ಕರಾವಳಿ ಭಾಗದಲ್ಲಿ ಆರ್‌ಎಸ್ಎಸ್ ಕಾರ್ಯಕರ್ತರ ಹತ್ಯೆಯಾಗ್ತಿದೆ. ಹೀಗಾಗಿ ಸಚಿವ ರಾಮನಾಥ್ ರೈ ರಾಜೀನಾಮೆಗೆ ಆಗ್ರಹಿಸಿ ಸೆಪ್ಟೆಂಬರ್ 7 ರಂದು ಬಿಜೆಪಿ ಮಂಗಳೂರ ಚಲೋ ಹಮ್ಮಿಕೊಂಡಿದೆ.
ಬೆಂಗಳೂರು(ಸೆ.03): ಕರಾವಳಿ ಭಾಗದಲ್ಲಿ ಆರ್ಎಸ್ಎಸ್ ಕಾರ್ಯಕರ್ತರ ಹತ್ಯೆಯಾಗ್ತಿದೆ. ಹೀಗಾಗಿ ಸಚಿವ ರಾಮನಾಥ್ ರೈ ರಾಜೀನಾಮೆಗೆ ಆಗ್ರಹಿಸಿ ಸೆಪ್ಟೆಂಬರ್ 7 ರಂದು ಬಿಜೆಪಿ ಮಂಗಳೂರ ಚಲೋ ಹಮ್ಮಿಕೊಂಡಿದೆ.
ಬೈಕ್ ರ್ಯಾಲಿ ಮೂಲಕ ಮಂಗಳೂರಿಗೆ ತೆರಳುವ ಬಿಜೆಪಿ ಬಿಜೆಪಿ ಕಾರ್ಯಕರ್ತರು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. . ಮೈಸೂರು ಮತ್ತು ಮಡಿಕೇರಿಯಿಂದ ಬೈಕ್ ರ್ಯಾಲಿ ಮೂಲಕ ತೆರಳುವ ಬಿಜೆಪಿ ಕಾರ್ಯಕರ್ತರಿಗೆ ಸುಳ್ಯದ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಸೆ. ೬ರ ರಾತ್ರಿ ಉಳಿದುಕೊಳ್ಳಲು ಬಿಜೆಪಿ ವ್ಯವಸ್ಥೆ ಕಲ್ಪಿಸಿದೆ. ಆದ್ರೆ ಬಿಜೆಪಿ ಬೈಕ್ ರ್ಯಾಲಿ ಯಶಸ್ವಿಯಾಗದಂತೆ ತಡೆಯಲು ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದೆ.
ಬಿಜೆಪಿ ಬೈಕ್ ರ್ಯಾಲಿ ಯಶಸ್ವಿಯಾಗದಂತೆ ತಡೆಯಲು ಗೃಹ ಸಚಿವ ರಾಮಲಿಂಗಾರೆಡ್ಡಿಗೆ ಸೂಚಿಸಿರುವ ಸಿಎಂ, ಪೊಲೀಸ್ ಅಧಿಕಾರಿಗಳೂ ಕೂಡ ಬೈಕ್ ರ್ಯಾಲಿ ತಡೆಯುವಂತೆ ಆದೇಶಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಯ ನೆಪದಲ್ಲಿ ಬೈಕ್ ರ್ಯಾಲಿ ಮೂಲಕ ಮಂಗಳೂರಿಗೆ ತೆರಳುವ ಬಿಜೆಪಿ ಕಾರ್ಯಕರ್ತರಿಗೆ ರಾತ್ರಿ ತಂಗಲು ಅವಕಾಶವಾಗದಂತೆ ನೋಡಿಕೊಳ್ಳುವಂತೆ ಸುಳ್ಯ ಪೊಲೀಸರಿಗೆ ರಾಜ್ಯ ಸರ್ಕಾರ ತಾಕೀತು ಮಾಡಿದೆ.
ಹೀಗಾಗಿ ಕಲಾ ಮಂದಿರ ಅಧ್ಯಕ್ಷರಿಗೆ ಪತ್ರ ಬರೆದಿರುವ ಸುಳ್ಯ ಪೊಲೀಸ್ ಠಾಣಾಧಿಕಾರಿ, ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ನೀಡದಂತೆ ತಾಕೀತು ಮಾಡಿದ್ದಾರೆ.
