ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಉಡುಗೊರೆಯೊಂದು ದೊರೆಯುತ್ತಿದೆ. ದೀಪಾವಳಿ ಈ ಸಂದರ್ಭದಲ್ಲಿಯೇ ಸರ್ಕಾರ ತನ್ನ ನೌಕರರಿಗೆ ಶೂಭ ಸುದ್ದಿಯನ್ನು ನೀಡಿದೆ. 

ಪಾಟ್ನಾ : ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು ಇದೇ ವೇಳೆ ಸರ್ಕಾರಿ ನೌಕರರಿಗೆ ಬಂಪರ್ ಉಡುಗೊರೆ ದೊರೆಯುತ್ತಿದೆ. 

ಉದ್ಯೋಗಿಗಳನ್ನು ಚಿಯರ್ ಅಪ್ ಮಾಡುವ ಸಲುವಾಗಿ ಬಿಹಾರ ಸರ್ಕಾರ ತನ್ನ ನೌಕರರಿಗೆ 7ನೇ ವೇತನ ಆಯೋಗದ ಅನ್ವಯದಂತೆ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿದೆ. 

ಜುಲೈ 1ರಿಂದಲೇ ಅನ್ವಯಯವಾಗುವಂತೆ ಶೇ.2ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿದ್ದಾಗಿ ಸರ್ಕಾರದ ಕಾರ್ಯದರ್ಶಿ ಸಂಜಯ್ ಕುಮಾರ್ ಹೇಳಿದ್ದಾರೆ. 

ಸರ್ಕಾರಿ ನೌಕರರು, ಪಿಂಚಣಿದಾರರು, ಪಿಂಚಣಿ ಪಡೆಯುವ ಕುಟುಂಬಸ್ಥರು ಇದಕ್ಕೆ ಅರ್ಹರಾಗಿರುತ್ತಾರೆ. ಇದರಿಂದ ಸರ್ಕಾರಕ್ಕೆ 419 ಕೋಟಿ ಹೊರೆಯಾಗಲಿದೆ. 

ಇನ್ನು ಇತ್ತ ಉತ್ತರ ಪ್ರದೇಶ ಸರ್ಕಾರವೂ ಕೂಡ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಚಿಂತನೆ ನಡೆಸಿದೆ.