ಗೋವಾ ಸರ್ಕಾರದ ದೌರ್ಜನ್ಯದಿಂದಾಗಿ ವಸತಿ ಹೀನರಾಗಿದ್ದ ಗೋವಾ ಕನ್ನಡಿಗರಿಗೆ ಮೂರು ದಿನದಲ್ಲಿ ವಸತಿ ಭಾಗ್ಯ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಬೆಂಗಳೂರು (ಅ.10): ಗೋವಾ ಸರ್ಕಾರದ ದೌರ್ಜನ್ಯದಿಂದಾಗಿ ವಸತಿ ಹೀನರಾಗಿದ್ದ ಗೋವಾ ಕನ್ನಡಿಗರಿಗೆ ಮೂರು ದಿನದಲ್ಲಿ ವಸತಿ ಭಾಗ್ಯ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಬೈನಾ ಬೀಚ್ ಕನ್ನಡಿಗರಿಗೆ ವಸತಿ ನೀಡುವ ಬಗ್ಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಇನ್ನು ಮೂರು ದಿನದಲ್ಲಿ ಬೈನಾ ಬೀಚ್ ಕನ್ನಡಿಗರಿಗೆ ವಸತಿ ಕಲ್ಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಅಲ್ಲಿ 30 ಎಕರೆ ಜಮೀನು ಖರೀದಿಸಿ ಕನ್ನಡಿಗರಿಗೆ ನೀಡಲಾಗುವುದು ಎಂದು ಹೇಳಿದ್ರು. ಜಮೀನು ಪರಿಶೀಲನೆಗೆ ನಮ್ಮ ಪ್ರಾಧಿಕಾರದ ಕಾರ್ಯದರ್ಶಿ ಗೋವಾಕ್ಕೆ ತೆರಳಲಿದ್ದಾರೆಂದು ಚಿಂಚನಸೂರ್ ಹೇಳಿದರು.
