ರಾಜ್ಯ ಸರ್ಕಾರ ದಿವಾಳಿಯಾಗಿದೆಯೇ? ಗೊತ್ತಿಲ್ಲ, ಆದರೆ ಜನರಿಗೆ ಹೆಚ್ಚೆಚ್ಚು ಕುಡಿಸಿ ಅಂತ ಬಾರ್​ ಅಂಡ್​ ರೆಸ್ಟೋರೆಂಟ್'​ಗಳ ಮಾಲೀಕರಿಗೆ ಸರ್ಕಾರ ಕಟ್ಟಪ್ಪಣೆ ಮಾಡಿದೆ. 10 ವರ್ಷದ ಹಿಂದಿನ ಕಾನೂನನ್ನೇ ಮತ್ತೆ ಜಾರಿ ಮಾಡಿ ಒಂದೊಂದು ಬಾರ್​ ರೆಸ್ಟೋರೆಂಟ್​​'ಗೆ ಲಕ್ಷಾಂತರ ರೂಪಾಯಿ ದಂಡ ಹಾಕಿ ಖಜಾನೆ ಭರ್ತಿ ಮಾಡ್ಲಿಕ್ಕೆ ಮುಂದಾಗಿದೆ. ಇದು ಸಿಎಂ ಸಿದ್ದರಾಮಯ್ಯ ವಿರುದ್ಧ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು(ಜ.03): ರಾಜ್ಯ ಸರ್ಕಾರ ದಿವಾಳಿಯಾಗಿದೆಯೇ? ಗೊತ್ತಿಲ್ಲ, ಆದರೆ ಜನರಿಗೆ ಹೆಚ್ಚೆಚ್ಚು ಕುಡಿಸಿ ಅಂತ ಬಾರ್​ ಅಂಡ್​ ರೆಸ್ಟೋರೆಂಟ್'​ಗಳ ಮಾಲೀಕರಿಗೆ ಸರ್ಕಾರ ಕಟ್ಟಪ್ಪಣೆ ಮಾಡಿದೆ. 10 ವರ್ಷದ ಹಿಂದಿನ ಕಾನೂನನ್ನೇ ಮತ್ತೆ ಜಾರಿ ಮಾಡಿ ಒಂದೊಂದು ಬಾರ್​ ರೆಸ್ಟೋರೆಂಟ್​​'ಗೆ ಲಕ್ಷಾಂತರ ರೂಪಾಯಿ ದಂಡ ಹಾಕಿ ಖಜಾನೆ ಭರ್ತಿ ಮಾಡ್ಲಿಕ್ಕೆ ಮುಂದಾಗಿದೆ. ಇದು ಸಿಎಂ ಸಿದ್ದರಾಮಯ್ಯ ವಿರುದ್ಧ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಎಂಜಿ ರೋಡಿನಲ್ಲಿ ಯುವತಿಯರ ಮೇಲಿನ ದೌರ್ಜನ್ಯ ಇನ್ನೂ ಮಾಸಿಲ್ಲ. ಇದಕ್ಕೆಲ್ಲಾ ಕಾರಣ ಮದಿರೆಯ ನಶೆ. ಇದೀಗ ರಾಜ್ಯ ಸರ್ಕಾರ ಕೂಡ ಮತ್ತಷ್ಟು ನಶೆ ಏರಿಸಲು ಮುಂದಾಗಿದೆ. ಅದೇ ಸಮಾಜವಾದ ಹಿನ್ನಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿಸಲು ಹೊರಟಿದ್ದಾರೆ. ರಾಜ್ಯದ ಬೊಕ್ಕಸವನ್ನು ಭರ್ತಿ ಮಾಡಲು ಕಂಡುಕೊಂಡಿರುವ ಮಾರ್ಗ ಎಂಥಾದ್ದು ಅಂತ ತಿಳಿದರೆ ನಿಮಗೂ ಗಾಬರಿಯಾಗುವುದು ಖಚಿತ. ಬಾರ್​ ಅಂಡ್​ ರೆಸ್ಟೋರೆಂಟ್'​ಗಳು ಹೆಚ್ಚೆಚ್ಚು ಪ್ರಮಾಣದಲ್ಲಿ ಮದ್ಯ ಮಾರಾಟ ಮಾಡಬೇಕು ಅಂತ ಅಬಕಾರಿ ಇಲಾಖೆ ಹೊರಡಿಸಿರುವ ಸೂಚನೆಗೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಮದ್ಯ ಮಾರಾಟ ಹೆಚ್ಚಳಕ್ಕೆ ಸೂಚನೆ ಆಗದಿದ್ದಲ್ಲಿ ಲಕ್ಷಾಂತರ ರೂಪಾಯಿ ದಂಡ

