ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ವಿವಿಧ ಕಲಾತಂಡಗಳು ಆಗಮಿಸಿದ್ದವು. ಜಾನಪದ ಗೀತೆ, ಕರಡಿಮಜಲು, ವಿಭಿನ್ನ ಕುಣಿತ ಸೇರಿದಂತೆ ಅನೇಕ ಕಲಾತಂಡಗಳ ಪ್ರದರ್ಶನ ನರೆದಿದ್ದ ಜನರ ಮನಸೂರೆಗೊಂಡಿತು.
ಬಾಗಲಕೋಟೆ(ಆ.23): ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದಲ್ಲಿ ರಾಜ್ಯ ಮಟ್ಟದ ಜಾನಪದ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ವಿವಿಧ ಕಲಾತಂಡಗಳು ಆಗಮಿಸಿದ್ದವು. ಜಾನಪದ ಗೀತೆ, ಕರಡಿಮಜಲು, ವಿಭಿನ್ನ ಕುಣಿತ ಸೇರಿದಂತೆ ಅನೇಕ ಕಲಾತಂಡಗಳ ಪ್ರದರ್ಶನ ನರೆದಿದ್ದ ಜನರ ಮನಸೂರೆಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಉಮಾಶ್ರೀ, ನಶಿಸುತ್ತಿರೋ ಕಲೆಯನ್ನ ಉಳಿಸಿಬೆಳೆಸಿಕೊಂಡು ಹೋಗಬೇಕೆನ್ನುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಭವಿಷ್ಯದಲ್ಲಿ ಇನ್ನಷ್ಟು ಕಾರ್ಯಕ್ರಮ ಹಮ್ಮಿಕೊಂಡು ಕಲಾವಿದರನ್ನು ಆರ್ಥಿಕವಾಗಿ ಏಳಿಗೆಗೊಳಿಸುವುದೇ ನಮ್ಮ ಗುರಿ ಎಂದರು.
