾವುದೂ ಪರಿಹಾರವಾಗಿಲ್ಲ. ಅದರಲ್ಲಿ ಪ್ರಮುಖವಾಗಿ ಸಂಚಾರಿ ದಟ್ಟಣೆ, ಕುಡಿಯುವರು, ಕಸ, ಸಾರ್ವಜನಿಕ ಆರೋಗ್ಯ, ಮಕ್ಕಳ ಮತ್ತು ಮಹಿಳಾ ರಕ್ಷಣೆ, ಕೆರೆ ಸಂರಕ್ಷಣೆ ಸಂಬಂಧಿಸಿದಂತೆ ಸಮಸ್ಯೆ ಪರಿಹಾರಕ್ಕೆ ದೀರ್ಘಾವಧಿ ಯೋಜನೆ ಜಾರಿಗೊಳಿಸಬೇಕು. ತಜ್ಞರಿಂದ ಯೋಜನೆ ರೂಪಿಸಬೇಕು. ಯೋಜನೆ ಜಾರಿಗೂ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. 

ವಾಣಿಜ್ಯ ಗುತ್ತಿಗೆ ಹಾಗೂ ಟೆಂಡರ್, ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಗಳ ಮಾಹಿತಿ ಬಹಿರಂಗ ಪಡಿಸಬೇಕು. ಸುಪ್ರಿಂ ಕೋರ್ಟ್ ನಿರ್ದೇಶನದಂತೆ 2031 ರ ಮಾಸ್ಟರ್ ಪ್ಲ್ಯಾನ್ ಅನುಷ್ಠಾನಕ್ಕೂ ಮುನ್ನ ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು. ಸಾರ್ವಜನಿಕರ ಅಭಿಪ್ರಾಯ ಸ್ವೀಕಾರ ಮತ್ತು ತಿರಸ್ಕಾರಕ್ಕೆ ಕಾರಣ ನೀಡಬೇಕು ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

Follow Us:
Download App:
  • android
  • ios