ಸರ್ಕಾರಕ್ಕೆ ಅಬಕಾರಿ ಸುಂಕ ಬಹುದೊಡ್ಡ ಆದಾಯ. ಒಂದು ವೇಳೆ ಬಾರ್​ ಅಂಡ್​ ರೆಸ್ಟೋರೆಂಟ್​​'ಗಳೇನಾದರೂ ಕಡಿಮೆ ಪ್ರಮಾಣದಲ್ಲಿ ಮದ್ಯ ಮಾರಾಟ ಮಾಡಿದ್ರೆ ಅಂತಹ ಬಾರ್​ ರೆಸ್ಟೋರೆಂಟ್'​ಗಳು ಲಕ್ಷಾಂತರ ರೂಪಾಯಿಗಳನ್ನು ದಂಡದ ರೂಪದಲ್ಲಿ ಕಟ್ಟಬೇಕು.

ರದ್ದಾಗಿದ್ದ ಕಾನೂನೇನು?

- ಬೆಂಗಳೂರಿನಂತಹ ದೊಡ್ಡ ನಗರಗಳ ಬಾರ್​​'ಗಳಲ್ಲಿ 468 ಲೀ.ಮದ್ಯ ಮಾರಾಟ ಮಾಡಲೇಬೇಕು

- ಸಣ್ಣ ನಗರಗಳ ಬಾರ್​'ಗಳಲ್ಲಿ 225 ಲೀ.ಮದ್ಯ ಮಾರಾಟ ಮಾಡಲೇಬೇಕು.

- ಹೆಚ್ಚು ನಶೆಯ ಮದ್ಯ ಮಾರಾಟವನ್ನು ಈ ಕಾನೂನಿನಲ್ಲಿ ಕಡ್ಡಾಯ ಮಾಡಲಾಗಿತ್ತು

- 2006ರಲ್ಲಿ ಜಾರಿಯಾದ ಈ ಕಾನೂನನ್ನು 2014ರಲ್ಲಿ ರದ್ದು ಮಾಡಲಾಗಿತ್ತು

-ಇದೀಗ ಮತ್ತೆ ಈ ಕಾನೂನನ್ನು ಮತ್ತೆ ಜಾರಿಗೆ ತರಲಾಗಿದೆ

ಸಮಾಜವಾದದ ಹಿನ್ನಲೆ ಹೊಂದಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ತಮ್ಮ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಮದ್ಯಪಾನ ನಿಷೇಧ ಮಾಡುವ ಮೂಲಕ ದೇಶದ ಮೆಚ್ಚುಗೆ ಗಳಿಸಿದ್ದಾರೆ. ಅದೇ ಸಮಾಜವಾದದ ಹಿನ್ನಲೆಯಿಂದಲೇ ಬಂದಿರುವ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮದ್ಯಪಾನಿಗಳ ಸಂಖ್ಯೆಯನ್ನು ಹೆಚ್ಚಿಸಲು ಹೊರಟಿರುವುದು ನಿಜಕ್ಕೂ ವಿಪರ್ಯಾಸ.