ಮುರಳೀಧರ ಹಾಲಪ್ಪ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಕೊಡಗು ಮತ್ತು ಬೆಳಗಾವಿಯಲ್ಲಿ ಸೈನಿಕ ತರಬೇತಿ ಕೇಂದ್ರಗಳಿದ್ದು, ಇಲ್ಲಿ ಪ್ರಾಯೋಗಿಕ ವಾಗಿ 1000 ಮಂದಿಯನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ 11 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 1000 ಮಂದಿಯನ್ನು ಆಯ್ಕೆ ಮಾಡಿ ಸೇನೆ ಮಾದರಿಯಲ್ಲೇ ತರಬೇತಿ ನೀಡಲಾಗುತ್ತದೆ.
ಸೇನೆಗೆ ಸೇರಿದರೆ ಆರಂಭದಲ್ಲಿ ಮಾತ್ರ ತರಬೇತಿ ಇರುತ್ತದೆ. ಆನಂತರ ಸೈನಿಕ ಕೆಲಸ ಚೆನ್ನಾಗಿರುತ್ತದೆ. ಸೌಲಭ್ಯ, ಆರೋಗ್ಯ, ಪ್ರಾಮಾಣಿಕತೆ ಎಲ್ಲವೂ ಬರುತ್ತದೆ. ಆದರೆ ಈ ಬಗ್ಗೆ ಜನರಲ್ಲಿ ಅರಿವಿಲ್ಲ. ಆದ್ದರಿಂದ ಆಸಕ್ತಿ ವಹಿಸುತ್ತಿಲ್ಲ. ಸರ್ಕಾರ ಉತ್ತೇಜನಕ್ಕೆ ಮುಂದಾಗಿರುವುದು ಉತ್ತಮ ಕೆಲಸ. ಬಿ. ಸುಬೋಧ್ ಕೌಲ್, ಎನ್‌ಎಸ್‌ಜಿ ಮುಖ್ಯ ತರಬೇತುದಾರರು ಗ್ರಾಮೀಣ ಭಾಗದಲ್ಲಿ ಬಹುತೇಕ ಯುವಕ, ಯುವತಿಯರು ಸೇನೆಗೆ ಸೇರಲು ಎಲ್ಲಾ ರೀತಿಯ ಅರ್ಹತೆಯನ್ನು ಹೊಂದಿರುತ್ತಾರೆ. ಅವರು ಕೊಂಚ ಸಿದ್ಧತೆ ನಡೆಸಿದರೂ ಸೇನೆಗೆ ಆಯ್ಕೆಯಾಗುತ್ತದೆ. ಅಂಥವರನ್ನು ಉತ್ತೇಜಿಸಿ ಉದ್ಯೋಗ ದೊರಕಿಸುವುದು ಹಾಗೂ ರಾಜ್ಯದಿಂದ ಸೇನೆಗೆ ಸೇರುವವರನ್ನು ಹೆಚ್ಚಿಸುವುದು ‘ಭಾರತ ಸೇನೆಯಲ್ಲಿ ಕನ್ನಡಿಗ' ಎಂಬ ಈ ಯೋಜನೆಯ ಉದ್ದೇಶ.
ಮುರಳೀಧರ ಹಾಲಪ್ಪ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಕೊಡಗು ಮತ್ತು ಬೆಳಗಾವಿಯಲ್ಲಿ ಸೈನಿಕ ತರಬೇತಿ ಕೇಂದ್ರಗಳಿದ್ದು, ಇಲ್ಲಿ ಪ್ರಾಯೋಗಿಕ ವಾಗಿ 1000 ಮಂದಿಯನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ 11 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 1000 ಮಂದಿಯನ್ನು ಆಯ್ಕೆ ಮಾಡಿ ಸೇನೆ ಮಾದರಿಯಲ್ಲೇ ತರಬೇತಿ ನೀಡಲಾಗುತ್ತದೆ. ಉಚಿತ ಊಟ, ವಸತಿಯೊಂದಿಗೆ ದಿನಕ್ಕೆ 11 ಗಂಟೆ ಕಠಿಣ ತರಬೇತಿ ನೀಡಲಾಗುತ್ತದೆ. 5 ನಿಮಿಷಕ್ಕೆ 1 ಕಿ.ಮೀ. ಓಡಿಸುವಂತಹ ಕಷ್ಟಕರ ತರಬೇತಿಯೂ ಇರುತ್ತದೆ. ಮಾರ್ಚ್'ನಿಂದ ತರಬೇತಿ ಆರಂಭವಾಗಲಿದ್ದು, ಇದರಲ್ಲಿ ಸೇನಾ ಅಧಿಕಾರಿಗಳು ನಡೆಸುವ ಭೌತಿಕ, ವೈದ್ಯಕೀಯ ಪರೀಕ್ಷೆಗಳನ್ನು ಎದುರಿಸುವ ರೀತಿಯನ್ನು ಹೇಳಿಕೊಡಲಾಗುತ್ತದೆ.
