ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಭಾಗಗಳನ್ನು ಡಿನೋಟಿಫೈ ಮಾಡಿದರೆ, ಯಾವುದೇ ಬೈಪಾಸ್ ನಿರ್ಮಿಸದೆ ರಾಷ್ಟ್ರೀಯ ಹೆದ್ದಾರಿಯ ಮಾನದಂಡಗಳನ್ವಯ ಅವುಗಳನ್ನು ಅಭಿವೃದ್ಧಿ ಮತ್ತು ನಿರ್ವಹಣೆ ಮಾಡಲಾಗುವುದಲ್ಲದೆ, ಸಂಚಾರ ವ್ಯವಸ್ಥೆಯ ಲ್ಲಿಡಲು ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳಿಂದ 1 ಕಿಲೋ ಮೀಟರ್‌ಗೆ 8 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಸಿದ್ಧವಿರುವುದಾಗಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆದು ಸ್ಪಷ್ಟಪಡಿಸಿದೆ.

ಬೆಂಗಳೂರು(ಆ.04): ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಭಾಗಗಳನ್ನು ಡಿನೋಟಿಫೈ ಮಾಡಿದರೆ, ಯಾವುದೇ ಬೈಪಾಸ್ ನಿರ್ಮಿಸದೆ ರಾಷ್ಟ್ರೀಯ ಹೆದ್ದಾರಿಯ ಮಾನದಂಡಗಳನ್ವಯ ಅವುಗಳನ್ನು ಅಭಿವೃದ್ಧಿ ಮತ್ತು ನಿರ್ವಹಣೆ ಮಾಡಲಾಗುವುದಲ್ಲದೆ, ಸಂಚಾರ ವ್ಯವಸ್ಥೆಯ ಲ್ಲಿಡಲು ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳಿಂದ 1 ಕಿಲೋ ಮೀಟರ್‌ಗೆ 8 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಸಿದ್ಧವಿರುವುದಾಗಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆದು ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಹೆದ್ದಾರಿ 4 ಮತ್ತು 7ನ್ನು ಡಿನೋಟಿಫೈ ಮಾಡದ ಕಾರಣ ಮುಂದಿಟ್ಟುಕೊಂಡು ತಮಗೆ ಮಂಜೂರು ಮಾಡಿದ್ದ ಮದ್ಯ ಮಾರಾಟ ಪರವಾನಗಿಯನ್ನು ನವೀಕರಿಸದ ಸರ್ಕಾರದ ಕ್ರಮ ಪ್ರಶ್ನಿಸಿ ನಗರದ ರೆಸಿಡೆನ್ಸಿ ರಸ್ತೆ, ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿನ ಬಾರ್ ಹಾಗೂ ರೆಸ್ಟೋರೆಂಟ್‌ಗಳು ಹೈಕೋಟ್ ಗೆರ್ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ಹಿಂದಿನ ವಿಚಾರಣೆ ವೇಳೆ ಕೇಂದ್ರ ಸರ್ಕಾರಿ ವಕೀಲರು ಜೂನ್ 15ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಬೆಂಗಳೂರು ನಗರದಲ್ಲಿ ಹಾದು ಹೋಗುವ ಎನ್. ಎಚ್ 4ರಲ್ಲಿ ಮತ್ತು 7ರಲ್ಲಿನ 76.63 ಕಿ. ಮೀ ರಸ್ತೆಯನ್ನು ಡಿನೋಟಿಫೈ ಮಾಡಲು ಕೋರಿದೆ.

ಆದರೆ, ರಾಜ್ಯ ಸರ್ಕಾರಕ್ಕೆ ಈ ಸಂಬಂಧ ಕೆಲವೊಂದು ವಿವರಣೆಗಳನ್ನು ನೀಡುವಂತೆ ಸೂಚಿಸಲಾಗಿದೆ ಎಂದು ಕೋರ್ಟ್‌ಗೆ ತಿಳಿಸಿದ್ದರು.

ಇದನ್ನು ಪರಿಗಣಿಸಿದ್ದ ನ್ಯಾಯಪೀಠವು ಕೇಂದ್ರವು ಕೋರಿರುವ ವಿವರಣೆಗಳನ್ನು ನೀಡುವಂತೆ ರಾಜ್ಯಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ರಾಜ್ಯ ಸರ್ಕಾರವು ಜುಲೈ ೩ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ನಗರಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಭಾಗಗಳನ್ನು ಡಿನೋಟಿಫೈ ಮಾಡಬೇಕು. ಡಿನೋಟಿಫೈ ಮಾಡಿದ ಪಕ್ಷದಲ್ಲಿ ಬೈಪಾಸ್ ಗಳನ್ನು ನಿರ್ಮಿಸದೇ ರಾಷ್ಟ್ರೀಯ ಹೆದ್ದಾರಿಯ ಮಾನದಂಡಗಳನ್ವಯ ಅವುಗಳನ್ನು ಅಭಿವೃದ್ಧಿ ಮತ್ತು ನಿರ್ವಹಣೆ ಮಾಡಲಾಗುವುದು. ಸಂಚಾರ ವ್ಯವಸ್ಥೆಯಲ್ಲಿಡಲು ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳಿಂದ 1 ಕಿ.ಮೀಟರ್‌ಗೆ 8 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದೆ.

ಗುರುವಾರ ಈ ಪತ್ರವನ್ನು ರಾಜ್ಯ ಸರ್ಕಾರಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್ .ಪೊನ್ನಣ್ಣ ಅವರು ಹೈಕೋರ್ಟ್‌ಗೆ ಸಲ್ಲಿಸಿದರು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕದಸ್ಯ ಪೀಠ, ರಾಜ್ಯ ಸರ್ಕಾರ ನೀಡಿರುವ ಈ ಭರವಸೆಯನ್ನು ಕೇಂದ್ರ ಸರ್ಕಾರವು ಯಾವುದೇ ವಿಳಂಬ ಮಾಡದೇ ಪರಿಶೀಲಿಸಬೇಕು. ತದನಂತರ ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯ ‘ಭಾಗಗಳನ್ನು ಡಿನೋಟಿಫೈ ಮಾಡುವ ಕುರಿತು ಆ.17ರೊಳಗೆ ತೀರ್ಮಾನ ತೆಗೆದುಕೊಂಡು ಕೋರ್ಟ್‌ಗೆ ತಿಳಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.