ನ.12ರಂದು ಫೇಸ್ಬುಕ್`ನಲ್ಲಿ ಎಲ್ಲಿಗೆ ಬಂತು ನಿಮ್ಮ ಸ್ಟೀಲ್ ಫ್ಲೈಓವರ್ ಕಥೆ’ ‘ಮೋದಿ ಹೊಡೆತಕ್ಕೆ ಸ್ಟೀಲ್ ಫ್ಲೈಓವರ್ ಮಾಯ’ ಹರಿದಾಡಬೇಕಾಗಿದ್ದ, ಹಂಚಬೇಕಾಗಿದ್ದ ಕಪ್ಪುಹಣ ಮಾಯ. ಹೇಗಿದೆ ಗುನ್ನಾ, ಹೋರಾಟಗಾರರೇ ಹೇಳಿಕೊಳ್ಳಿ ನಿಮ್ಮ ಹೋರಾಟಕ್ಕೆ ಸಂದ ಜಯ ಎಂಬ ಸ್ಟೇಟಸ್ ಬರೆದುಕೊಂಡಿದ್ದರು. ರಾಘವೇಂದ್ರರ ಹರಿತ, ವ್ಯಂಗ್ಯಭರಿತ ಬರಹ, ಕಲಾಸಿಪಾಳ್ಯದ ಸ್ಟೇಷನ್ ಮೇಲೆ ಕಣ್ಣಿಟ್ಟರ ಗಮನಸೆಳೆಯಿತು.
ಬೆಂಗಳೂರು(ನ.14): ವಿವಾದಿತ ಸ್ಟೀಲ್ ಫ್ಲೈಓವರ್ ವಿರುದ್ಧ ಫೇಸ್ ಬುಕ್ನಲ್ಲಿ ಬರೆದುಕೊಂಡ ಕಲಾಸಿಪಾಳ್ಯ ಇನ್ಸ್ಪೆಕ್ಟರ್ ರಾಘವೇಂದ್ರ ಈಗ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನ.12ರಂದು ಫೇಸ್ಬುಕ್`ನಲ್ಲಿ ಎಲ್ಲಿಗೆ ಬಂತು ನಿಮ್ಮ ಸ್ಟೀಲ್ ಫ್ಲೈಓವರ್ ಕಥೆ’ ‘ಮೋದಿ ಹೊಡೆತಕ್ಕೆ ಸ್ಟೀಲ್ ಫ್ಲೈಓವರ್ ಮಾಯ’ ಹರಿದಾಡಬೇಕಾಗಿದ್ದ, ಹಂಚಬೇಕಾಗಿದ್ದ ಕಪ್ಪುಹಣ ಮಾಯ. ಹೇಗಿದೆ ಗುನ್ನಾ, ಹೋರಾಟಗಾರರೇ ಹೇಳಿಕೊಳ್ಳಿ ನಿಮ್ಮ ಹೋರಾಟಕ್ಕೆ ಸಂದ ಜಯ ಎಂಬ ಸ್ಟೇಟಸ್ ಬರೆದುಕೊಂಡಿದ್ದರು. ರಾಘವೇಂದ್ರರ ಹರಿತ, ವ್ಯಂಗ್ಯಭರಿತ ಬರಹ, ಕಲಾಸಿಪಾಳ್ಯದ ಸ್ಟೇಷನ್ ಮೇಲೆ ಕಣ್ಣಿಟ್ಟರ ಗಮನಸೆಳೆಯಿತು.
ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನೇ ಟೀಕಿಸಿದ ರಾಘವೇಂದ್ರದ ವಿರುದ್ಧ ಗೃಹ ಸಚಿವರು ಕೆಂಡಾಮಂಡಲರಾದರು. ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ತಿಳಿದುಬಂದಿದೆ. ಸರ್ಕಾರವನ್ನು ಟೀಕೆ ಮಾಡಬಾರದೆಂದು ಕಾನೂನಿನಲ್ಲೇ ಇದೆ ಅಂತ ಗುಡುಗಿದರು.