ರಾಜ್ಯ ಸರ್ಕಾರದಿಂದ ಸಲಪಾಡ್ ಗೆ ಬಿಡುಗಡೆ ಭಾಗ್ಯ?ನಲಪಾಡ್ ಜಾಮೀನು ಮಂಜೂರು ಕುರಿತು ಟ್ವಿಟಿಗರ ಆಕ್ರೋಶನಲಪಾಡ್ ಜಾಮೀನು ವಿಚಾರದಲ್ಲಿ ರಾಜ್ಯ ಸರ್ಕಾರ ಕೈವಾಡಸಾಮಾಜಿಕ ಜಾಲಥಾಣಗಳಲ್ಲಿ ಭಾರೀ ಆಕ್ರೋಶ
ಬೆಂಗಳೂರು(ಜೂ.14): ವಿದ್ವತ್ ಹಲ್ಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಮೊಹ್ಮದ್ ಹ್ಯಾರಿಸ್ ಪುತ್ರ ಮೊಹ್ಮದ್ ನಲಪಾಡ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸತತ 116 ದಿನಗಳ ಕಾಲ ಜೈಲಿನಲ್ಲಿದ್ದ ನಲ್ಪಾಡ್ ಷರತ್ತುಬದ್ದ ಜಾಮೀನು ಮಂಜೂರು ಮಾಡಲಾಗಿದೆ.
ಆದರೆ ನಲಪಾಡ್ ಜಾಮೀನು ವಿಚಾರ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವ್ಯಕ್ತಿಯೋರ್ವನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ನಲಪಾಡ್ ಗೆ ಜಾಮೀನು ಮಂಜೂರು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೇ ಮೊಹ್ಮದ್ ನಲಪಾಡ್ ಗೆ ಜಾಮೀನು ಮಂಜೂರಾಗಲು ಪ್ರಸಕ್ತ ರಾಜ್ಯ ಸರ್ಕಾರವೇ ಕಾರಣ ಎಂದು ಕೆಲವರು ಆರೋಪಿಸಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೇ ನಲಪಾಡ್ ಗೆ ಜಾಮೀನು ಮಂಜೂರಾಗಿರುವುದು ಈ ವಾದಕ್ಕೆ ಪುಷ್ಠಿ ನೀಡಿದಂತಾಗಿದೆ. ಹ್ಯಾರಿಸ್ ಗೆ ಸಚಿವ ಸ್ಥಾನದ ಬದಲಾಗಿ ಮಗನ ಬಿಡುಗಡೆ ಭಾಗ್ಯ ದೊರೆತಿದೆ ಎಂಬ ಕುಹುಕದ ಮಾತುಗಳು ಕೇಳಿ ಬರುತ್ತಿವೆ. ನೂತನ ಸರ್ಕಾರದಲ್ಲಿ ನಲಪಾಡ್ ಗೆ ಅಚ್ಛೇ ದಿನ್ ಶುರುವಾಗಿದೆ ಎಂದು ಕೆಲವರು ಕಾಲೆಳೆದಿದ್ದಾರೆ.
ಇದೇ ವೇಳೆ ಮಗ ಮೊಹ್ಮದ್ ನಲಪಾಡ್ ಗೆ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ತಂದೆ, ಕಾಂಗ್ರೆಸ್ ಶಾಸಕ ಮೊಹ್ಮದ್ ಹ್ಯಾರಿಸ್ ನಮಾಜ್ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಾಂತಿನಗರದ ತಮ್ಮ ನಿವಾಸದಲ್ಲಿ ರಂಜಾನ್ ನಿಮಿತ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದ ಹ್ಯಾರಿಸ್, ಮಗ ಬಿಡುಗಡೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ನಲಪಾಡ್ ಗೆ ಜಾಮೀನು ಮಂಜೂರಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯತಿರಿಕ್ತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಈ ಕುರಿತು ಸಮ್ಮಿಶ್ರ ಸರ್ಕಾರದ ಮೇಲೆ ಬೆರಳು ತೋರಿಸಲಾಗುತ್ತಿದೆ.