ರಕ್ಷಣಾ ಕ್ಷೇತ್ರದ ಸವಾಲುಗಳು ಹೆಚ್ಚಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ರಾಜ್ಯದಿಂದ ಸೇನೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದನ್ನು ಉತ್ತೇಜಿಸಲು ರಾಜ್ಯ ಸರ್ಕಾರ ‘ಭಾರತ ಸೇನೆಯಲ್ಲಿ ಕನ್ನಡಿಗ' ಎಂಬ ಯೋಜನೆ ರೂಪಿಸಿದೆ. ದೇಶ ಕಾಯುವ ಸೇನೆಗೆ ರಾಜ್ಯದಿಂದ ಸೈನಿಕರನ್ನು ಸಿದ್ಧ ಮಾಡಿ ಕಳುಹಿಸುವುದು ಇದರ ಮೂಲ ಉದ್ದೇಶ. ರಾಜ್ಯದಿಂದ ಸೇನೆಗೆ ಸೇರುವವರು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಯುವ ಜನತೆಯನ್ನು ಸೇನೆಗೆ ಸೇರಿಸಿ ರಾಜ್ಯದ ಕಾಣಿಕೆ ಹೆಚ್ಚಾಗುವಂತೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹಾಗೂ ಯುವಕರನ್ನು ಅದಕ್ಕೆ ಸಜ್ಜುಗೊಳಿಸಲು ‘ಕೌಶಲ್ಯ ಹಾಗೂ ಸೃಜನಶೀಲ ಇಲಾಖೆ' ಆರಂಭಿಸಿದೆ.
ಮುಖ್ಯಮಂತ್ರಿ ಅವರೇ ಮುಖ್ಯಸ್ಥರಾಗಿರುವ ಈ ಇಲಾಖೆ ಅಧೀನದಲ್ಲಿ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದ್ದು, ಈ ಸಂಸ್ಥೆ ಮೊದಲ ಪ್ರಯತ್ನವಾಗಿ ಸೇನೆಗೆ ಸೇರ ಬಯಸುವವರಿಗೆ ತರಬೇತಿ ನೀಡಲು ಮುಂದಾಗಿದೆ. ಪ್ರಥಮ ಹಂತದಲ್ಲಿ 1000 ಮಂದಿಯನ್ನು ಆಯ್ಕೆ ಮಾಡಿಕೊಂಡು ಅವರನ್ನು ಸೇನಾ ಪರೀಕ್ಷೆಗಳಿಗೆ ಸಿದ್ಧಪಡಿಸಲಾಗುತ್ತದೆ. ಇದು ಯಶ ಕಾಣುತ್ತಿದ್ದಂತೆ 10,000, ನಂತರ 25,000 ವರೆಗೂ ವೃದ್ಧಿಸುವ ಚಿಂತನೆ ಇದೆ. ಆ ಮೂಲಕ ದೇಶ ಕಾಯುವ ರಕ್ಷಣಾ ಕ್ಷೇತ್ರಕ್ಕೆ ಕರ್ನಾಟಕದ ಕಾಣಿಕೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ನಿಗಮದ ಮುಖ್ಯಸ್ಥರು ಹೇಳುತ್ತಾರೆ.
