Asianet Suvarna News Asianet Suvarna News

ಜಿಎಸ್'ಟಿ ಬಿಲ್ ಚರ್ಚಿಸಲು ಕೇಂದ್ರದಿಂದ ವಿಶೇಷ ಅಧಿವೇಶನ: ಅಧಿವೇಶನಕ್ಕೆ ಯಾರ್ಯಾರು ಗೈರು?

ದೇಶದಾದ್ಯಂತ ಜಿಎಸ್ ಟಿ ತೆರಿಗೆ ಪದ್ಧತಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನಕ್ಕೆ ಹೋಗಬೇಕೋ ಬೇಡವೋ? ಎಂಬ ಹಲವು ಗೊಂದಲ ವಿಪಕ್ಷಗಳಲ್ಲಿ ಶುರುವಾಗಿದ್ದರೆ, ಕಾಂಗ್ರೆಸ್​​ ಅಧಿವೇಶನ ಬಹಿಷ್ಕರಿಸಲು ಮುಂದಾಗಿದೆ.

STCentral Govt Called For Session For GST Bill

ನವದೆಹಲಿ(ಜೂ.30): ದೇಶದಾದ್ಯಂತ ಜಿಎಸ್ ಟಿ ತೆರಿಗೆ ಪದ್ಧತಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನಕ್ಕೆ ಹೋಗಬೇಕೋ ಬೇಡವೋ? ಎಂಬ ಹಲವು ಗೊಂದಲ ವಿಪಕ್ಷಗಳಲ್ಲಿ ಶುರುವಾಗಿದ್ದರೆ, ಕಾಂಗ್ರೆಸ್​​ ಅಧಿವೇಶನ ಬಹಿಷ್ಕರಿಸಲು ಮುಂದಾಗಿದೆ.

ದೇಶದ ಅತಿದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗಿರುವ ಜಿಎಎಸ್ ಟಿ ಜಾರಿಗೆ ಕೇಂದ್ರ ಸರ್ಕಾರ ಭರ್ಜರಿ​ ಸಿದ್ಧತೆ ಮಾಡಿಕೊಂಡಿದೆ. ಜಿಎಸ್​ಟಿ ಬಿಲ್​ ಕುರಿತು ಚರ್ಚೆ ಮಾಡಲು ಇಂದು ಮಧ್ಯರಾತ್ರಿ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ವಿಶೇಷ ಅಧಿವೇಶನಕ್ಕೆ ಹಾಜರಾಗುವಂತೆ ಎಲ್ಲಾ ಪಕ್ಷಗಳಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿತ್ತು. ಆದ್ರೆ, ಕೇಂದ್ರ ಸರ್ಕಾರದ ಆಹ್ವಾನವನ್ನು  ಸರಾಸಗಟಾಗಿ ತಳ್ಳಿ ಹಾಕಿರುವ ವಿಪಕ್ಷಗಳು ಇವತ್ತು ಮಧ್ಯರಾತ್ರಿ ನಡೆಯುವ ವಿಶೇಷ ಅಧಿವೇಶನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ವಿಶೇಷ ಅಧಿವೇಶನಕ್ಕೆ ಯಾಱರು ಗೈರು?

ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಜಿಎಸ್​ಟಿ ಬಿಲ್​​ ವಿಚಾರವಾಗಿ ಮಧ್ಯರಾತ್ರಿ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ಅಧಿವೇಶನದಲ್ಲಿ  ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಸೇರಿದಂತೆ ಕಾಂಗ್ರೆಸ್​ನ ನಾಯಕರು ಗೈರು ಆಗಲಿದ್ದಾರೆ. ಅಷ್ಟೇ ಅಲ್ಲದೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬಾನರ್ಜಿ , ಸಿಪಿಎಂ ಪೊಲಿಟ್ ಬ್ಯೂರೊ ಸದಸ್ಯ ಪ್ರಕಾಶ್ ಕಾರಟ್ , ಸಿಪಿಐ ರಾಜ್ಯಸಭೆ ಸದಸ್ಯ ಡಿ. ರಾಜ, ಸಮಾಜವಾದಿ ಪಕ್ಷದ ನಾಯಕರು, ಬಿಎಸ್​ಪಿ ಮುಖಂಡರಾದ ಮಾಯವತಿ, ಡಿಎಂಕೆ ಸಂಸದರು, ಆರ್​ಜೆಡಿ ನಾಯಕರು  ಸೇರಿದಂತೆ ಇತರೆ ಯುಪಿಎನ ಹಲವು ಮಿತ್ರ ಪಕ್ಷಗಳು ನಾಳೆ ನಡೆಯುವ ಅಧಿವೇಶನಕ್ಕೆ ಗೈರು ಆಗಲು ನಿರ್ಧರಿಸಿವೆ.

ಇನ್ನು ವಿಪಕ್ಷ ಕಾಂಗ್ರೆಸ್​​ ಬೆಂಬಲಿತ ಹಲವು ಪಕ್ಷಗಳು ಗೈರು ಆಗುವುದಾಗಿ ಪ್ರಕಟಿಸಿದರೆ, ಇತ್ತ ಇತರೆ ಪಕ್ಷಗಳು ಮಧ್ಯರಾತ್ರಿ ನಡೆಯುವ ಅಧಿವೇಶನದಲ್ಲಿ ಭಾಗವಹಿಸುತ್ತೇವೆ ಅಂತ ಹೇಳಿಕೊಂಡಿವೆ.

ವಿಶೇಷ ಅಧಿವೇಶನಕ್ಕೆ ಯಾರ್ಯಾರು ಹಾಜರ್​?

ಜಿಎಸ್​ಟಿ ಜಾರಿಗೆ ತರಲು ಆಡಳಿತಾರೂಢ ಎನ್​ಡಿಎ ಸರ್ವಸಿದ್ಧತೆ ಮಾಡಿಕೊಂಡಿದೆ. ಗಮನಾರ್ಹವೆಂದರೆ ವಿಪಕ್ಷಗಳು ವಿಶೇಷ ಅಧಿವೇಶನ ಬಹಿಷ್ಕಾರ ಮಾಡಲು ಮುಂದಾಗಿವೆ. ಆದ್ರೆ ಜೆಡಿಎಸ್​ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡ, ಜೆಡಿಯು ಮುಖಂಡರಾದ ಬಿಹಾರದ ಸಿಎಂ ನಿತೀಶ್​​ಕುಮಾರ್​ ಸೇರಿದಂತೆ ಇತರೆ ಎನ್​ಡಿಎ ಬೆಂಬಲಿತ ಪಕ್ಷಗಳ ನಾಯಕರು ಅಧಿವೇಶನದಲ್ಲಿ ಭಾಗವಹಿಸಲು ಮುಂದಾಗಿದ್ದಾರೆ.

ಒಟ್ಟಿನಲ್ಲಿ ಮಧ್ಯರಾತ್ರಿ ಕರೆಯಲಾಗಿರುವ ಅಧಿವೇಶನವು ಜಂಟಿ ಅಧಿವೇಶನವಾಗಿದ್ದು, ವಿಪಕ್ಷದ ಕೆಲ ನಾಯಕರು ಹೊರತುಪಡಿಸಿ ಲೋಕಸಭೆ ಹಾಗೂ ರಾಜ್ಯ ಸಭೆಗಳ ಸದಸ್ಯರು ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.

Follow Us:
Download App:
  • android
  • ios