ನವದೆಹಲಿ, (ಮಾ.22): ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಪ್ರಯಾಣಿಕರನ್ನ ಕೊಂಡೊಯ್ಯುವ ದೇಶದ ಸಂಚಾರ ವ್ಯವಸ್ಥೆಯ ಜೀವನಾಡಿ ಸ್ಥಗಿತಗೊಳಿಸಲಾಗಿದೆ. ಕಾರಣ ಕೊರೋನಾ.

ಹೌದು..ದೇಶದಾದ್ಯಂತ ರೈಲು ಸಂಚಾರ ಸ್ಥಗಿತಗೊಳಿಸಿ ಬಾರತೀಯ ರೈಲ್ವೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಇದು ಭಾರತದ ಇತಿಹಾಸದಲ್ಲಿಯೇ ರೈಸ್ವೆ ಸಂಚಾರ ಬಂದ್ ಮಾಡುತ್ತಿರುವುದು ಫಸ್ಟ್ ಟೈಮ್.

ಮಾರ್ಚ್, 31ರ ವರೆಗೆ ಎಲ್ಲಾ ಪ್ಯಾಸಿಂಜರ್ ರೈಲುಗಳನ್ನ ಸ್ಥಗಿತಗೊಳಿಸಲಾಗಿದ್ದು, ಕೇವಲ ಗೂಡ್ಸ್ ರೈಲುಗಳು ಮಾತ್ರ ಸಂಚರಿಸಲಿವೆ ಎಂದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಶಂಕಿತ ಸೋಂಕಿತರು ರೈಲ್ವೆಯಲ್ಲಿ ಸಂಚರಿಸುವುದು ಕಂಡುಬಂದಿದ್ದರಿಂದ ಕೇಂದ್ರ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಇಂತಹ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವುದು ಒಳ್ಳೆಯ ನಿರ್ಧಾರ

ಮಾರಣಾಂತಿಕ ಕೊರೋನಾ ವೈರಸ್​​ಗೆ ವಿಶ್ವಾದ್ಯಂತ 13 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮೂರು ಲಕ್ಷಕ್ಕೂ ಅಧಿಕ ಮಂದಿಗೆ ಈ ಸೋಂಕು ತಗುಲಿದೆ. ಇನ್ನು ಭಾರತದಲ್ಲಿ 324 ಜನರಿಗೆ ಈ ಕೊರೋನಾ ಸೋಂಕು ತಗುಲಿದ್ರೆ, 7 ಜನರು ಮೃತಪಟ್ಟಿದ್ದಾರೆ.