80 ಸಾವಿರದಲ್ಲಿ 70 ಮಂದಿ ಸೇನೆಗೆ!:
ದೇಶದಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣದಂತಹ ಉತ್ತರ ಭಾರತದ ರಾಜ್ಯಗಳನ್ನು ಹೊರತುಪಡಿಸಿದರೆ, ದಕ್ಷಿಣದ ರಾಜ್ಯಗಳಲ್ಲಿ ಸೇನೆ ಸೇರುವವರ ಸಂಖ್ಯೆ ಕಡಿಮೆ. ಪ್ರತಿ ರಾಜ್ಯಗಳಿಂದ ಇಂತಿಷ್ಟುಹುದ್ದೆಗಳನ್ನು ತುಂಬಬೇಕೆಂದು ಭೂಸೇನಾ ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಇದಕ್ಕೆ ಉತ್ತರದ ರಾಜ್ಯಗಳಿಂದ ಶೇ.35ರಷ್ಟುನೇಮಕವಾಗುತ್ತಾರೆ. ಆದರೆ ದಕ್ಷಿಣದ ರಾಜ್ಯಗಳಲ್ಲಿ ಶೇ.5ರಷ್ಟುನೇಮಕವಾದರೆ ಹೆಚ್ಚು. ಅದರಲ್ಲೂ ಕರ್ನಾಟಕದಲ್ಲಿ ಸೇನೆ ಸೇರುವವರು ಬೆರಳೆಣಿಕೆಯಷ್ಟುಮಾತ್ರ. ಪ್ರತಿ ವರ್ಷ ಭೂಸೇನಾ ಅಧಿಕಾರಿಗಳು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸೇನೆಗೆ ಸೇರುವವರನ್ನು ಆಯ್ಕೆ ಮಾಡಲು ರಾಲಿ ನಡೆಸುತ್ತಾರೆ. ರಾಜ್ಯದಲ್ಲಿ ಪ್ರತಿ ವರ್ಷ ರಾಲಿಯಲ್ಲಿ 60,000ದಿಂದ 80,000 ಪರೀಕ್ಷಾರ್ಥಿಗಳು ಭಾಗವಹಿಸುತ್ತಾರೆ. ಅವರೆಲ್ಲಾ ಸಿದ್ಧತೆ ಮತ್ತು ಆಸಕ್ತಿ ಇಲ್ಲದೆ ಬರುವುದರಿಂದ 50ರಿಂದ 70 ಮಂದಿ ಮಾತ್ರ ಆಯ್ಕೆಯಾಗುತ್ತಿದ್ದಾರೆ.
ಪ್ರತಿ ರಾಜ್ಯದಿಂದ ಇಂತಿಷ್ಟುಮಂದಿಯನ್ನು ಸೇನೆಗೆ ಸೇರಿಸಿಕೊಳ್ಳಬೇಕು ಎಂದು ಸೇನೆ ಗುರಿ ಹಾಕಿಕೊಂಡಿರುತ್ತದೆ. ಆದರೆ, ಕರ್ನಾಟಕದಿಂದ ಯಾವತ್ತೂ ಆ ಗುರಿ ಈಡೇರಿಕೆಯಾಗಿಲ್ಲ. 10 ವರ್ಷಗಳ ಹಿಂದೆ ರಾಜ್ಯದಿಂದ 300 ಮಂದಿವರೆಗೂ ಆಯ್ಕೆಯಾದ ಉದಾಹರಣೆಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಬಹಳ ಕಡಿಮೆಯಾಗಿದೆ. ಕಳೆದ ವರ್ಷ ರಾಜ್ಯಾದ್ಯಂತ ನಡೆಸಿದ ರಾಲಿಯಲ್ಲಿ ಭಾಗವಹಿಸಿದ್ದ 80 ಸಾವಿರ ಪರೀಕ್ಷಾರ್ಥಿಗಳಲ್ಲಿ 70 ಮಂದಿ ಮಾತ್ರ ಆಯ್ಕೆಯಾಗಿದ್ದರು. ಅಂದರೆ ರಾಜ್ಯದಲ್ಲಿ ಯುವಜನತೆಯಲ್ಲಿ ಸೇನೆಗೆ ಸೇರುವ ಆಸಕ್ತಿ ಕಡಿಮೆ. ಜತೆಗೆ ಸುಲಭ ಮಾರ್ಗದ ನೌಕರಿಗೆ ಹೆಚ್ಚು ಒತ್ತು. ನಗರ ಕೇಂದ್ರಿತ ಮತ್ತು ಮನೆ ಸಮೀಪದ ಕೆಲಸಗಳಿಗೆ ಒತ್ತು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೇನೆಗೆ ಸೇರುವವರನ್ನು ಉತ್ತೇಜಿಸಲು ಸರ್ಕಾರದ ನೂತನ ಸಂಸ್ಥೆಯಾದ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಯುವಕ, ಯುವತಿಯರಿಗೆ 2 ತಿಂಗಳ ಸೇನಾ ಸಿಬ್ಬಂದಿ ತರಬೇತಿ ನೀಡಲು ನಿರ್ಧರಿಸಲಾಗಿದೆ.
