ಚಾಳುಕ್ಯ ಸರ್ಕಲ್'ನಿಂದ ಹೆಬ್ಬಾಳದವರೆಗೆ ನಿರ್ಮಿಸಬೇಕಿದ್ದ ಉಕ್ಕಿನ ಮೇಲ್ಸೇತುವೆ ಯೋಜನೆಗೆ ಬ್ರೇಕ್ ಬಿದ್ದಂತಾಗಿದೆ.
ಬೆಂಗಳೂರು(ಮಾ. 02): ವಿವಾದಿತ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರದ್ದುಗೊಳಿಸಿ ರಾಜ್ಯ ಸರಕಾರ ಗುರುವಾರ ಮಧ್ಯಾಹ್ನ ಅಧಿಕೃತ ಆದೇಶ ಹೊರಡಿಸಿದೆ. ಯೋಜನೆಯನ್ನು ರದ್ದುಗೊಳಿಸಲು ಸಿಎಂ ಒಪ್ಪಿಗೆ ನೀಡಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಇಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದರೊಂದಿಗೆ ಚಾಳುಕ್ಯ ಸರ್ಕಲ್'ನಿಂದ ಹೆಬ್ಬಾಳದವರೆಗೆ ನಿರ್ಮಿಸಬೇಕಿದ್ದ ಉಕ್ಕಿನ ಮೇಲ್ಸೇತುವೆ ಯೋಜನೆಗೆ ಬ್ರೇಕ್ ಬಿದ್ದಂತಾಗಿದೆ.
ಏನಿದು ಯೋಜನೆ?
ಸ್ಟೀಲ್ ಬ್ರಿಡ್ಜ್ ಯೋಜನೆಯ ಮೊದಲ ಪ್ರಸ್ತಾವ ಆಗಿದ್ದು ಬಿಎಸ್'ವೈ ಸಿಎಂ ಆಗಿದ್ದ 2010ರಲ್ಲಿ. ಮೂರು ವರ್ಷಗಳ ಹಿಂದೆ, 2014ರಲ್ಲಿ ಸಿದ್ದರಾಮಯ್ಯನವರು ಈ ಯೋಜನೆಯನ್ನು ಕೈಗೆತ್ತಿಕೊಂಡರು. ಆದರೆ, ಉಕ್ಕಿನ ಮೇಲ್ಸೇತುವೆ ನಿರ್ಮಾಣದಿಂದ ನೂರಾರು ಮರಗಿಡಗಳು ನಾಶವಾಗುತ್ತವೆ; ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ಸೇರಿದಂತೆ ಪರಿಸರವಾದಿಗಳು ನಿರಂತರವಾಗಿ ಪ್ರತಿಭಟಿಸುತ್ತಾ ಬಂದಿದ್ದಾರೆ. ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್'ಗೆ ದೂರು ಸಲ್ಲಿಸಿದ್ದು, ಯೋಜನೆಗೆ ಎನ್'ಜಿಟಿ ತಾತ್ಕಾಲಿಕ ತಡೆ ನೀಡಿದೆ. ಯೋಜನೆ ತೀರಾ ದುಬಾರಿಯಾಗಿರುವುದಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ವಿರೋಧಿಗಳ ಪ್ರಮುಖ ವಾದ.
