Asianet Suvarna News Asianet Suvarna News

ಕೊರೋನಾ ವಿರುದ್ಧ ಮೋದಿ ಸಮರ: ದೇಶದ ಜನತೆಗೆ ಮತ್ತೊಂದು ಕರೆ ಕೊಟ್ಟ ಪ್ರಧಾನಿ

ಜಗತ್ತಿನಾದ್ಯಂತ ಕಿಲ್ಲರ್ ಕೊರೊನಾ ಸಾವಿನ ರಣಕೇಕೆ ಹಾಕ್ತಿದೆ.. ಭಾರತಕ್ಕೂ ಎಂಟ್ರಿಕೊಟ್ಟಿರೋ ಡೆಡ್ಲಿ ವೈರಸ್,  ಕಾಡ್ಗಿಚ್ಚಿನಂತೆ ಹಬ್ಬುತ್ತಿರೋ ಮಾರಕ ಮಹಾಮಾರಿ ವಿರುದ್ಧ ಪ್ರಧಾನಿ ಮೋದಿ ಸಮರ ಸಾರಿದ್ದಾರೆ. 

Stay where you are dont visit hometown PM Modi appeals to people over coronavirus
Author
Bengaluru, First Published Mar 22, 2020, 1:45 PM IST

ನವದೆಹಲಿ, (ಮಾ.22): ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರುಗಳು ಇನ್ನಿಲ್ಲದ ಕಸರತ್ತುಗಳನ್ನ ನಡೆಸಿವೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂಗೆ ಕರೆ ನೀಡಿ ಮೊದಲ ಹೆಜ್ಜೆ ಇಟ್ಟಿದ್ದಾರೆ. 

ಇದರ ಬೆನ್ನಲ್ಲೇ ದೇಶದ ಜನತೆಗೆ ಮತ್ತೊಂದು ಕರೆ ಕೊಟ್ಟಿದ್ದಾರೆ. ಮುಂದಿನ 15 ದಿನಗಳ ಕಾಲ ನಗರವಾಸಿಗಳು ಹಳ್ಳಿಗಳ ಕಡೆಗೆ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ. ಮನೆಯಲ್ಲೇ ಇರಿ ಆರೋಗ್ಯವಾಗಿರಿ ಎಂದು ಮೋದಿ ದೇಶವಾಸಿಗಳಿಗೆ ಕರೆ ಕೊಟ್ಟಿದ್ದಾರೆ.

Breaking: ದೇಶದ ಸಂಚಾರ ವ್ಯವಸ್ಥೆಯ ಜೀವನಾಡಿ ಬಂದ್

ಕೊರೊನಾ ವೈರಸ್ ಸೋಂಕು ಒದ್ದು ಓಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಇದಕ್ಕೆ ದೇಶಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಅದರಂತೆ ಮೋದಿ ಕೊಟ್ಟ ಈ ಒಂದು ಮತ್ತೊಂದು ಕರೆಗೆ ಎಲ್ಲರೂ ಬೆಂಬಲಿಸುವುದು ಅತ್ಯಗತ್ಯ. 

ಸದ್ಯ ಭಾರತದಲ್ಲಿ 2ನೇ ಹಂತದಲ್ಲಿ ಕೊರೋನಾ ವೈರಸ್ ಮೂರನೇ ಸ್ಟೇಜ್ ಏರಿದರೇ ತುಂಬ ಆಘಾತಕಾರಿ. ಇದರಿಂದ ಮೊದಿ ನೀಡಿದ ಸಲಹೆಯನ್ನ ಪಾಲಿಸೋಣ ಕೊರೋನಾವನ್ನ ಒದ್ದು ಓಡಿಸಲು ಪಣತೊಡಿ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎನ್ನುವುದನ್ನು ನಾವು ಅರಿತುಕೊಂಡರೆ ಉತ್ತಮ.

ಈಗಾಗಲೇ ಭಾರತದಲ್ಲಿ ಡೆಡ್ಲಿ ಕೊರೋನಾ 7 ಬಲಿ ತೆಗೆದುಕೊಂಡಿದ್ರೆ, 324 ಜನರಿಗೆ ಸೋಂಕಿರುವುದು ಆರೋಗ್ಯ ಇಲಾಖೆ ಖಚಿತಪಡಿಸಿದೆ.

ಮಾರ್ಚ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios