ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಕೊಡುಗೆಯಾಗಿ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ನೀಡುವ ಸಿಹಿ ಸುದ್ದಿ ನೀಡಿತ್ತು. ಅದರಂತೆ ಎಲ್ಲಾ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯು ಸಿಕ್ತು. ಆದ್ರೆ,ಅದ್ಯಾವ ಜನ್ಮದಲ್ಲಿ ಬಿಎಂಟಿಸಿ ನೌಕರರು ಪಾಪ ಮಾಡಿದ್ರೋ ಗೊತ್ತಿಲ್ಲ,ಇಲ್ಲಿವರೆಗೂ ತುಟ್ಟಿ ಭತ್ಯೆ ಭಾಗ್ಯ ಸಿಕ್ಕೇ ಇಲ್ಲ. ಈಗ ಮತ್ತೆ ರಾಜ್ಯ ಸರ್ಕಾರ 2017 ರ ತುಟ್ಟಿ ಭತ್ಯೆ ಘೋಷಣೆ ಮಾಡಲು ಹೊರಟ್ಟಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.
ಬೆಂಗಳೂರು( ಮಾ.01): ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಕೊಡುಗೆಯಾಗಿ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ನೀಡುವ ಸಿಹಿ ಸುದ್ದಿ ನೀಡಿತ್ತು. ಅದರಂತೆ ಎಲ್ಲಾ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯು ಸಿಕ್ತು. ಆದ್ರೆ,ಅದ್ಯಾವ ಜನ್ಮದಲ್ಲಿ ಬಿಎಂಟಿಸಿ ನೌಕರರು ಪಾಪ ಮಾಡಿದ್ರೋ ಗೊತ್ತಿಲ್ಲ,ಇಲ್ಲಿವರೆಗೂ ತುಟ್ಟಿ ಭತ್ಯೆ ಭಾಗ್ಯ ಸಿಕ್ಕೇ ಇಲ್ಲ. ಈಗ ಮತ್ತೆ ರಾಜ್ಯ ಸರ್ಕಾರ 2017 ರ ತುಟ್ಟಿ ಭತ್ಯೆ ಘೋಷಣೆ ಮಾಡಲು ಹೊರಟ್ಟಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.
ರಾಜ್ಯ ಸರ್ಕಾರ ದೀಪಾವಳಿ ಹಬ್ಬಕ್ಕೆ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಹೆಚ್ಚಿಸುವ ಮೂಲಕ ಬಂಪರ್ ಕೊಡುಗೆ ನೀಡಿತ್ತು. ಶೇ.4.25ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದರಿಂದ ಶೇ.36ರಷ್ಟಿದ್ದ ಡಿಎ ಶೇ. 40.25ಕ್ಕೆ ಏರಿಕೆಯಾಗಿದೆ ಅಂತಾ ಬಿಎಂಟಿಸಿ ನೌಕರರು ಖುಷ್ ಆಗಿದ್ರು.ಆದ್ರೆ, ಆ ಸಿಹಿ ಸುದ್ದಿ ಬಿಎಂಟಿಸಿ ನೌಕರರಿಗೆ ಕೇವಲ ಸುದ್ದಿಯಾಗೆ ಉಳಿದಿದೆ. ರಾಜ್ಯದ ಎಲ್ಲಾ ನೌಕರರಿಗೆ ತುಟ್ಟಿ ಭತ್ಯೆ ನೀಡಲಾಗಿದೆ, ಆದರೆ ಬಿಎಂಟಿಸಿ ನೌಕರರಿಗೆ ಮಾತ್ರ ಇನ್ನೂ ಸಿಕ್ಕಿಲ್ಲ.
ಒಟ್ಟು 35 ಸಾವಿರ ನೌಕರರು ಬಿಎಂಟಿಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 2015,2016 ನೇ ಸಾಲಿನಲ್ಲಿ ಸಿಗಬೇಕಾದ ಬೋನಸ್ ಸಿಗದೆ ನೌಕರರು ಪರದಾಡುತ್ತಿದ್ದರು. ಈಗ ತುಟ್ಟಿ ಭತ್ಯೆ ಇಲ್ಲದೆ ಇನ್ನಷ್ಟು ತೊಂದರೆಗೆ ಸಿಲುಕಿದ್ದಾರೆ. ನೌಕರರ ಬೆಸಿಕ್ ವೇತನದ ಆಧಾರದ ಮೇಲೆ ತುಟ್ಟಿ ಭತ್ಯೆ ನೀಡಲಾಗುತ್ತೆ . ಅಂದ್ರೆ, 35 ಸಾವಿರ ಬಿಎಂಟಿಸಿ ನೌಕರರಿಗೆ ತಿಂಗಳಿಗೆ 35 ರಿಂದ 40 ಲಕ್ಷ ರೂಪಾಯಿ ತುಟ್ಟಿ ಭತ್ಯೆಗೆ ಪಾವತಿಸಿ ಬೇಕು. ಆದ್ರೆ ಬಿಎಂಟಿಸಿ ಅಧಿಕಾರಿಗಳು ಆ ಕೆಲಸ ಮಾಡದೇ, ಕಣ್ಮುಚ್ಚಿ ಕುಳತ್ತಿದ್ದಾರೆ. ಇತ್ತ ನೌಕರರು ಬೋನಸ್ ಇಲ್ಲದೆ ,ತುಟ್ಟಿ ಭತ್ಯೆ ಇಲ್ಲದೆ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ..
