ಚಿತ್ರದಲ್ಲಿ: ಗರಿಷ್ಠ ಮಟ್ಟ ತಲುಪಿರುವ ಆಲಮಟ್ಟಿ ಅಣೆಕಟ್ಟೆ ಹಾಗೂ ತುಂಬಿ ಹರಿಯುತ್ತಿರುವ ನಾಡಿನ ಜೀವನದಿಗಳಲ್ಲಿ ಒಂದಾದ ಕೃಷ್ಣೆಗೆ ಇಂದು ಸಿಎಂ ಸಿದ್ದರಾಮಯ್ಯ ಗಂಗೆ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು

ವಿಜಯಪುರ: ವಿಜಯಪುರದಲ್ಲಿ ನಡೆದ ಜಲ ಸಮಾವೇಶ ಸಮಾರೋಪ ಕಾರ್ಯಕ್ರಮದಲ್ಲಿ ಜಲ-ತಜ್ಞರು ಭಾಷಣದಲ್ಲಿ ಎಡವಟ್ಟು ಮಾಡಿ ಸರ್ಕಾರಕ್ಕೆ ಮುಜುಗರ ತಂದ ಘಟನೆ ನಡೆಯಿತು.

ವೇದಿಕೆಯಲ್ಲಿ ಸಿಎಂ ಎದುರೇ, ಸರ್ಕಾರ ಕೆರೆಗಳ ಡಿನೋಟಿಫಿಕೇಷನ್’ಗೆ ಮುಂದಾಗಿದ್ದು ಸ್ವಾಗತಾರ್ಹ ಎಂದು ಜಲ ತಜ್ಞ ರಾಜೇಂದ್ರಸಿಂಗ್ ಹೇಳಿದ್ದಾರೆ.

ರಾಜೇಂದ್ರಸಿಂಗ್ ಹೇಳಿಕೆಯಿಂದ ತಬ್ಬಿಬ್ಬಾದ ಸಿಎಂ ಸಿದ್ದರಾಮಯ್ಯ, ರಾಜೇಂದ್ರಸಿಂಗ್ ಹೇಳಿಕೆ ಸರಿಪಡಿಸಲು ಮುಂದಾದರು. ಬಳಿಕ ಬೇರೊಂದು ಮೈಕ್ ಹಿಡಿದು ಸಿಎಂ ಸಿದ್ದರಾಮಯ್ಯ ಜನರಿಗೆ ಸಮಜಾಯಿಸಿ ನೀಡಿದರು.

ರಾಜ್ಯ ಸರ್ಕಾರ ಕೆರೆಗಳನ್ನು ಡಿನೊಟಿಫೈ ಮಾಡುತ್ತದೆಯೆಂದು ಎಲ್ಲಿಯೂ ಹೇಳಿಲ್ಲ, ಮಾಧ್ಯಮಗಳಲ್ಲಿ ಬಂದ ವರದಿಯನ್ನು ರಾಜೇಂದ್ರ ಸಿಂಗ್ ಅವರು ಓದಿದ್ದಾರೆ. ಸಂಪುಟದಲ್ಲಿ ಈ ಬಗ್ಗೆ ಚರ್ಚೆ ಕೂಡ ಮಾಡಿಲ್ಲವೆಂದು ಸಿಎಂ ಸಮರ್ಥಿಸಿಕೊಂಡರು.